Breaking News

ಬೆಳ್ಳಾರೆ ಜೇಸಿಐ ಗೆ ವಲಯಾಧ್ಯಕ್ಷರ ಭೇಟಿ

Advt_Headding_Middle

 

ಶಾಶ್ವತ ಯೋಜನೆಗಳ ಅನಾವರಣ

ಕಮಲ ಪತ್ರ ಪುರಸ್ಕಾರ, ಭಿತ್ತಿಪತ್ರ ಬಿಡುಗಡೆ

“ಹೆಜ್ಜೆ ಬದಲಾದಾಗ” ಕಿರು ಚಿತ್ರ ಬಿಡುಗಡೆ

ಜೇಸಿಐ ಬೆಳ್ಳಾರೆ, ಯುವ ಜೇಸೀ ವಿಭಾಗ ಬೆಳ್ಳಾರೆಗೆ ಜೇಸಿಐ ವಲಯಾಧ್ಯಕ್ಷರ ಭೇಟಿ ಸೆ.11 ರಂದು ನಡೆಯಿತು.
ಬೆಳಿಗ್ಗೆ ಶಾಶ್ವತ ಯೋಜನೆಗಳ ಅನಾವರಣ ಕಾರ್ಯಕ್ರಮ ನಡೆಯಿತು.

ಕ್ಷಯ ಮುಕ್ತ ಭಾರತ 2025 ಹೆಜ್ಜೆ ಬದಲಾದಾಗ ಕಿರು ಚಿತ್ರ ಬಿಡುಗಡೆಗೊಳಿಸಲಾಯಿತು.
ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ ಕಿರುಚಿತ್ರ ಬಿಡುಗಡೆಗೊಳಿಸಿದರು.
ಎಲ್.ಇ.ಡಿ.ಪರದೆಯ ಮೂಲಕ ಜನರು ಕಿರುಚಿತ್ರ ವೀಕ್ಷಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಕೊರೊನಾ ವಾರಿಯರ್ಸ್ ಗಳನ್ನು ಗುರುತಿಸುವ ಕಾರ್ಯಕ್ರಮ ನಡೆಯಿತು.
ಬೆಳ್ಳಾರೆ ಜೇಸಿಐನ ಪೂರ್ವಾಧ್ಯಕ್ಷ ರವಿಕಿರಣ್ ಎಡಪತ್ಯ ರವರಿಗೆ ಕಮಲಪತ್ರ ಪುರಸ್ಕಾರ ನೀಡಿ ಗೌರವಿಸಲಾಯಿತು.

ಜೇಸೀ ಅಧ್ಯಕ್ಷ ಯಸ್.ಪದ್ಮನಾಭ ಕಲಾಸುಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ವಲಯ ಉಪಾಧ್ಯಕ್ಷೆ ಶ್ರೀಮತಿ ಹೇಮಲತಾ ಪ್ರದೀಪ್ ಮತ್ತು ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ದೀಪಕ್ ಗಂಗೂಲಿ, ನಿಕಟ ಪೂರ್ವಾಧ್ಯಕ್ಷ ಜೇಸಿ ವೀರನಾಥ ಕಲ್ಲೋಣಿ, ಕಾರ್ಯದರ್ಶಿ ಜಗದೀಶ ರೈ ಪೆರುವಾಜೆ, ಯುವ ಜೇಸಿ ಅಧ್ಯಕ್ಷ ಕೆ.ಎಸ್.ಚಿರಶ್ರೀ , ಕಾರ್ಯದರ್ಶಿ ವರದಶಂಕರ ಕೆ., ಉಪಸ್ಥಿತರಿದ್ದರು.
ಜೇಸೀ ಪೂರ್ವಾಧ್ಯಕ್ಷ ಲೋಕೇಶ್ ತಂಟೆಪ್ಪಾಡಿ ಪ್ರಾಸ್ತಾವಿಕ ಮಾತನಾಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.