ಜೇಸಿಐ ಸುಳ್ಯ ಸಿಟಿಗೆ ವಲಯಾಧ್ಯಕ್ಷರ ಭೇಟಿ

Advt_Headding_Middle

ಯೂತ್ ಇನ್‌ಸ್ಪೈಯರ್ ಅವಾರ್ಡ್ ಪ್ರದಾನ
ಜೇಸಿ ಸಪ್ತಾಹ ಆಚರಿಸಿಕೊಳ್ಳುತ್ತಿರುವ ಜೇಸಿಐ ಸುಳ್ಯ ಸಿಟಿಗೆ ವಲಯಾಧ್ಯಕ್ಷ ಸೌಜನ್ಯ ಹೆಗ್ಡೆಯವರು ನಿನ್ನೆ ಅಧಿಕೃತ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಜೇಸಿ ಸಪ್ತಾಹದ ಅಂಗವಾಗಿ ಯೂತ್ ಇನ್‌ಸ್ಪೈಯರ್ ಅವಾರ್ಡ್ ಪ್ರದಾನ ಕಾರ್ಯಕ್ರಮವು ನಡೆಯಿತು. ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ಈ ಸಮಾರಂಭ ನೆರವೇರಿತು.

ಆರಂಭದಲ್ಲಿ ವಲಯಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮವು ನಡೆಯಿತು. ವಲಯಾಧ್ಯಕ್ಷರನ್ನು ನಾಸಿಕ್ ಬ್ಯಾಂಡ್ ಮೂಲಕ ಮುಖ್ಯರಸ್ತೆಯಿಂದ ಕಾರ್ಯಕ್ರಮದ ಸ್ಥಳಕ್ಕೆ ಬರಮಾಡಿಕೊಳ್ಳಲಾಯಿತು. ಜೇಸಿಐ ಸುಳ್ಯ ಸಿಟಿ ವತಿಯಿಂದ ವಲಯಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಬಶೀರ್ ಯು.ಪಿ. ಸಂಪಾದಕತ್ವದಲ್ಲಿ ಹೊರಬಂದ ಘಟಕ ಪತ್ರಿಕೆ ಸುಳ್ಯ ಸಿರಿ ಬಿಡುಗಡೆಗೊಳಿಸಲಾಯಿತು. ಘಟಕದ ಅಧ್ಯಕ್ಷ ಚಂದ್ರಶೇಖರ ಕನಕಮಜಲು ಅಧ್ಯಕ್ಷತೆ ವಹಿಸಿದ್ದರು. ವಲಯ ಉಪಾಧ್ಯಕ್ಷ ಶ್ರೀಮತಿ ಹೇಮಲತಾ ಪ್ರದೀಪ್ ಬಾಕಿಲ, ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ದೀಪಕ್ ಗಂಗೂಲಿ, ವಲಯ ನಿರ್ದೇಶಕ ಸತೀಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಸಾಯಿಶೃತಿ ಪಿಲಿಕಜೆ ವಲಯಾಧ್ಯಕ್ಷರನ್ನು ಪರಿಚಯಿಸಿದರು.
ಬಳಿಕ ಯೂತ್ ಇನ್‌ಸ್ಪೈಯರ್ ಅವಾರ್ಡ್ ಪ್ರದಾನ ನಡೆಯಿತು. ಆದಿಶಕ್ತಿ ಗೂಡ್ಸ್ & ಪಾರ್ಸೆಲ್ ಸಂಸ್ಥೆಯ ಮಾಲಕರಾದ ಎಂ.ಎಸ್.ರಮೇಶ್ ಅವರಿಗೆ ಈ ಪ್ರಶಸ್ತಿ ನೀಡಲಾಯಿತು. ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ ಅಭಿನಂದನಾ ಭಾಷಣ ಮಾಡಿದರು. ಜೇಸಿ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ, ಉಪಾಧ್ಯಕ್ಷೆ ಹೇಮಲತಾ ಪ್ರದೀಪ್, ನಿರ್ದೇಶಕ ಸತೀಶ್ ನಾಯಕ್, ಪೂರ್ವಾಧ್ಯಕ್ಷ ವಿನಯ್‌ರಾಜ್ ಮಡ್ತಿಲ, ಸಪ್ತಾಹ ನಿರ್ದೇಶಕಿ ನಯನಾ ಮುಡೂರು, ಜೇಸಿ ವೀಕ್ ಚೆಯರ್‌ಮೆನ್ ಶೃತಿ ಪಿ.ಜೆ., ಯುವ ಜೇಸಿ ಅಧ್ಯಕ್ಷ ಪ್ರಜ್ವಲ್, ಕಾರ್ಯಕ್ರಮ ನಿರ್ದೇಶಕ ಶಶಿಕಾಂತ್ ಮಿತ್ತೂರು ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಘಟಕಾಧ್ಯಕ್ಷ ಚಂದ್ರಶೇಖರ ಕನಕಮಜಲು ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ಮನಮೋಹನ ಬಳ್ಳಡ್ಕ ಪ್ರಸ್ತಾವನೆಗೈದರು. ವಿಸ್ಮಯ ಬುಡ್ಲೆಗುತ್ತು ಅತಿಥಿಗಳನ್ನು ಪರಿಚಯಿಸಿದರು. ಚಂದ್ರಶೇಖರ ನಾಯಕ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಅಶ್ವಥ್ ಅಡ್ಕಾರ್ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.