ಅನ್ಸಾರಿಯ ವಿದ್ಯಾಸಂಸ್ಥೆ ಎಸ್ ಬಿ ಎಸ್ ವಾರ್ಷಿಕ ಮಹಾಸಭೆ ನೂತನ ಸಮಿತಿ ರಚನೆ

Advt_Headding_Middle

ಸುಳ್ಯ ಅನ್ಸಾರಿಯಾ ವಿದ್ಯಾ ಸಂಸ್ಥೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅನ್ಸಾರಿಯಾ ಅರಬಿಕ್ ಮದ್ರಸ ಇದರ ವಿದ್ಯಾರ್ಥಿ ಸಂಘಟನೆಯಾದ ಸುನ್ನೀ ಬಾಲ ಸಂಘ (SBS) 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಸೆ 12 ರಂದು ಮದ್ರಸ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಝುಬೈರ್ ಹಿಮಮಿ ಪರಪ್ಪು ರವರು ವಹಿಸಿ ದುಆ ಮೂಲಕ ಚಾಲನೆ ನೀಡಿದರು. ಸಭೆಯನ್ನು ಅಧ್ಯಾಪಕರಾದ ಹಂಝತುಲ್ ಕರ್ರಾರ್ ಮುಈನಿ‌ ಸಖಾಫಿ ಉದ್ಘಾಟಿಸಿದರು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಸುಹೈಲ್ ಕೆ. ಮಂಡಿಸಿದರು. ಸಭೆಯಲ್ಲಿ2021-22ನೇ ಸಾಲಿನ ನೂತನ ಸಮಿತಿಯ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ರುಹೈದ್ , ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸುಹೈಲ್ ಕೋಶಾಧಿಕಾರಿಯಾಗಿ ಮುಹಮ್ಮದ್ ರವರನ್ನು ಹಾಗೂ ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಆಶಿಖ್ , ಮುಹಮ್ಮದ್ ಅಝಾದ್ ಮತ್ತು ಜೊತೆ ಕಾರ್ಯದರ್ಶಿಯಾಗಿ ಅಲ್ಫಾಝ್ , ಸಿನಾನ್ ರವರನ್ನು ಆಯ್ಕೆ ಮಾಡಲಾಯಿತು. ಮದ್ರಸ ಮುಖ್ಯ ನಾಯಕನಾಗಿ ನಿಹಾನ್ ಅಹ್ಮದ್ ರವರನ್ನು ಆಯ್ಕೆ ಮಾಡಲಾಯಿತು‌. ಸಭೆಯಲ್ಲಿ SBS ಸಂಚಾಲಕರಾದ ನೌಶಾದ್ ಮದನಿ‌ ಹೆಚ್.ಕಲ್ ಸ್ವಾಗತಿಸಿ ನೂತನ ಕಾರ್ಯದರ್ಶಿ ಸುಹೈಲ್ ಧನ್ಯವಾದಗೈದರು‌.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.