Breaking News

ಸುಳ್ಯ ರಥಬೀದಿಯಲ್ಲಿ ಜಿ.ಬಿ.ಜನರಲ್ ಸ್ಟೋರ್ ಶುಭಾರಂಭ

Advt_Headding_Middle

 

ಸುಳ್ಯ ರಥಬೀದಿಯಲ್ಲಿರುವ ರೋಟರಿ ಶಾಲೆ ಬಳಿ ಆಲೆಟ್ಟಿ ಜಯಪ್ರಕಾಶ ಬೈಪಡಿತ್ತಾಯರವರ ಪುತ್ರ ಗಗನ್ ಬೈಪಡಿತ್ತಾಯ ರವರ ಮಾಲಕತ್ವದ ಜಿ.ಬಿ.ಜನರಲ್ ಸ್ಟೋರ್ ಸೆ.12 ರಂದು ಶುಭಾರಂಭಗೊಂಡಿತು. ಬೆಳಗ್ಗೆ ಆಲೆಟ್ಟಿ ದೇವಳದ ಅರ್ಚಕ ಹರ್ಷಿತ್ ಬನ್ನಿಂತಾಯ ಮತ್ತು ಸುಂದರ ಹೊಳ್ಳ ರವರ ನೇತೃತ್ವದಲ್ಲಿ ಗಣಪತಿ ಹವನ ನಡೆಯಿತು. ಆಲೆಟ್ಟಿ ಸದಾಶಿವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹೇಮಚಂದ್ರ ಬೈಪಡಿತ್ತಾಯ ರವರು ದೀಪ ಬೆಳಗಿಸಿದರು. ಈ ಸಂದರ್ಭ ಶ್ರೀಮತಿ ಶಕುಂತಲಾ ಬೈಪಡಿತ್ತಾಯ, ಶ್ರೀಪತಿ ಬೈಪಡಿತ್ತಾಯ, ಶ್ರೀಮತಿ ಸುಕನ್ಯಾ ಬೈಪಡಿತ್ತಾಯ, ಜಯಪ್ರಕಾಶ ಬೈಪಡಿತ್ತಾಯ, ಶ್ರೀಮತಿ ಮಮತಾ ಬೈಪಡಿತ್ತಾಯ, ಡಾ.ರಮಾದೇವಿ ಬೈಪಡಿತ್ತಾಯ ಪುತ್ತೂರು, ವಕೀಲರಾದ ಕೆ.ಆರ್. ಆಚಾರ್, ಶ್ರೀಮತಿ ಪದ್ಮ ಆಚಾರ್ ಪುತ್ತೂರು, ಸತೀಶ್ ರಾವ್, ಶ್ರೀಮತಿ ಶ್ರೀಲತಾ ಸುರೇಶ್ ಬೈಪಡಿತ್ತಾಯ, ಶ್ರೀಮತಿ ಸರ್ವಮಂಗಲ ಜೆ.ಪುಣಿಚತ್ತಾರು, ವೆಂಕಟ್ರಮಣ ಸೋಮಾಯಾಜಿ ಮುಳ್ಯ, ಸೂರ್ಯನಾರಾಯಣ ಭಟ್, ವೆಂಕಟೇಶ್ ಆಚಾರ್ಯ, ಗಣೇಶ್ ಆಚಾರ್ಯ ಸುಳ್ಯ ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಹಾರೈಸಿದರು. ನೂತನವಾಗಿ ಶುಭಾರಂಭಗೊಂಡ ಸ್ಟೋರ್ ನಲ್ಲಿ ಪ್ಯಾಕಿಂಗ್ ದಿನಸಿ ಸಾಮಾಗ್ರಿಗಳು ಹಾಗೂ ಸ್ಟೇಷನರಿ ಐಟಂಗಳು, ನಂದಿನಿ ಉತ್ಪನ್ನಗಳು, ಹಾಲು ಮತ್ತು ಮೊಸರು ಅಲ್ಲದೇ ಐಡಿಯಲ್ ಐಸ್ ಕ್ರೀಮ್, ಬೇಕರಿ ತಿಂಡಿ ತಿನಿಸುಗಳು, ಸಪ್ತ ಫುಡ್ಸ್ ರವರ ಚಪಾತಿ, ಪರೋಟಗಳು ,ತಂಪು ಪಾನೀಯ ಹಾಗೂ ಗೋಲಿ ಸೋಡ ಲಭ್ಯವಿದೆ. ಗುರು ರಾಘವೇಂದ್ರ ಪ್ರೊಡಕ್ಟ್ಸ್ ರವರ “ಇಮ್ಯುನ್ ಟಿ” ಪೌಡರ್ ಲಭ್ಯವಿರುವುದಾಗಿ ಮಾಲಕರು ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.