ಎಲಿಮಲೆ ಬಸ್ ಸ್ಟ್ಯಾಂಡ್ ನಲ್ಲಿದ್ದ ಅನಾಥ ವೃದ್ಧರನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

Advt_Headding_Middle

 

 

ಎಲಿಮಲೆಯ ಬಸ್ ಸ್ಟ್ಯಾಂಡ್ ನಲ್ಲಿದ್ದ ಅನಾಥ ವೃದ್ಧರೊಬ್ಬರನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಘಟನೆ ಎಲಿಮಲೆಯಿಂದ ವರದಿಯಾಗಿದೆ.

ಎಲಿಮಲೆಯಿಂದ ಸೇವಾಜೆಗೆ ಕಡೆಗೆ ಹೋಗುವಲ್ಲಿ ಇರುವ ಬಸ್ ಸ್ಟ್ಯಾಂಡ್ ನಲ್ಲಿ ನಿನ್ನೆಯ ದಿನ ಅಂದಾಜು ಎಪ್ಪತ್ತರಿಂದ ಎಂಬತ್ತು ವರ್ಷ ಪ್ರಾಯದ ವೃದ್ಧರೊಬ್ಬರು ಕಂಡು ಬಂದಿದ್ದರು. ಇಂದು(ಸೆ.10) ನಿತ್ರಾಣಗೊಂಡು ಮಲಗಿದ ಸ್ಥಿತಿಯಲ್ಲಿದ್ದರು. ಬೆಳಿಗ್ಗೆ ಈ ಅನಾಥ ವೃದ್ಧರಿಗೆ ಸ್ಥಳೀಯ ರು ಉಪಹಾರ ನೀಡಿದ್ದರು. ಆದರೆ ಮಧ್ಯಾಹ್ನದ ವೇಳೆಗೆ ಮಲಗಿದ ಸ್ಥಿತಿಯಲ್ಲಿದ್ದು, ಅವರ ಆರೋಗ್ಯದಲ್ಲಿಯೂ ಏರುಪೇರಾಗಿತ್ತು. ಇವರನ್ನು ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಧನಂಜಯ ಕುಮಾರ್ ರವರು ವಿಚಾರಿಸಿ ದಾಗ ತಾನು ಮೋನಪ್ಪ ಐವರ್ನಾಡು ಎಂದು ಹೇಳಿ ಬೇರೆನೂ ಹೇಳಲ್ಲಿಲ್ಲ. ಹೀಗಾಗಿ ಧನಂಜಯರವರು ಬೆಳ್ಳಾರೆ ಪೋಲೀಸ್ ಠಾಣೆಗೆ ವಿಷಯ ತಿಳಿಸಿ ಅವರು ಬಂದು, ಅಂಬ್ಯುಲೆನ್ಸ್ ಮೂಲಕ ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ. ನೆಲ್ಲೂರು ಕೆಮ್ರಾಜೆ ಪಂಚಾಯತ್ ಸದಸ್ಯ ರಾಮಚಂದ್ರ ಪ್ರಭು, ಸಿಬ್ಬಂದಿ ಅರುಣ್ ಕುಮಾರ್ ಹಾಗೂ ಪೋಲೀಸರು, ಸ್ಥಳೀಯರು ಸಹಕರಿಸಿದರು.
ಆದರೆ ವಾರಿಸುದಾರರು ಯಾರೆಂದು ತಿಳಿದು ಬಂದಿಲ್ಲ. ವಾರಿಸುದಾರರಿದ್ದಲ್ಲಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕೆಂದು ಧನಂಜಯ ಕುಮಾರ್ ವಿನಂತಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.