ಮುಳ್ಯ – ಅಟ್ಲೂರು ಶ್ರೀ ಮಹಾಗಣಪತಿ ಭಜನಾ ಮಂದಿರ ಮಹಾಸಭೆ

Advt_Headding_Middle

 

ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು ಶ್ರೀ ಮಹಾಗಣಪತಿ ಭಜನಾ ಮಂದಿರದ ವಾರ್ಷಿಕ ಮಹಾಸಭೆಯು ಸೆ.1೦ರಂದು ನಡೆಯಿತು.

ಸಭೆಯ ಅಧ್ಯಕ್ಷತೆ ಮಂದಿರದ ಅಧ್ಯಕ್ಷ ಕೃಪಾಶಂಕರ ಮುಳ್ಯವಹಿಸಿದ್ದರು. ಗೌರವಾಧ್ಯಕ್ಷ ವಿಶ್ವನಾಥ ಮುಳ್ಯ ಮಠ, ಗೌರವ ಕಾರ್ಯದರ್ಶಿ ಮೋಹನ್ ಮುಳ್ಯ, ಮಾಜಿ ಅಧ್ಯಕ್ಷರುಗಳಾದ ರುದ್ರಪ್ಪ ಗೌಡ ಮುಳ್ಯ, ಕಾರ್ಯದರ್ಶಿ ಸುನಿಲ್ ಮುಳ್ಯ ನಡುಬೆಟ್ಟು ಇದ್ದರು. ನಾಗರಾಜ್ ಮುಳ್ಯ ಸ್ವಾಗತಿಸಿದರು. ಶ್ರೀರಾಮ್ ಮುಳ್ಯ ಲೆಕ್ಕಪತ್ರ ಮಂಡಿಸಿದರು.
ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮಂದಿರದ ಗೌರವಾಧ್ಯಕ್ಷರಾಗಿ ವೆಂಕಟ್ರಮಣ ಮುಳ್ಯ, ಗೌರವ ಕಾರ್ಯದರ್ಶಿಯಾಗಿ ನಾಗರಾಜ್ ಮುಳ, ಅಧ್ಯಕ್ಷರಾಗಿ ಹರಿಪ್ರಕಾಶ್ ಮುಳ್ಯ, ಉಪಾಧ್ಯಕ್ಷರಾಗಿ ಧರ್ಮಪಾಲ ಬಟ್ರಮಕ್ಕಿ , ಕಾರ್ಯದರ್ಶಿಯಾಗಿ ವಿದ್ಯಾಧರ ಅಟ್ಲೂರು, ಜತೆ ಕಾರ್ಯದರ್ಶಿಯಾಗಿ ನವೀನ್ ತೋರಣಗಂಡಿ, ಕೋಶಾಧಿಕಾರಿಯಾಗಿ ಜಯಂತ ಮುಳ್ಯ, ಸದಸ್ಯರುಗಳಾಗಿ ಮುರಳಿಕೃಷ್ಣ ವಾಲ್ತಾಜೆ, ರವಿಚಂದ್ರ ಕುಂಚಡ್ಕ, ತಾರಾನಾಥ ಅತ್ಯಡ್ಕ, ದಿನೇಶ ಪರ್ಲಡ್ಕ, ಹರೀಶ ಎ.ವಿ, ಮಹೇಶ ಅಟ್ಲೂರು, ಹರೀಶ ಎಂ.ಎನ್, ಪ್ರಶಾಂತ್ ತೋರಣಗಂಡಿ, ಕೌಶಿಕ್ ಅಟ್ಲೂರು, ಜೀವನ್ ಅತ್ಯಡ್ಕ, ದೀಪಕ್ ಅಟ್ಲೂರು, ಶೇಖರ ಅಟ್ಲೂರು, ದೇವಿಪ್ರಸಾದ್ ಅತ್ಯಾಡಿ ಆಯ್ಕೆಯಾದರು. ಅಚ್ಯುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.
ಗಣೇಶ ಹಬ್ಬದ ಪ್ರಯುಕ್ತ ಮಂದಿರದಲ್ಲಿ ಗಣಪತಿ ಹವನಗಳು, ಭಜನೆ ನಡೆದವು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.