ಚೆಕ್ ಅಮಾನ್ಯ ಪ್ರಕರಣದ ಆರೋಪಿ ಖುಲಾಸೆ

Advt_Headding_Middle

 

 

ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಯೊಬ್ಬರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಪ್ರಕರಣದಲ್ಲಿ ಮಹಾಲಿಂಗ ನಾಯ್ಕ ಪೆರುವಾಜೆ ಎಂಬವರು ಮರ್ಕಂಜ ಗ್ರಾಮದ ಕುಂಪುಳಿ ಎಂಬಲಿಯ ವೇಣುಪ್ರಸಾದ್ ಕೆ. ಪಿ ಯವರಿಗೆ 5 ಲಕ್ಷ ಹಣವನ್ನು ಕೊಟ್ಟಿದ್ದು ಅದಕ್ಕೆ ಪ್ರತಿಯಾಗಿ ದಿನಾಂಕ 21/11/2018 ರಲ್ಲಿ ಆರೋಪಿ ವೇಣುಪ್ರಸಾದ್ ತನ್ನ ಖಾತೆಯುಳ್ಳ ಕಾರ್ಪೋರೇಶನ್ ಬ್ಯಾಂಕ್ ಸುಳ್ಯ ಬ್ರಾಂಚ್ ನ ಚೆಕ್ಕ ನ್ನು ನೀಡಿದ್ದು ಆ ಚೆಕ್ಕನ್ನು ನಗಧಿಕರಣಕ್ಕಾಗಿ ದೂರುದಾರರು ತನ್ನ ಖಾತೆಯುಳ್ಳ ಬ್ಯಾಂಕ್ ನ ಮೂಲಕ ಸಲ್ಲಿಸಿದಾಗ ಆರೋಪಿ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲ ಎಂಬ ಹಿಂಬರಹದೊಂದಿಗೆ ದೂರುದಾರರಿಗೆ ಚೆಕ್ಕನ್ನು ಹಿಂತಿರುಗಿಸಲಾಗಿತ್ತು. ಬಳಿಕ ಆ ಸಾಲವಾಗಿ ಪಡಕೊಂಡ ಹಣವನ್ನು ಹಿಂತುರುಗಿಸುವಂತೆ ಫಿರ್ಯಾದುದಾರರು ತನ್ನ ವಕೀಲರ ಮೂಲಕ ಆರೋಪಿಗೆ ನೋಟಿಸ್ ನೀಡಲಾಗಿತ್ತು. ಆರೋಪಿ ಫಿರ್ಯಾದುದಾರರಿಂದ ಪಡಕೊಂಡ ಸಾಲ ರೂ 5 ಲಕ್ಷವನ್ನು ನೀಡಿರುವುದಿಲ್ಲ ಎಂದು ಆರೋಪಿಸಿ ದೂರುದಾರರು ಆರೋಪಿ ವೇಣುಪ್ರಸಾದ್ ವಿರುದ್ಧ ಸುಳ್ಯ ನ್ಯಾಯಾಲಯದಲ್ಲಿ ಖಾಸಗಿ ಫಿರ್ಯಾದಿಯನ್ನು ದಾಖಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ಹಿರಿಯ ಸಿವಿಲ್ ಜಡ್ಜ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯಾದ ಸೋಮಶೇಖರ್. ಎ ಇವರು ದೂರುದಾರರು ತನ್ನ ದೂರಿನಲ್ಲಿ ಹೇಳಿದಂತೆ ರೂ 5 ಲಕ್ಷವನ್ನು ಆರೋಪಿಯು ದೂರುದಾರರಿಂದ ಪಡಕೊಂಡಿದ್ದಾರೆ ಎಂಬ ಅಂಶವನ್ನು ಸಾಭೀತುಪಡಿಸುವರೇ ದೂರುದಾರರು ವಿಫಲವಾಗಿದ್ದಾರೆ ಎಂಬ ಕಾರಣವನ್ನು ನೀಡಿ ಆರೋಪಿ ವೇಣುಪ್ರಸಾದ್ ರನ್ನು ಸೆ.9, 2021 ರಂದು ದೋಷಮುಕ್ತ ಗೊಳಿಸಿ ಬಿಡುಗಡೆ ಮಾಡಿ ತೀರ್ಪು ನೀಡಿದ್ದಾರೆ. ಆರೋಪಿಯ ಪರವಾಗಿ ನ್ಯಾಯವಾದಿಗಳಾದ ಯಂ. ವೆಂಕಪ್ಪ ಗೌಡ, ಚಂಪಾ ವಿ. ಗೌಡ ಹಾಗೂ ರಾಜೇಶ್ ಬಿ. ಜಿ ಯವರು ವಾದಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.