ವೀಕೆಂಡ್ ಕರ್ಫ್ಯೂ ರದ್ದುಗೊಳಿಸಲು ಸದಸ್ಯರ ಒತ್ತಾಯ

Advt_Headding_Middle

 

ಮುಂದಿನ ವಾರದಿಂದ ತೆರವಾಗದಿದ್ದರೆ ವರ್ತಕರಿಗೆ ನಾವು ಬೆಂಬಲ ನೀಡುತ್ತೇವೆ : ವೆಂಕಪ್ಪ ಗೌಡ

ಪಾಸಿಟಿವಿಟಿ ರೇಟ್ ಕಡಿಮೆ ಆದ ಕೂಡಲೇ ಜನರಿಗೆ ಅನುಕೂಲ : ಮುಖ್ಯಾಧಿಕಾರಿ

ದ.ಕ. ಜಿಲ್ಲೆಯಲ್ಲಿ ಮಾಡಲಾಗಿರುವ ವೀಕೆಂಡ್ ಕರ್ಫ್ಯೂ ಅವೈಜ್ಞಾನಿಕ. ಅದನ್ನು ರದ್ದು ಮಾಡಬೇಕು ಎಂದು ನ.ಪಂ. ವಿಪಕ್ಷ ಸದಸ್ಯರು ಆಗ್ರಹಿಸಿದ ಘಟನೆ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಎಂ.ವೆಂಕಪ್ಪ ಗೌಡರು, “ವೀಕೆಂಡ್ ಕರ್ಫ್ಯೂ ಅವೈಜ್ಞಾನಿಕ. ಇದರಿಂದ ತೊಂದರೆಯೇ ಹೆಚ್ಚು. ವಾರವಿಡೀ ಕೆಲಸ ಮಾಡಿ ಶನಿವಾರ ಪೇಟೆಗೆ ಬಂದು ಅಗತ್ಯ ವಸ್ತು ಖರೀದಿಸೋಣ ಎಂದರೂ ಅವಕಾಶ ಇಲ್ಲ ವೆಂಕದರೆ ಜೀವನ ಮಾಡುವುದು ಹೇಗೆ. ಮೊನ್ನೆ ಸಚಿವರು ಮೀನುಗಾರಿಕಾ ಇಲಾಖೆಯ ಕಾರ್ಯಾಗಾರ ಮಾಡಿದ್ದರು ಆ ದಿನ ವೀಕೆಂಡ್ ಕರ್ಫ್ಯೂ ಅಲ್ಲವೇ? ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಬಮದು ಜನ ಸೇರಿಸಿ ಸಭೆ ಮಾಡುತ್ತಾರೆ ಅದಕ್ಕೆ ಅವಕಾಶ ಇದೆ. ಸಾಮಾನ್ಯ ಜನರಿಗೆ ಮಾತ್ರ ಯಾಕೆ ಹೀಗೆ. ಆದ್ದರಿಂದ ಮುಂದಿನ ವಾರ ವೀಕೆಂಡ್ ಕರ್ಫ್ಯೂ ಹೀಗೆ ಮುಂದುವರಿದರೆ ನಾವು ಸುಮ್ಮನಿರುವುದಿಲ್ಲ. ವರ್ತಕರಿಗೆ ನಾವು ಬೆಂಬಲ ಸೂಚಿಸುತ್ತೇವೆ ಎಂದು ಹೇಳಿದರು. ಸದಸ್ಯ ಶರೀಫ್ ಕಂಠಿ ಮಾತನಾಡಿ, ವೀಕೆಂಡ್ ಕರ್ಫ್ಯೂ ಮಾಡುತ್ತೀರಿ. ಸೋಮವಾರ ಪೇಟೆ ಫುಲ್ ರಶ್ ಇರುತ್ತದೆ. ಇದು ಗೊತ್ತಾಗುತ್ತಿಲ್ಲವೇ?” ಎಂದು ಹೇಳಿದರೆ, “ವೀಕೆಂಡ್ ಕರ್ಫ್ಯೂವೇ ಬೇಡ. ಮಾಮೂಲಿಯಾಗಿ ಇರಲಿ” ಎಂದು ಸದಸ್ಯ ರಿಯಾಜ್ ಕಟ್ಟೆಕಾರ್ ಹೇಳಿದರು. ಆಗ ಮಾತನಾಡಿದ ಮುಖ್ಯಾಧಿಕಾರಿಗಳು ಈಗ ಕೊರೊನಾ ಪಾಸಿಟಿವಿಟಿ ರೇಟ್ ಇಳಿಕೆಯಾಗುತ್ತಿದೆ. ಅದು ಕಡಿಮೆಯಾಗುತ್ತಿದ್ದಂತೆ ತೆರವು ಆಗಬಹುದು. ಕೊರೊನಾ ನಿಯಂತ್ರಣಕ್ಕಾಗಿ ಈ ಕ್ರಮ ಎಮದು ಹೇಳಿದರು.

ಆಗ ವೆಂಕಪ್ಪ ಗೌಡರು, “ಸಚಿವರು ಸಭೆ ಮಾಡಬಹುದು. ಆಗ ಕೊರೊನಾ ಬರುವುದಿಲ್ಲವೇ?. ಕೊರೊನಾ ಶುಕ್ರವಾರ ರಾತ್ರೆಯಿಂದ ಸೋಮವಾರ ಬೆಳಗ್ಗೆ ತನಕ ಮಾತ್ರವೇ ಇರುವುದಾ ಎಂದು ಪ್ರಶ್ನಿಸಿದರು. ಅಧ್ಯಕ್ಷರಾದಿಯಗಿ ಆಡಳಿತ ಪಕ್ಷದ ಯಾವೊಬ್ಬ ಸದಸ್ಯರೂ ಈ ಬಗ್ಗೆ ಮಾತನಾಡಲಿಲ್ಲ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.