ಅರಂತೋಡು :  ಬಿ. ಜೆ. ಪಿ. ಬೂತ್ ಸಮಿತಿ ಅಧ್ಯಕ್ಷರ ಮನೆಗೆ ನಾಮ ಫಲಕ ಅಳವಡಿಕೆ 

Advt_Headding_Middle

 ಅರಂತೋಡು ಗ್ರಾಮದ ಬಿ.ಜೆ.ಪಿ. ಬೂತ್ ಸಮಿತಿ ಅಧ್ಯಕ್ಷ ಸುಕುಮಾರ್ ಉಳುವಾರು ಅವರ ಮನೆಗೆ ನಾಮ ಫಲಕ ಅಳವಡಿಕೆ ಕಾರ್ಯಕ್ರಮವನ್ನು ರಾಜ್ಯ ಮೀನುಗರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಶಾಸಕ ಎಸ್. ಅಂಗಾರ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ರೂಪು ರೆಷೆಯನ್ನು ಸುಳ್ಯ ಬಿ.ಜೆ.ಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಸಭೆಗೆ ವಿವರಿಸಿದರು.
ವೇದಿಕೆಯಲ್ಲಿ ಸುಳ್ಯ ಬಿ. ಜೆ. ಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶುಭೋದ್ ಶೆಟ್ಟಿ ಮೇನಾಲ, ಗ್ರಾಂ. ಪಂ. ಸದಸ್ಯ ಶಿವಾನಂದ ಕುಕ್ಕುಂಬಳ, ಬಿ. ಜೆ. ಪಿ. ಬೂತ್ ಸಮಿತಿ ಅಧ್ಯಕ್ಷ ಸುಕುಮಾರ್ ಉಳುವಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಮತ್ತು ಪಕ್ಷದಲ್ಲಿ ಆಗಬೇಕಾದ ಕೆಲಸಗಳನ್ನು ಸಚಿವರು ವಿವರಿಸಿದರು. ಸುಕುಮಾರ್ ಉಳುವಾರ್ ದಂಪತಿಗಳು ಸಚಿವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂಧರ್ಭದಲ್ಲಿ ಅರಂತೋಡು-ತೋಡಿಕಾನ ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷ ಅಧ್ಯಕ್ಷ ದಯಾನಂದ ಕುರುಂಜಿ, ನಿರ್ದೇಶಕ ಕುಸುಮಾಧರ ಅಡ್ಕಬಳೆ, ಚಂದ್ರಶೇಖರ ಚೋಡಿಪಣೆ, ಗ್ರಾಂ. ಪಂ. ಅಧ್ಯಕ್ಷೆ ಹರಿಣಿ ದೇರಾಜೆ, ಉ. ಅಧ್ಯಕ್ಷೆ ಕು. ಶ್ವೇತಾ, ಗ್ರಾಂ. ಪಂ ಸದಸ್ಯ ಕೇಶವ ಅಡ್ತಲೆ, ಗಂಗಾಧರ ಬನ, ತೋಡಿಕಾನ ಮಲ್ಲಿಕಾರ್ಜುನ ವ್ಯವಸ್ಥಾಪನಾ ಸಮಿತಿ ಸದಸ್ಯೆ ವಾರಿಜ ಕುರುಂಜಿ, ಪ್ರಕಾಶ ಪಾನತ್ತಿಲ, ಎ. ಪಿ. ಎಂ. ಸಿ ಮಾಜಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಗ್ರಾ. ಪಂ ಮಾಜಿ ಸದಸ್ಯ ಶಂಕರ್ ಲಿಂಗಮ್, ಕೃಷ್ಣಪ್ಪ ಪಾನತ್ತಿಲ, ಗೀತಾ ಶೇಖರ್, ಗ್ರಾ. ಪಂ ಸದಸ್ಯ ವೆಂಕಟ್ರಮಣ ಪೆತ್ತಾಜೆ, ಪ್ರಶಾಂತ ಕಾಪಿಲ, ಮೇದಪ್ಪ ಉಳುವಾರು, ಯು. ಎಂ. ಶೇಷಗಿರಿ, ಸುಧಾಕರ ಅಡ್ಯಡ್ಕ, ಶಶಿ ಕುಮಾರ್ ಉಳುವಾರು, ವಾಣಿ ಎಶವಂತ, ಮೋನಪ್ಪ ಅಡ್ಕಬಳೆ, ಸೊಸೈಟಿ ನಿರ್ದೇಶಕ ವಿನೋದ್ ಉಳುವಾರು, ಮಾಲಿನಿ ವಿನೋದ್, ಸೂಮಶೇಖರ ಪೈಕ, ಚಂದ್ರಶೇಖರ ಆಚಾರ್ಯ, ಉಪಸ್ಥಿತರಿದ್ದರು. ಭಾರತಿ ಪುರುಷೋತ್ತಮ ಸ್ವಾಗತಿಸಿ ತೋಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಧ್ಯಕ್ಷ ಕಿಶೋರ್ ಯು. ಎಂ ಪ್ರಾಸ್ತಾವಿಕವಾಗಿ ಮಾತನಾಡಿ, ತಾ. ಪಂ. ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ ವಂದಿಸಿದರು. ನಂತರ ಸಚಿವರು ನಾಮ ಫಲಕವನ್ನು ಗೋಡೆಗೆ ಅಳವಡಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.