ಇಂದಿನಿಂದ ಸುಳ್ಯ ಪಯಸ್ವಿನಿ ಜೇಸಿಐ ಸಪ್ತಾಹ

Advt_Headding_Middle

ಜೇಸಿಐ ಸುಳ್ಯ ಪಯಸ್ವಿನಿ ಮತ್ತು ಜೇಸಿರೆಟ್, ಯುವ ಜೇಸಿ ವಿಭಾಗ, ಪಯಸ್ವಿನಿ ಜೇಸಿಸ್ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ಆಶ್ರಯದಲ್ಲಿ ಬಂಧನ ಜೇಸಿಐ ಸಪ್ತಾಹ ಇಂದಿನಿಂದ ನಡೆಯಲಿದೆ. ಸೆ. 9ರಂದು ಅಜ್ಜಾವರ ಸ.ಪ್ರೌಢಶಾಲೆಯಲ್ಲಿ ಜೇಸಿ ಸಪ್ತಾಹದ ಉದ್ಘಾಟನೆ ನಡೆಯಲಿದ್ದು, ಸಮಾರಂಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ ನಡೆಯಲಿರುವುದು.

2ನೇ ದಿನ ಸೆ. 1೦ರಂದು ಅಜ್ಜಾವರ ಸ.ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ನಡೆಯಲಿರುವುದು. ಸೆ. 11 ರಂದು ಮೇನಾಲ ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರದಲ್ಲಿ ಸಾಬೂನು ಹಾಗೂ ಫಿನಾಯಿಲ್ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ ನಡೆಯುವುದು. ಸೆ. 12 ರಂದು ಅಕ್ಕೋಜಿಪಾಲ್ ಅಂಗನವಾಡಿ ಕೇಂದ್ರ ಅಮರಮುಡ್ನೂರಿನಲ್ಲಿ ಸ್ವಚ್ಛ ಆರೋಗ್ಯ ಸ್ವಾಸ್ಥ್ಯ ಸಮಾಜ ಕಲ್ಪನೆಯಲ್ಲಿ ಅಕ್ಕೋಜಿಪಾಲ್ ಅಂಗನವಾಡಿಯಲ್ಲಿ ಸ್ವಚ್ಛತೆ ನಡೆಯಲಿದೆ. ಸೆ. 13 ರಂದು ಐವರ್ನಾಡು ಗ್ರಾ.ಪಂ.ನಲ್ಲಿ ಜನಪ್ರತಿನಿಧಿಗಳಿಗೆ ಪರಿಣಾಮಕಾರಿ ಭಾಷಣಕಲೆ ತರಬೇತಿ ನಡೆಯುವುದು. ಸೆ. 14 ರಂದು ಕೆವಿಜಿ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯುವುದು. ಸೆ. 15 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಕಮಲಪತ್ರ ಪಯಸ್ವಿನಿ ಶ್ರೀ ಹಾಗೂ ಕಲಾಶ್ರೀ ಪ್ರಶಸ್ತಿ ಪ್ರಧಾನ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮ ಸುಳ್ಯ ಶ್ರೀರಾಂಪೇಟೆಯ ಕಾನತ್ತಿಲ ದೇವಮ್ಮ ಸಂಕೀರ್ಣದಲ್ಲಿ ನಡೆಯಲಿದೆ. ಈ ಬಾರಿ ಕಮಲಪತ್ರ ಪುರಸ್ಕಾರವನ್ನು ಜೇಸಿಐ ಸುಳ್ಯ ಪಯಸ್ವಿನಿ ಪೂರ್ವಾಧ್ಯಕ್ಷ ಭರತ್ ಮುಂಡೋಡಿ, ಪಯಸ್ವಿನಿ ಶ್ರೀ ಪ್ರಶಸ್ತಿಯನ್ನು ಪಶು ವೈದ್ಯಾಧಿಕಾರಿ ಡಾ. ಕೇಶವ ಸುಳ್ಳಿಯವರಿಗೆ, ಕಲಾಶ್ರೀ ಪ್ರಶಸ್ತಿಯನ್ನು ಯಕ್ಷಗುರು ಕೋಡ್ಲ ಗಣಪತಿ ಭಟ್‌ರಿಗೆ ನೀಡಲಾಗವುದು. ಕೊಡಿಯಾಲಬೈಲು ಎಂ.ಜಿ.ಎಂ. ಶಾಲೆಯ ಮುಖ್ಯ ಶಿಕ್ಷಕ ಚಿದಾನಂದ ಕೆ.ವಿ.ಯವರಿಗೆ ವಿಶೇಷ ಗೌರವಾರ್ಪಣೆ ನಡೆಯಲಿರುವುದು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.