ಪಂಜ:ಅಜಾದಿ ಕ ಅಮೃತ್ ಮಹೋತ್ಸವ್ – ಪಿಟ್ ಇಂಡಿಯಾ ಫ್ರೀಡಂ ರನ್ -2.0

Advt_Headding_Middle

 

 

ಯುವಜನ ಹಾಗೂ ಕ್ರೀಡಾ ಇಲಾಖೆ, ಕೇಂದ್ರ ಸರ್ಕಾರ ನೆಹರು ಯುವ ಕೇಂದ್ರ ಸಂಘತನ್ ಮಂಗಳೂರು
ಗ್ರಾಮ ಪಂಚಾಯತ್ ಪಂಜ , ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಪಂಜ, ಶ್ರೀ ಉಳ್ಳಾಕುಲು ಕಲಾ ರಂಗ ಪಲ್ಲೋಡಿ , ಮಿತ್ರ ಮಂಡಲ ನಾಗತೀರ್ಥ ಇದರ ಸಂಯುಕ್ತ ಆಶ್ರಯದಲ್ಲಿ “ಅಜಾದಿ ಕ ಅಮೃತ್ ಮಹೋತ್ಸವ್ – ಪಿಟ್ ಇಂಡಿಯಾ ಫ್ರೀಡಂ ರನ್ -2.0″ಸೆ.10ರಂದು ಪಂಜ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ದೇರಾಜೆ, ಉಪಾಧ್ಯಕ್ಷೆ ನೇತ್ರಾವತಿ ಕಲ್ಲಾಜೆ,ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ್ ಕರಿಮಜಲು, ಉಳ್ಳಾಕುಲು ಕಲಾರಂಗದ ಅಧ್ಯಕ್ಷರಾದ ಕವನ್ ಪಲ್ಲೋಡಿ, ಮಿತ್ರಮಂಡಲ ನಾಗತೀರ್ಥ ಇದರ ಅಧ್ಯಕ್ಷ ರಾಜೇಶ್ ಕುದ್ವ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕರಾದ ಪವನ್ ಪಲ್ಲತ್ತಡ್ಕ, ದೈಹಿಕ ಶಿಕ್ಷಣ ಶಿಕ್ಷಕರಾದ ಸಂದೀಪ್ ಪಲ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕ ಪ್ರತಿಭಾ ಕಾಯರ ಇವರು ಫಿಟ್ ಇಂಡಿಯ ರನ್ ಇದರ ಮಹತ್ವ ಹಾಗೂ ಪ್ರತಿಜ್ಞಾ ವಿಧಿಯನ್ನು ನೆರೆದವರಿಗೆ ಬೋಧಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪೂರ್ಣಿಮ ದೇರಾಜೆ ಅವರು ಅಜಾದಿ ಕಾ ಅಮೃತ್ ಮಹೋತ್ಸವ್ ಕಾರ್ಯಕ್ರಮದ ಧ್ಯೇಯ ಹಾಗೂ ಮಹತ್ವ ಯುವಜನತೆಯು ಹೇಗೆ ತಮ್ಮನ್ನು ಫಿಟ್ ಇಂಡಿಯ ಫ್ರೀಡಂ ರನ್ ಲಿ ತೊಡಗಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು. ಸಂದೀಪ್ ಪಲ್ಲೋಡಿ ಅವರು ಪ್ರಸ್ತಾವಿಕ ಮಾತನಾಡಿದರು.ಕಾರ್ಯಕ್ರಮದಲ್ಲಿ ವರ್ಷಿತ್ ಪಂಜ ಸ್ವಾಗತಿಸಿ, ಹಿತೇಶ್ ಪಂಜದಬೈಲು ವಂದಿಸಿದರು. ಚೇತನ್ ಜಳಕದಹೊಳೆ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.