ಸರಸ್ವತಿ ಕಾಮತ್ ಮೇಲೆ ಹಲ್ಲೆ ನಡೆಸಿ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ವಜಾಕ್ಕೆ ಕಾಂಗ್ರೆಸ್ ಒತ್ತಾಯ

Advt_Headding_Middle

 

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸರಸ್ವತಿ ಕಾಮತ್‌ರ ಮೇಲೆ ನಡೆಸಿದ ಹಲ್ಲೆಯ ಕೇಸಿನ ತೀರ್ಪು ನ್ಯಾಯಲಯದಿಂದ ಪ್ರಕಟಗೊಂಡಿದ್ದು, ಶಿಕ್ಷೆಗೆ ಒಳಗಾಗಿರುವ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿಯವರನ್ನು ಮಂಡಲ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮರು ಹೆಣ್ಣನ್ನು ಮಾತೆಯೆಂದು ನಾವು ಗೌರವದಿಂದ ಕಾಣುತ್ತೇವೆ ಎಂದು ಬಿಜೆಪಿಯವರು ವೇದಿಕೆಯಲ್ಲಿ ಮಾತನಾಡುತ್ತಾರೆ.ಅವರ ಮಾತು ಅವರ ಭಾಷಣಕ್ಕೆ ಮಾತ್ರ ಸೀಮಿತ. ಜವಾಬ್ದಾರಿ ಸ್ಥಾನದಲ್ಲಿರುವ ಬಿಜೆಪಿ ಅಧ್ಯಕ್ಷರು ಮಹಿಳೆಯ ಮೇಲೆ ಹಲ್ಲೆ ನಡೆಸಿದ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಅವರಿಗೆ ನ್ಯಾಯಲಯ ಜೈಲು ಶಿಕ್ಷೆ ಪ್ರಕಟಿಸಿದೆ. ಇದು ೮ ವರ್ಷಗಳ ಕಾಲ ನಡೆದ ಹೋರಾಟಕ್ಕೆ ದೊರಕಿದ ಜಯ ಮತ್ತು ನೋವಿಗೊಳಗಾದ ಸರಸ್ವತಿ ಕಾಮತ್‌ರಿಗೆ ನ್ಯಾಯ ಸಿಕ್ಕಿದಂತಾಗಿದೆ ಎಂದು ಹೇಳಿದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಭರತ್ ಮುಂಡೋಡಿ ಮಾತನಾಡಿ ಹಿಂದೆ ಘಟನೆ ನಡೆದಾಗ ಅಂದಿನ ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕ ರೀತಿಯಲ್ಲಿ ಕೆಲಸ ನಿರ್ವಹಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ್ದಾರೆ. ಈಗಿನ ಪೊಲೀಸರು ಅದೇ ಕೆಲಸವನ್ನು ಮಾಡಿ ಶಿಕ್ಷೆಗೆ ಒಳಗಾಗಿರುವವರನ್ನು ಜೈಲಿಗಟ್ಟುವ ಕೆಲಸ ಮಾಡಬೇಕು. ಬಿಜೆಪಿಯವರಿಗೆ ಮಹಿಳೆಯರ ಬಗ್ಗೆ ನಿಜವಾಗಿಯೂ ಪೂಜನೀಯ ಭಾವನೆ ಇದ್ದರೆ ಶಿಕ್ಷೆಗೊಳಗಾಗಿರುವ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿಯವರನ್ನು ಮಂಡಲ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು. ಪಕ್ಷದವರು ವಜಾ ಮಾಡದಿದ್ರೂ ಕಂಜಿಪಿಲಿಯವರು ನೈತಿಕತೆಯಿಂದ ರಾಜೀನಾಮೆ ನೀಡಬೇಕು ಎಂದು ಅವರು ಹೇಳಿದರು.
