ಬಿಜೆಪಿ ಅಧ್ಯಕ್ಷತೆಗೆ ಕಂಜಿಪಿಲಿ ರಾಜೀನಾಮೆ ಕೊಡಬೇಕೆಂದು ಕಾಂಗ್ರೆಸ್ ಆಗ್ರಹಿಸುವುದು ಪಿಶಾಚಿಯ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ : ಬಿಜೆಪಿ

Advt_Headding_Middle

2014 ರ ಚುನಾವಣೆಯ ಸಂದರ್ಭದಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿ ನ್ಯಾಯಾಲಯವು ನೀಡಿರುವ ತೀರ್ಪಿನ ಬಳಿಕ ಸ್ಥಳೀಯ ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿಯವರ ರಾಜೀನಾಮೆಗೆ ಆಗ್ರಹಿಸಿರುವುದು ಹಾಸ್ಯಾಸ್ಪದವಾಗಿದ್ದು, ಭೂತ- ಪಿಶಾಚಿಯ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ. ಅವರ ಪತ್ರಿಕಾಗೋಷ್ಠಿಯಲ್ಲಿದ್ದ ಕೆಲವು ನಾಯಕರು ನೈತಿಕತೆಯ ಪಾಠವನ್ನು ಉಚ್ಛರಿಸುವಾಗ ನೈತಿಕತೆ ಅರ್ಥವನ್ನೇ ಕಳೆದುಕೊಂಡಂತಾಗಿದೆ. ಅವರು ಒಂದು ಕ್ಷಣ ತಮ್ಮ ಗತ ಇತಿಹಾಸವನ್ನು ಮತ್ತು ನಡವಳಿಕೆಯನ್ನು ನೆನಪಿಸಿಕೊಳ್ಳಬೇಕು ಎಂದು ಸುಳ್ಯ ಮಂಡಲ ಬಿಜೆಪಿ ಹೇಳಿದೆ.
ಇಂದು ಬಿಜೆಪಿ ಕಚೇರಿಯಲ್ಲಿ ಹಿರಿಯ ಬಿಜೆಪಿ ನಾಯಕ ಎ.ವಿ.ತೀರ್ಥರಾಮರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯಕರು ಮಾತನಾಡಿದರು.
ಈ ದೇಶದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಮಗೆ ಅಪಾರ ಗೌರವ ಇದೆ. ಸದ್ರಿ ತೀರ್ಪಿನ ಬಗ್ಗೆ ನಮಗೆ ಆಕ್ಷೇಪ ಇರುವುದಿಲ್ಲ. ನ್ಯಾಯಾಲಯದ ತೀರ್ಪಿಗೆ ತಲೆಬಾಗುತ್ತೇವೆ. ಆ ಬಗ್ಗೆ ಮೇಲ್ಮನವಿ ಸಲ್ಲಿಸಲಾಗುವುದು. ಶ್ರೀಮತಿ ಸರಸ್ವತಿ ಕಾಮತ್‌ರವರು ದಾಖಲಿಸಿದ ದೂರು ಸುಳ್ಳು ಮತ್ತು ನಿರಾಧಾರವೆಂದು ಸಾಬೀತಾಗಲಿದ್ದು, ಹರೀಶ್ ಕಂಜಿಪಿಲಿಯವರು ಆರೋಪದಿಂದ ಮುಕ್ತರಾಗಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಎ.ವಿ.ತೀರ್ಥರಾಮರು ಹೇಳಿದರು.
