Breaking News

ಡಾ. ಸಜ್ಜನ್ ಅಕಾಡೆಮಿಯಿಂದ ECG SKILL ತರಬೇತಿ ಕಾರ್ಯಕ್ರಮ ಬಿಡುಗಡೆ

Advt_Headding_Middle

 

ಡಾ. ಸಜ್ಜನ್ ಮಡಪ್ಪಾಡಿ ಯವರು ಬೆಂಗಳೂರಿನಲ್ಲಿ ಡಾ ಸಜ್ಜನ್ ಅಕಾಡೆಮಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಆನ್ ಲೈನ್ ಮುಖಾಂತರ ವೈದ್ಯ ಸಮುದಾಯಕ್ಕೆ ಹಲವಾರು ರೀತಿಯ ತರಬೇತಿಗಳನ್ನು ನೀಡುತ್ತಿದ್ದಾರೆ.
ಇತ್ತೀಚೆಗೆ ಡಾ. ಸಜ್ಜನ್ ಮಡಪ್ಪಾಡಿ ಅವರು ತಯಾರಿಸಿರುವ ಅಂತರರಾಷ್ಟ್ರೀಯ ಮಟ್ಟದ ECG SKILL ತರಬೇತಿ ಕಾರ್ಯಕ್ರಮವನ್ನು ವೈದ್ಯ ಸಮುದಾಯಕ್ಕೆ ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ಡಾ. ರವಿ ಹಾಡ್ಯ ಚರ್ಮರೋಗ ತಜ್ಞರು ಇವರು ಬಿಡುಗಡೆ ಮಾಡಿದರು.
ಈಗಾಗಲೇ ಡಾ ಸಜ್ಜನ್ ಮಡಪಾಡಿ ಅವರು ಬರೆದಂತಹ ECG SKILL ಪುಸ್ತಕವು ಸ್ಪಾನಿಶ್ ಹಾಗು ಚೈನಾ ದೇಶದಲ್ಲಿ ಅಲ್ಲಿಯ ಭಾಷೆಗಳಲ್ಲಿ ಸ್ಥಳಾಂತರಗೊಂಡು ಅಲ್ಲಿಯ ವೈದ್ಯರಿಗೆ ಅನುಕೂಲವಾಗಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬೇರೆ ಬೇರೆ ದೇಶದ ವೈದ್ಯ ಸಮುದಾಯದವರಿಗೆ ಅನುಕೂಲವಾಗುವಂತೆ ಆನ್ ಲೈನ್ ತರಬೇತಿಯನ್ನು ವಿಶೇಷ ತಂತ್ರಜ್ಞಾನ ಅಳವಡಿಸಿ ಬಿಡುಗಡೆ ಮಾಡಿದರು.
ಈ ಬಿಡುಗಡೆ ಸಮಾರಂಭದಲ್ಲಿ ವಾಸನ್ ಐ ಕೇರ್ ಸಂಸ್ಥೆ ಆರ್ ಆರ್ ನಗರ ಬೆಂಗಳೂರು ಇದರ ಮುಖ್ಯಸ್ಥರು ಹಾಗೂ ನೇತ್ರ ತಜ್ಞರಾದ ಡಾ. ಮಧುರ ಮಡಪ್ಪಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ರಾಧಾ ಕೃಷ್ಣ ಮಡಪ್ಪಾಡಿ ಸಿಂಧು ಡಿಜಿಟಲ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಸಿಂಧುಶ್ರೀ ಎಚ್. ಆರ್.
ಡಾ. ಸಜ್ಜನ್ ಅಕಾಡೆಮಿ ಸಂಸ್ಥೆಗೆ ಈಗಾಗಲೇ 5000ಕ್ಕಿಂತ ಹೆಚ್ಚು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಸದಸ್ಯತ್ವವನ್ನು ಹೊಂದಿರುತ್ತಾರೆ .
LEARN ECG IN A DAY ಪುಸ್ತಕದ ಎರಡನೇ ಸಂಚಿಕೆಯನ್ನು ಜೆಪಿ ಬ್ರದರ್ಸ್ ದಿಲ್ಲಿ ಎಂಬ ಸಂಸ್ಥೆಯವರು ಮಾರುಕಟ್ಟೆಗೆ ಬಿಡುಗಡೆ ಮಾಡಿರುತ್ತಾರೆ.
ECG SKILL ತರಬೇತಿ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ drsajjan academy.com website ನಲ್ಲಿ ಪಡೆಯಬಹುದು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.