ದುಗಲಡ್ಕ; ಮಿತ್ರ ಯುವಕ ಮಂಡಲ, ಕುರಲ್ ತುಳುಕೂಟದ ವಿಶೇಷ ಸಭೆ

Advt_Headding_Middle

 

ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಗಾಂಧಿ ಜಯಂತಿ ಆಚರಣೆಗೆ ನಿರ್ಧಾರ

ದುಗಲಡ್ಕದ ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗಲಡ್ಕ ಇದರ ವಿಶೇಷ ಸಭೆಯು ಮಿತ್ರ ಯುವಕ ಮಂಡಲ ಕೊಯಿಕುಳಿ ಇದರ ಕಟ್ಟಡದಲ್ಲಿ ಸೆ.12 ರಂದು ನಡೆದು ಅ.2ರಂದು ಗಾಂಧಿ ಜಯಂತಿಯನ್ನು ವೈವಿಧ್ಯಮಯವಾಗಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಗಾಂಧಿಜಯಂತಿಯಂದು ಹಲವಾರು ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚಿಸಲಾಯಿತು. ವಿದ್ಯಾರ್ಥಿಗಳಿಗೆ ದೇಶ ಭಕ್ತಿ ಗೀತೆ, ಗಾಂಧಿ ಚಿತ್ರ ಬಿಡಿಸುವ ಸ್ಪರ್ಧೆ, ಸಾರ್ವಜನಿಕರಿಗೆ “ರಘುಪತಿ ರಾಘವ” ಭಜನಾ ಸ್ಪರ್ಧೆ ಹಾಗೂ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು. ಸಭಾ ಕಾರ್ಯಕ್ರಮದಲ್ಲಿ ಗಾಂಧಿ ಚಿಂತನೆ- ಉಪನ್ಯಾಸ, ಸನ್ಮಾನ ಕಾರ್ಯಕ್ರಮ ಬಳಿಕ ಗಾಂಧಿ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸಭೆಯಲ್ಲಿ ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ ಸಲಹೆ ಸೂಚನೆ ನೀಡಿದರು. ತುಳುಕೂಟದ ಅಧ್ಯಕ್ಷ ನಾರಾಯಣ ಟೈಲರ್, ಕಾರ್ಯದರ್ಶಿ ನವ್ಯ ದಿನೇಶ್, ಯುವಕ ಮಂಡಲದ ಅಧ್ಯಕ್ಷ ದಿನೇಶ್ ಕೊಯಿಕುಳಿ, ಕಾರ್ಯದರ್ಶಿ ಅಕ್ಷಯ್ ಮೂಡೆಕಲ್ಲು, ಕೋಶಾಧಿಕಾರಿ ಚಿದಾನಂದ ಕೊಯಿಕುಳಿ ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.