ಸರಸ್ವತಿ ಕಾಮತ್ ನೀಡಿರುವ ದೂರು ದುರುದ್ಧೇಶ ಪೂರಿತ ಮತ್ತು ರಾಜಕೀಯ ಪ್ರೇರಿತ. ಚುನಾವಣಾ ಸಂದರ್ಭದಲ್ಲಿ ಆರೋಪ- ಪ್ರತ್ಯಾರೋಪಗಳು ಸರ್ವೇಸಾಮಾನ್ಯವಾಗಿದ್ದರೂ ಕಾಂಗ್ರೆಸ್‌ನ ಸರಸ್ವತಿ ಕಾಮತ್‌ರವರು ಮಹಿಳೆ ಎಂಬ ಗೌರವಯುತ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ದ್ವೇಷಕ್ಕೋಸ್ಕರ ಷಡ್ಯಂತ್ರ ಹೂಡಿ ಸುಳ್ಳು ದೂರು ನೀಡಿರುವುದು ಸ್ತ್ರೀ ಕುಲಕ್ಕೆ ಅವಮಾನ. ಬಿಜೆಪಿಯ ಎಲ್ಲಾ ಕಾರ್ಯಕರ್ತರ ಮತ್ತು ಜನ ಸಾಮಾನ್ಯರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿರುವ ಹರೀಶ್ ಕಂಜಿಪಿಲಿಯವರ ವ್ಯಕ್ತಿತ್ವ ಮತ್ತು ನಡವಳಿಕೆ ನಾಯಕತ್ವದ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಅವರು ಪಕ್ಷದ ಜವಾಬ್ದಾರಿಯುತ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಮೇಯವೇ ಇಲ್ಲ. ಕಾಂಗ್ರೆಸ್‌ನವರ ನೈತಿಕತೆಯ ಪಾಠ ನಮಗೆ ಅಗತ್ಯವಿಲ್ಲ. ಪಕ್ಷ ಹರೀಶ್ ಕಂಜಿಪಿಲಿಯವರ ಮತ್ತು ಇತರ ೧೪ ಜನ ಕಾರ್ಯಕರ್ತರ ಜೊತೆಗಿರುತ್ತದೆ ಮತ್ತು ನೈತಿಕವಾಗಿ ಅವರನ್ನು ಬೆಂಬಲಿಸುತ್ತದೆ ಎಂದು ಎ.ವಿ. ತೀರ್ಥರಾಮರು ಹೇಳಿದರು.
ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ಶ್ರೀಮತಿ ಆಶಾ ತಿಮ್ಮಪ್ಪ, ಶ್ರೀಮತಿ ಶುಭದಾ ಎಸ್. ರೈ, ರಾಕೇಶ್ ರೈ ಕೆಡೆಂಜಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಹಿರಿಯ ಮುಂದಾಳು ಎನ್.ಎ.ರಾಮಚಂದ್ರ, ಕಡಬದ ಕೃಷ್ಣ ಶೆಟ್ಟಿ ಕಡಬ, ಶ್ರೀಮತಿ ಪುಲಸ್ಯ ರೈ, ಸುಬೋಧ್ ಶೆಟ್ಟಿ ಮೇನಾಲ, ಶ್ರೀನಾಥ್ ಬಾಳಿಲ, ದಿನೇಶ್ ಮೆದು, ಶ್ರೀಮತಿ ಪುಷ್ಪಾವತಿ ಬಾಳಿಲ, ಶ್ರೀಮತಿ ಪುಷ್ಪಾ ಮೇದಪ್ಪ, ಶ್ರೀಮತಿ ಗೀತಾ ಶೇಖರ್ ಉಳುವಾರು, ಶ್ರೀಮತಿ ಇಂದಿರಾ ಬಿ.ಕೆ., ಶಕ್ತಿಕೇಂದ್ರದ ಅಧ್ಯಕ್ಷರುಗಳಾದ ಕರುಣಾಕರ ಹಾಸ್ಪಾರೆ ಮತ್ತು ಗಣೇಶ್ ಉದನಡ್ಕ, ಮಂಡಲ ಸಮಿತಿ ಖಜಾಂಜಿ ಶಿವಾನಂದ ಕುಕ್ಕುಂಬಳ, ಎಸ್‌ಸಿ ಮೋರ್ಚಾ ಅಧ್ಯಕ್ಷ ಅಚ್ಚುತ ಗುತ್ತಿಗಾರು, ಐ.ಬಿ.ಚಂದ್ರಶೇಖರ, ಸುರೇಶ್ ಕಣೆಮರಡ್ಕ, ಮಹೇಶ್ ಮೇನಾಲ, ಜಿನ್ನಪ್ಪ ಪೂಜಾರಿ, ಶಿವಪ್ರಸಾದ್ ಏನೆಕಲ್ಲು, ಬೂಡು ರಾಧಾಕೃಷ್ಣ ರೈ, ಹರೀಶ್ ಉಬರಡ್ಕ, ಸುನಿಲ್ ಕೇರ್ಪಳ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.