Breaking News

ಪ್ರತಿ ಅಂಗಡಿಯವರು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು

Advt_Headding_Middle

 

ನಾಳೆಯಿಂದಲೇ ತೆರಳಿ ಪರಿಶೀಲನೆ :  ನ.ಪಂ.ಸಭೆಯಲ್ಲಿ ಅಧ್ಯಕ್ಷ ವಿನಯ್ ಕಂದಡ್ಕ

ನಗರದ ಪ್ರತಿ ಅಂಗಡಿ ಮಾಲಕರು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು. ಈ ಬಗ್ಗೆ ನಾಳೆಯಿಂದಲೇ ಅಧಿಕಾರಿಗಳು ಪ್ರತಿ ಅಂಗಡಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ ಎಂದು ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಹೇಳಿದ್ದಾರೆ.

ಇಂದು ನಡೆದ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು

ಇದುವರೆಗೆ ಲಸಿಕೆಯ ಕೊರತೆ ಇರುತ್ತಿತ್ತು. ಆದರೆ ಈಗ ಹಾಗಿಲ್ಲ ಸಾಕಷ್ಟು ಲಸಿಕೆ ನಮ್ಮಲ್ಲಿದೆ. ನಾವು ಹಿಂದಿನಿಂದಲೂ ನಗರದ ಎಲ್ಲಾ ಅಂಗಡಿಯವರು ಲಸಿಕೆ ಪಡೆದುಕೊಳ್ಳಬೇಕೆಂದು ಹೇಳುತ್ತ ಬರುತ್ತಿzವೆ. ಇನ್ನೂ ಹಲವು ಮಂದಿ ಪಡೆದುಕೊಂಡಿಲ್ಲ. ಆದ್ದರಿಂದ ನಾಳೆಯಿಂದಲೇ ನಮ್ಮ ಅಧಿಕಾರಿಗಳು ಪ್ರತಿ ಅಂಗಡಿಗೆ ತೆರಳಿ ಲಸಿಕೆ ಪಡೆದುಕೊಂಡಿದ್ದಾರೋ ಎಂಬುದನ್ನು ಪರಿಶೀಲಿಸುತ್ತಾರೆ. ಅವರು ಲಸಿಕೆ ಪಡೆದಿರದಿದ್ದರೆ ಅಂಗಡಿಯನ್ನು ಮುಚ್ಚಿಸಿ ಅಲ್ಲಿರುವ ಎಲ್ಲರನ್ನು ಲಸಿಕ ಕೇಂದ್ರಕ್ಕೆ ಕಳುಹಿಸಿ ಲಸಿಕೆ ಕೊಡಿಸುವ ಕಾರ್ಯ ಮಾಡುತ್ತಾರೆ ಎಂದು ಅಧ್ಯಕ್ಷ ವಿನಯ್ ಕುಮಾರ್ ಮಾಹಿತಿ ನೀಡಿದರು. ಅಧ್ಯಕ್ಷರ ಈ ನಿರ್ಧಾರಕ್ಕೆ ಸಭೆಯಲ್ಲಿ ಬೆಂಬಲ ವ್ಯಕ್ತವಾಯಿತು.
ನಗರ ಪ್ರತೀ ವಾರ್ಡ್ ವ್ಯಾಪ್ತಿಯಲ್ಲಿ ಎರಡನೇ ಡೋಸ್ ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಎಂ.ವೆಂಕಪ್ಪ ಗೌಡರು ಸಲಹೆ ನೀಡಿದರು.

ದುಗಲಡ್ಕದಲ್ಲಿ ಲಸಿಕೆ ಕೇಂದ್ರದಲ್ಲಿ ಒಬ್ಬರಿಗೆ ಏಕಕಾಲದಲ್ಲಿ ಎರಡು ಡೊಸ್ ಲಸಿಕೆ ಕೊಟ್ಟ ಘಟನೆಯನ್ನು ವೆಂಕಪ್ಪ ಗೌಡರು ನೆನಪಿಸಿದಾಗ, “ಒಮ್ಮೆ ಲಸಿಕೆ ಪಡೆದ ಯುವಕ ಮತ್ತೆ ಅಲ್ಲಿ ಕುಳಿತಿದ್ದುದು ಸರಿಯಲ್ಲ. ಆತನಿಗೆ ಅಷ್ಟು ಗೊತ್ತಾಗುವುದಿಲ್ಲವೇ?. ನಾವು ಲಸಿಕೆ ಪಡೆಯುವವರೂ ಕೂಡಾ ಜಾಗರೂಕರಾಗಿರಬೇಕು” ಎಂದು ಸದಸ್ಯೆ ಶಶಿಕಲಾ ನೀರಬಿದಿರೆ ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.