Breaking News

ಅರಂತೋಡು-ತೊಡಿಕಾನ ಸೊಸೈಟಿಯಲ್ಲಿ ಹೊಸ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮ

Advt_Headding_Middle

ವಾಹನ ಖರೀದಿ ಸಾಲದ ಬಡ್ಡಿಯಲ್ಲಿ ಭಾರಿ ಬಡ್ಡಿ ದರ ಕಡಿತ

ಚಿನ್ನಾಭರಣ ನಗದೀಕರಣ ಯೋಜನೆ ಜಾರಿ

ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸಂಘದ ಸದಸ್ಯರಿಗೆ ಗಣೇಶ ಚತುರ್ಥಿ, ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ವಾಹನ ಖರೀದಿ ಸಾಲದ ಬಡ್ಡಿದರದಲ್ಲಿ ಭಾರಿ ರಿಯಾಯಿತಿ ಮತ್ತು ತುರ್ತು ಹಣಕಾಸಿನ ಅವಶ್ಯಕತೆಗಳಿಗಾಗಿ ಚಿನ್ನಾಭರಣ ನಗದೀಕರಣ ಯೋಜನೆಗಳನ್ನು ಘೋಷಣೆ ಮಾಡಿದೆ. ಸೆ.೦೪ ರಂದು ಹೊಸ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ವಹಿಸಿದ್ದರು. ಅರಂತೋಡು ಗ್ರಾಮ ಪಂಚಾಯತಿನ ಅಭಿವೃದ್ಧಿ ಅಧಿಕಾರಿ ಆಗಿರುವ ಜಯಪ್ರಕಾಶ್ ರವರು ದೀಪವನ್ನು ಬೆಳಗುವುದರ ಮೂಲಕ ನೂತನ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಜಯಪ್ರಕಾಶ್‌ರವರು, ಅರಂತೋಡು-ತೊಡಿಕಾನ ಸಹಕಾರಿ ಸಂಘವು ವಿನೂತನವಾಗಿ ರೈತಸ್ನೇಹಿ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ. ಸಂಘದ ಸದಸ್ಯರು ಈ ನೂತನ ಯೋಜನೆಗಳ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡು ಸ್ವ ಅಭಿವೃದ್ಧಿಯ ಜೊತೆಗೆ ಸಂಸ್ಥೆಯನ್ನು ಅಭಿವೃದ್ಧಿಗೊಳಿಸಬೇಕು ಎಂದರು. ಸಂಘದ ಅಧ್ಯಕ್ಷರು ನೂತನ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ದಯಾನಂದ ಕುರುಂಜಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್, ನಿರ್ದೇಶಕರಾದ ಚಂದ್ರಶೇಖರ ಚೋಡಿಪಣೆ, ಕುಸುಮಾಧರ ಅಡ್ಕಬಳೆ, ವಿನೋದ್ ಉಳುವಾರು, ಸಂತೋಷ್ ಚಿಟ್ಟನ್ನೂರು, ನಿಧೀಶ್ ಅರಂತೋಡು, ಸೋಮಯ್ಯ ಹೆಚ್, ಗ್ರಾಮ ಪಂಚಾಯತ್ ಸದಸ್ಯರಾದ, ಕೇಶವ ಅಡ್ತಲೆ, ಗಂಗಾಧರ ಬನ, ಸಂಘದ ಸದಸ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.