ಸುಳ್ಯ ಹಿಂದೂ ಯುವಕನ ಪ್ರಾಣ ರಕ್ಷಿಸಿದ ಮುಸಲ್ಮಾನ ಯುವಕರು

Advt_Headding_Middle

 

ಸುಳ್ಯ ಗಾಂಧಿನಗರದಲ್ಲಿ ಫ್ಲೆಕ್ಸ್ ಬೋರ್ಡ್ ಅಳವಡಿಸುವ ಸಂಸ್ಥೆಯ ಯುವಕ ಹರ್ಷಿತ್ ಎಂಬಾತ ನಿನ್ನೆ ರಾತ್ರಿ ಹತ್ತು ಮೂವತ್ತರ ವೇಳೆ ಸುಳ್ಯದ ವಿನಾಯಕ ಬಿಲ್ಡಿಂಗಿನಲ್ಲಿ ಬೋರ್ಡ್ ಅಳವಡಿಸುವ ಕೆಲಸದಿಂದ ಮೆಜರ್ಮೆಂಟ್ ತೆಗೆದುಕೊಳ್ಳುತ್ತಿದ್ದರು.
ಈ ವೇಳೆ ಬಿಲ್ಡಿಂಗಿನ ಮುಂಭಾಗದಲ್ಲಿ ಹಾದುಹೋಗುತ್ತಿರುವ ಹೈಟೆನ್ಷನ್ ವಿದ್ಯುತ್ ತಂತಿಗೆ ಇವರ ಅಳತೆ ಮಾಡುವ ಟೇಪ್ ತಾಗಿ ವಿದ್ಯುತ್ ಶಾಕ್ ಉಂಟಾಗಿದೆ.
ಈ ವೇಳೆ ಅದೇ ಕಟ್ಟಡದ ಮುಂಭಾಗದ ಕಬ್ಬಿನ ಜ್ಯೂಸ್ ಅಂಗಡಿಯಲ್ಲಿ ಜ್ಯೂಸ್ ಕುಡಿಯುತ್ತಿದ್ದ ಮಹಮ್ಮದ್ ಝಿಯಾದ್ ಎಂಬ ಯುವಕ ಕೂಡಲೇ ತನ್ನ ಸ್ನೇಹಿತ ಮೆಸ್ಕಾಂ ಸಿಬ್ಬಂದಿ ಮಹಮ್ಮದ್ ತನ್ವೀರ್ ಎಂಬಾತನಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾನೆ. ಈ ಸಂದರ್ಭ ಮಹಮ್ಮದ್ ತನ್ವೀರ್ ಮೆಸ್ಕಾಂ ಕಚೇರಿಯಿಂದ ಲೈನ್ ಆಫ್ ಮಾಡಿ ಕೆಲವೇ ಸೆಕೆಂಡುಗಳ ಒಳಗೆ ಹರ್ಷಿತ್ ರವರ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಸ್ಥಳೀಯರು ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಎಂ ಆರ್ ಹರೀಶ್ ರವರಿಗೆ ಮಾಹಿತಿ ನೀಡಿ ದ ಹಿನ್ನೆಲೆಯಲ್ಲಿ ಅವರು ಕೂಡಲೇ ಸ್ಥಳಕ್ಕೆ ಆಂಬುಲೆನ್ಸ್ ಕಳುಹಿಸಿಕೊಟ್ಟಿದ್ದಾರೆ.
ನಂತರ ಹರ್ಷಿತ್ ರವರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲು ಸುಳ್ಯ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್ ಸಹಕರಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.