Breaking News

ಶೇಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ರಚನೆ

Advt_Headding_Middle

 

ಅಮರಮುಡ್ನೂರಿನ ಶೇಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯು ಅಧ್ಯಕ್ಷ ಮಾಧವ ಗೌಡ ಪಿಂಡಿಬನರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಪಂಚಾಯತ್ ಸದಸ್ಯ ಅಶೋಕ್ ಚೂಂತಾರು, ಸೀತಾ ಹೆಚ್, ಮೀನಾಕ್ಷಿ ಚೂಂತಾರು ರವರ ಉಪಸ್ಥಿತರಿದ್ದರು.ಈ ಸಂದರ್ಭ ನೂತನ 18 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಮಾಧವ ಗೌಡ ಪಿಂಡಿಬನ, ಉಪಾಧ್ಯಕ್ಷರಾಗಿ ಭಾರತಿ ಕುಳ್ಳಾಜೆ, ಕಾರ್ಯದರ್ಶಿಯಾಗಿ ಶಾಲಾ ಮುಖ್ಯ ಶಿಕ್ಷಕ ಪ್ರಭಾಕರ ಮಾಡಬಾಕಿಲು, ಸದಸ್ಯರುಗಳಾಗಿ ವೆಂಕಟ್ರಮಣ ಕಜೆಮೂಲೆ, ಲಕ್ಷ್ಮಿ ಕುಳ್ಳಾಜೆ, ಸುಶೀಲ ಅಜ್ಜಮೂಲೆ, ಜಗದೀಶ್ ಚೂಂತಾರು, ಶಿವರಾಮ ಕುಳ್ಳಾಜೆ, ಕ್ರಷ್ಣವೇಣಿ ಕುಳ್ಳಾಜೆ, ಮಮತಾ ಪಾಡಾಜೆ, ಅನಿತಾ ಹೊಸಮಜಲು, ಪೂರ್ಣಿಮಾ ಶೇಣಿ, ವಾರಿಜಾ ಹೊಸಮಜಲು, ಜಯಶ್ರೀ ಹೊಸಮಜಲು, ಜಯರಾಮ ಕೊಂಬೆಟ್ಟು, ಭಾಸ್ಕರ ಸೂರೆಂಗಿ, ದಯಾಮಣಿ ಶೇಣಿ, ತೇಜಾವತಿ ಕಜೆಮೂಲೆ, ಮೋಹನಾಂಗಿ ಸೂರೆಂಗಿ ಹಾಗೂ ಪದನಿಮಿತ್ತ ಸದಸ್ಯರುಗಳಾಗಿ ಅಂಗನವಾಡಿ ಕಾರ್ಯಕರ್ತೆ ಧರ್ಮಾವತಿ ದೇರಾಜೆ, ಆರೋಗ್ಯ ಸಹಾಯಕಿ ಯವರನ್ನು ಆಯ್ಕೆ ಮಾಡಲಾಯಿತು. ಶಾಲಾ ಮುಖ್ಯ ಶಿಕ್ಷಕ ಪ್ರಭಾಕರ ಮಾಡಬಾಕಿಲು ಸ್ವಾಗತಿಸಿ, ವಂದಿಸಿದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗುವ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.