ಅಕ್ರಮ ದನ ಸಾಗಾಟ ಪ್ರಕರಣ ಪತ್ತೆ

Advt_Headding_Middle

ಜಟ್ಟಿಪಳ್ಳದಲ್ಲಿ ಕಂಪೌಂಡಿಗೆ ಗುದ್ದಿ ನಿಂತ ವಾಹನ – ಓರ್ವ ಪೋಲೀಸರ ವಶ, ಇಬ್ಬರು ಪರಾರಿ

ಓಮ್ನಿ ಕಾರಿನಲ್ಲಿ ಹಿಂಸಾತ್ಮಕವಾಗಿ ತುಂಬಿಸಿಕೊಂಡು ಅಕ್ರಮವಾಗಿ ಎರಡು ದನಗಳನ್ನು ಸಾಗಾಟ ಮಾಡುತ್ತಿದ್ದಾಗ ಪೋಲೀಸರು ಅಡ್ಡಗಟ್ಟಿದ ಹಾಗೂ ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅಕ್ರಮ ದನ ಸಾಗಾಟಗಾರರ ವಾಹನ ಮಾರುತಿಯವರ ಕಂಪೌಂಡಿಗೆ ಗುದ್ದಿದ ಕುರಿತು ಖಚಿತ ಮಾಹಿತಿ ಮೇರೆಗೆ ಸುಳ್ಯ ಮತ್ತು ಎಸ್. ಐ.ಯವರು ಕಾರನ್ನು ತಡೆಗಟ್ಟಿ ಓರ್ವ ಆರೋಪಿಯನ್ನು ವಶ ಪಡಿಸಿಕೊಂಡ ಘಟನೆ ಸೆ. 12 ರಂದು ರಾತ್ರಿ ವರದಿಯಾಗಿದೆ.

ಮೂರು ಮಂದಿ ಆರೋಪಿಗಳು ಕಾರಿನಲ್ಲಿ ದನಗಳನ್ನು ತುಂಬಿಸಿಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ತಿಳಿದು ಪೋಲೀಸರು ಕಾರನ್ನು ಅಡ್ಡ ಗಟ್ಟಿ ನಿಲ್ಲಿಸಲು ಸೂಚನೆ ನೀಡುವ ಸಂದರ್ಭ ಚಾಲಕನು ಕಾರನ್ನು ತಿರುಗಿಸಿ ಮತ್ತೆ ಕಾನತ್ತಿಲ ಕಡೆಗೆ ಹೋಗಲು ಯತ್ನಿಸಿದಾಗ ಮಾರುತಿ ಅಪಾರ್ಟ್ ಮೆಂಟ್ ನ ಕಂಪೌಂಡಿಗೆ ಡಿಕ್ಕಿ ಹೊಡೆಯಿತು. ಚಾಲಕ ಕಾರಿನಿಂದಿಳಿದು ಪರಾರಿಯಾದಾಗ ಕಾರು ಹಿಂಬದಿ ಚಲಿಸಿ ಗೋಡೆಗೆ ತಾಗಿ ನಿಂತಿತು. ಅಷ್ಟರಲ್ಲಿ ಅಲ್ಲಿ ಜಮಾಯಿಸಿದವರು ಆರೋಪಿಗಳನ್ನು ಹಿಡಿಯಲು ಯತ್ನಿಸಿದಾಗ ಮೂವರಲ್ಲಿ ಇಬ್ಬರು ಪರಾರಿಯಾಗಿ ಒಬ್ಬ ಆರೋಪಿಯನ್ನು ಪೋಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಸ್ಥಳದಲ್ಲಿ ಬಜರಂಗದಳ ಕಾರ್ಯಕರ್ತರು ಮತ್ತು ಸ್ಥಳೀಯರು ಸೇರಿದ್ದರು. ಓಮ್ನಿ ಕಾರನ್ನು ಜಾನುವಾರು ಸಮೇತ ಪೋಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ. ದನವನ್ನು ಓಮ್ನಿಯಲ್ಲಿ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿತ್ತು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.