ಮಾಜಿ ಜಿ.ಪಂ. ಸದಸ್ಯೆ ಸರಸ್ವತಿ ಕಾಮತ್ ಮಾತನಾಡಿ ಯಾವುದೇ ಪಕ್ಷದವನಾದರೂ ಇಂತಹ ನೀಚ ಕೆಲಸವನ್ನು ಮಾಡಬಾರದು. ಹೆಣ್ಣು ಮಕ್ಕಳಿಗೆ ಯಾವತ್ತೂ ಗೌರವ ಕೊಡಬೇಕು. ನನ್ನ ಮೇಲೆ ನಡೆದ ಹಲ್ಲೆ ಮತ್ತು ಮಾನಸಿಕ ದೌರ್ಜನ್ಯದಿಂದ ನಾನು ಬಹಳ ನೊಂದಿದ್ದೆ. ಅಂದು ನಮ್ಮ ಜೀವ ಉಳಿದದ್ದೆ ಪುಣ್ಯ. ಅಂದಿನಿಂದ ಇಂದಿನವರೆಗೂ ಆ ಘಟನೆಯಿಂದ ನಾನು ಬಹಳ ನೊಂದಿದ್ದೇನೆ. ಅಂದು ನಮ್ಮ ಮೇಲೆ ಸುಳ್ಳು ಕೇಸ್ ದಾಖಲು ಮಾಡಿದ್ದರು. ಆದರೂ ನ್ಯಾಯಾಂಗ ವ್ಯವಸ್ಥೆಯಡಿಯಲ್ಲಿ ಹೆಣ್ಣು ಮಕ್ಕಳಿಗೆ ಸಿಗುವ ಗೌರವ ಸಿಕ್ಕಿದಂತಾಗಿದೆ. ಯಾರು ಅಪರಾಧಿ ಸ್ಥಾನದಲ್ಲಿದ್ದಾರೋ ಅವರಿಗೆ ತಕ್ಕ ಶಿಕ್ಷೆ ಆಗಿದೆ. ಈಗಾಗಲೇ ೮ ವರ್ಷ ಹೋರಾಟ ಮಾಡಿದ್ದೇನೆ. ಮುಂದೆಯೂ ಹೋರಾಟ ಮಾಡುತ್ತೇನೆ. ಮಹಿಳೆ ತಾಯಿಯೆಂದು ಹೇಳುವ ಪಕ್ಷದವರಿಗೆ ಅಂದು ನನ್ನ ಮೇಲೆ ಹಲ್ಲೆ ನಡೆಸಿದಾಗ ನಾನು ಒಬ್ಬಳು ತಾಯಿಯಾಗಿ ಅವರಿಗೆ ಕಾಣಲಿಲ್ಲವೆ ಎಂದು ಪ್ರಶ್ನಿಸಿದ ಅವರು ಅಂದು ನನ್ನ ಮೇಲೆ ಹಲ್ಲೆ ನಡೆದಾಗ ಬಿಜೆಪಿಯ ಆಶಾ ತಿಮ್ಮಪ್ಪರು ಸರಸ್ವತಿ ಕಾಮತ್ ಹೋದಲೆಲ್ಲ ಗಲಾಟೆಯಾಗುತ್ತದೆ ಎಂದು ಹೇಳಿದ್ದರು. ಇಂದು ನ್ಯಾಯಲಯವೇ ಮಹಿಳೆಯ ಮೇಲೆ ಹಲ್ಲೆ ಮಾಡಿದಂತಹ ಬಿಜೆಪಿ ಪಕ್ಷದ ಅಧ್ಯಕ್ಷರಿಗೆ ಜೈಲು ಶಿಕ್ಷೆ ನೀಡಿದೆ. ಇಂತಹ ತೀರ್ಪು ಬಂದ ಮೇಲೂ ಆಶಾ ತಿಮ್ಮಪ್ಪರಿಗೆ ಆ ಪಕ್ಷದಲ್ಲಿ ಕೆಲಸ ಮಾಡಲು ನಾಚಿಕೆಯಾಗುವುದಿಲ್ಲವೆ ಎಂದು ಸರಸ್ವತಿ ಕಾಮತ್ ಹೇಳಿದರು.
ಅಂದು ಚುನಾವಣೆಯ ಸಂದರ್ಭದಲ್ಲಿ ನನ್ನ ಮೇಲೆಯೂ ಹಲ್ಲೆ ಆಗಿತ್ತು. ನನ್ನ ಜನಿವಾರವನ್ನು ಎಳೆದರು. ನನ್ನ ಹುಡುಗರ ಬಟ್ಟೆಯನ್ನು ಬಿಚ್ಚಿಸಿ, ನಮ್ಮವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಅಂದು ರೆಂಜಾಳ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯುತ್ತಿತ್ತು. ಅವತ್ತೇ ನಾನು ದೇವಸ್ಥಾನದಲ್ಲಿ ಬೇಡಿಕೊಂಡೆ ಇದರ ಪ್ರಾಯಶ್ಚಿತ ತಪ್ಪು ಮಾಡಿದವರಿಗೆ ದೇವರು ನೀಡಲಿ, ಇಂದು ದೇವರು ತಪ್ಪಿತಸ್ಥರಿಗೆ ನ್ಯಾಯಲಯದ ಮೂಲಕ ಶಿಕ್ಷೆ ನೀಡಿದ್ದಾನೆ ಎಂದು ಜಿ.ಪಂ. ಮಾಜಿ ಸದಸ್ಯ ಚಂದ್ರಶೇಖರ ಕಾಮತ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್. ಜಯಪ್ರಕಾಶ್ ರೈ, ಪ್ರಮುಖರಾದ ಎನ್.ಎಸ್.ವಿಠಲ್‌ದಾಸ್, ಅನಸೂಯ, ಹಮೀದ್ ಕುತ್ತಮೊಟ್ಟೆ, ಸಂಜಯ್ ಬೆಳ್ಳಾರೆ, ಶಾಫಿ ಕುತ್ತಮೊಟ್ಟೆ, ಸೋಮಶೇಖರ ಕೊಂಗಾಜೆ, ಮಹಮ್ಮದ್ ಕುಂಞಿ ಗೂನಡ್ಕ, ರಾಜೀವಿ ಆರ್. ರೈ, ಎನ್.ಎಸ್.ವೆಂಕಪಪ್ ಗೌಡ, ಎಸ್.ಸಂಶುದ್ದೀನ್, ಅನಿಲ್ ರೈ, ಧರ್ಮಪಾಲ ಕೊಂಗಾಜೆ, ಚರಣ್ ಕಾಯರ, ಶಕುಂತಲಾ ನಾಗರಾಜ್, ಹರೀಶ್ ಕೊಡಪಾಲ, ಜಯರಾಮ ಹೊಸೊಳಿಕೆ, ಭವಾನಿಶಂಕರ್ ಕಲ್ಮಡ್ಕ, ಸುರೇಶ್ ಅಮೈ, ಕೆ.ಎಂ.ಮುಸ್ತಫಾ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.