ಮಾನ್ಯಡ್ಕ : ನೇಶನ್ ಬಿಲ್ಡರ್ 2021 ಶಿಕ್ಷಕ ಪ್ರಶಸ್ತಿ ಪ್ರದಾನ

Advt_Headding_Middle

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ಆಶ್ರಯದಲ್ಲಿ ರೋಟರಿ ಇಂಡಿಯಾ ಲಿಟರಸಿ ಮಿಷನ್ ನ ನೇಷನ್ ಬಿಲ್ಡರ್ 2021 ನೇ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಸೆ. 9ರಂದು ಮಾನ್ಯಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪದ್ಮನಾಭ ಬೀಡು ವಹಿಸಿದ್ದರು. ಅತಿಥಿಗಳಾಗಿ ಸಹಾಯಕ ಗವರ್ನರ್ ಜಿತೇಂದ್ರ ಎನ್.ಎ., ವಿಶ್ವನಾಥ, ಗ್ರಾಮ ಪಂಚಾಯಿತಿ ಸದಸ್ಯ ಸುಂದರ ಪಾಪುತ್ತಡಿ, ಸಿ ಆರ್ ಪಿ ಜಯಂತ್, ಎಸ್ಡಿಎಂಸಿ ಅಧ್ಯಕ್ಷ ವಸಂತ ಎನ್. ಟಿ., ಮೇದಪ್ಪ ಮಾನ್ಯಡ್ಕ, ಶ್ಯಾಮ್ ಸುಂದರ, ರವೀಂದ್ರ ಮರಕ್ಕಡ, ಡಾ. ರಶ್ಮಿ ಕಾಯರ್ತಡ್ಕ, ಶ್ರೀಮತಿ ಗ್ಲಾಡಿಸ್ ಡಿಸೋಜಾರವರ  ಉಪಸ್ಥಿತಿಯಲ್ಲಿ ಸ.ಕಿ.ಪ್ರಾ.
ಶಾಲಾ ಶಿಕ್ಷಕಿ ಭುವನೇಶ್ವರಿ ಕೆ. ಹೇಮಳರವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯ ಶಿಕ್ಷಕಿ ಶ್ರೀಮತಿ ರಶ್ಮಿ ಅಭಿನಂದನಾ ಭಾಷಣ ಮಾಡಿದರು.

ಎಸ್ ಡಿಎಂಸಿ ಅಧ್ಯಕ್ಷ ವಸಂತ ಕುಮಾರ್ ಎನ್ .ಟಿ. ಅವರಿಗೆ ಬೀಳ್ಕೊಡುಗೆ ಸಮಾರಂಭವು ನಡೆಯಿತು. ಫಲಪುಷ್ಪ ನೆನಪಿನ ಕಾಣಿಕೆ ಕೊಟ್ಟು ಸಿಆರ್ ಪಿ ಜಯಂತರವರು ಸನ್ಮಾನಿಸಿದರು. 

ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಸದಸ್ಯರು ಪೋಷಕರು ಊರವರು ಭಾಗವಹಿಸಿದ್ದರು. 

ಶ್ಯಾಮ್ ಸುಂದರ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.