ಪಟೇಲ್ ಡಯಾಗ್ನಸ್ಟಿಕ್ ಲ್ಯಾಬ್ ಬೆಳ್ಳಾರೆಯಲ್ಲಿ ಶುಭಾರಂಭ

Advt_Headding_Middle

ಪಟೇಲ್ +1 ಪಟೇಲ್ ಡಯಾಗ್ನಸ್ಟಿಕ್ ಲ್ಯಾಬ್ ಬೆಳ್ಳಾರೆಯ ಮಾಸ್ತಿಕಟ್ಟೆ ಬಳಿ ರಾಯಲ್‌ ಕಾಂಪ್ಲೆಕ್ಸ್ ನಲ್ಲಿ ಸೆ.13 ರಂದು ಶುಭಾರಂಭಗೊಂಡಿತು.
ಇದರ ಉದ್ಘಾಟನೆಯನ್ನು ಬೆಳ್ಳಾರೆ ಠಾಣೆ ಎಸೈ ಆಂಜನೇಯ ರೆಡ್ಡಿ ನೆರವೇರಿಸಿದರು.
ಮಾಡನ್ನೂರ್ ನೂರುಲ್ ಹುದಾ ಅಕಾಡೆಮಿ ಪ್ರಾಂಶುಪಾಲರಾದ ಹನೀಫ್ ಹುದವಿ ಮಾಡನ್ನೂರ್ ಕಾರ್ಯಕ್ರಮದಲ್ಲಿ ದುವಾಶಿರ್ವಚನ ನೀಡಿದರು.

ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ‌ ಚಂದ್ರಶೇಖರ್ ಪನ್ನೆ ,ವರ್ತಕರ ಸಂಘದ ಅಧ್ಯಕ್ಷ ಮಾಧವ ಗೌಡ ಕಾಮಧೇನು, ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಂ ಶಹೀದ್, ಜಿ.ಪಂ ಮಾಜಿ ಸದಸ್ಯ ಚಂದ್ರಶೇಖರ್ ಕಾಮತ್, ಗ್ರಾ.ಪಂ ಸದಸ್ಯ ಇಕ್ಬಾಲ್ ಬೆಳ್ಳಾರೆ, ಡಾ.ರಿಜ್ವಾನ್, ಆರೀಫ್ ಇಂಜಿನಿಯರ್, ಪಟೇಲ್ ಅಬ್ದುಲ್‌ ರಹಿಮಾನ್ ಹಾಜಿ,ಮಾಡನ್ನೂರ್ ನೂರುಲ್ ಹುದಾ ಅಕಾಡೆಮಿ ಪ್ರಾಂಶುಪಾಲರಾದ ಹನೀಫ್ ಹುದವಿ,ಶಾಹಿನ್ ಮಾಲ್ ಮಾಲಕ ಹಾಜಿ ಎಸ್ ಎಂ ಅಬ್ದುಲ್‌ ಹಮೀದ್,ಅಬ್ದುಲ್‌ಖಾದರ್ ಹಾಜಿ‌ ಪಟೇಲ್, ಮಮ್ಮಾಲಿ ಹಾಜಿ,ಹಾಜಿ ಅಬೂಭಕ್ಕರ್ ಮಂಗಳ,ಹನೀಫ್ ನಜಾತ್,ರಜಾಕ್ ಹಾಜಿ ಶೀತಲ್ ,ರಜಾಕ್ ಹಾಜಿ ರಾಜಧಾನಿ, ಹಾಜಿ ಐ ಇಸ್ಮಾಯಿಲ್,ಅತಾವುಲ್ಲಾ ಅಝ್ಹರಿ,ಮಹಮೂದ್ ಹಾಜಿ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು.
“ಬೆಳ್ಳಾರೆಯ ಜನತೆ ಇನ್ನೂ ರಕ್ತ ಮತ್ತು ಇನ್ನಿತರ ತಪಾಸಣೆಗಳಿಗೆ ಹತ್ತಿರದಲ್ಲಿ ದೊರೆಯುವಂತಾಗಲಿ ಎಂದು ಬೆಳ್ಳಾರೆಯಲ್ಲಿ ಲ್ಯಾಬ್ ಪ್ರಾರಂಭಿಸಿದ್ದೇವೆ.
ಅಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಯಂತ್ರಗಳಿಂದ ರಕ್ತ ತಪಾಸಣೆ ಮತ್ತು ಇನ್ನಿತರ ತಪಾಸಣೆಗಳನ್ನು ಮಾಡಲಾಗುವುದು ಅತ್ಯಂತ ವೇಗದಲ್ಲಿ ಫಲಿತಾಂಶ ನೀಡಲಾಗುವುದು ಎಂದು ಪಾಲುದಾರರಾದ ಹಾಜಿ ಇಬ್ರಾಹಿಂ ಕತ್ತಾರ್,ಬದ್ರುದ್ದೀನ್ ಪಟೇಲ್ ಈ ಸಂದರ್ಭದಲ್ಲಿ ತಿಳಿಸಿದರು.”
ದ.ಕ ಜಿಲ್ಲಾ ವಕ್ಪ್ ಸಲಹಾ ಸಮಿತಿ ಸದಸ್ಯ ಕೆ.ಎಂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಸುಳ್ಯ ಪಟೇಲ್ ಲ್ಯಾಬ್ ನ ಸಹ ಸಂಸ್ಥೆ
ಸುಳ್ಯ ಕಾರ್ಯಚರಿಸುತ್ತಿದ್ದ ಪಟೇಲ್ ಲ್ಯಾಬೋರೇಟರಿ ಸಂಸ್ಥೆ ಉತ್ತಮ ಗುಣಮಟ್ಟ ಮತ್ತು ವಿಶ್ವಾಸಾರ್ಹ ಸೇವೆಯಲ್ಲಿ ಹೆಸರುಗಳಿಸಿದ ‌ಸಂಸ್ಥೆ ಪಟೇಲ್ ಮೆಡಿಕಲ್ ಮತ್ತು ಲ್ಯಾಬೋರೇಟರಿ ಯು ಎ ಇ ಯಲ್ಲೂ ಕಾರ್ಯಚರಿಸುತ್ತಿದೆ. ಅದರಿಂದ ಬೆಳ್ಳಾರೆಯಲ್ಲಿ ನೂತನವಾಗಿ ಪ್ರಾರಂಭಿಸಿದ ಸಂಸ್ಥೆಯ ಅಭಿವೃದ್ಧಿ ಬೆಳ್ಳಾರೆ ಜನತೆ ಸಹಕರಿಸಲು ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರರು ವಿನಂತಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.