ಸುಳ್ಯ : ಅಕ್ರಮ ದನ ಸಾಗಾಟ

Advt_Headding_Middle

 

ಓರ್ವ ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ

ಸುಳ್ಯದ ಜಟ್ಟಿಪಳ್ಳ ಸಮೀಪ ಅಕ್ರಮವಾಗಿ ಎರಡು ದನಗಳನ್ನು ಓಮ್ನಿಯಲ್ಲಿ ಸಾಗಾಟ ಮಾಡುತ್ತಿದ್ದಾಗ ಪೋಲೀಸರಿಂದ ಬಂಧಿತರಾಗಿರುವ ವ್ಯಕ್ತಿಗೆ ಸುಳ್ಯ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಸೆ.12 ರಂದು ರಾತ್ರಿ ದನಗಳನ್ನು ಅಕ್ತಮವಾಗಿ ಸಾಗಿಸುತ್ತಿದ್ದ ಓಮ್ನಿಯನ್ನು ಸುಳ್ಯ ಪೋಲೀಸರು ಜಟ್ಟಿಪಳ್ಳದಲ್ಲಿ ಅಡ್ಡಗಟ್ಟಿ ಪುತ್ತೂರು ತಾಲೂಕಿನ ಕಬಕ ನಿವಾಸಿ ಅಬ್ದುಲ್ಲ ಎಂಬ ವ್ಯಕ್ತಿಯನ್ನು ಬಂಧಿಸಿದ್ದರು. ಓಮ್ನಿಯಲ್ಲಿದ್ದ ಇನ್ನಿಬ್ಬರು ಓಡಿ ತಪ್ಪಿಸಿಕೊಂಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಸುಳ್ಯ ಪೋಲೀಸರು ಇಂದು ಅಬ್ದುಲ್ಲರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಆರೋಪಿಗೆ ಸುಳ್ಯ ಹಿರಿಯ ನ್ಯಾಯಾಲಯದ ನ್ಯಾಯಾಧೀಶ ಸೋಮಶೇಖರ್ ರವರು ಇಂದಿನಿಂದ 15 ದಿನಗಳ (ಸೆಪ್ಟೆಂಬರ್ 28 ) ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿರುತ್ತಾರೆ ಎಂದು ತಿಳಿದುಬಂದಿದೆ. ಆರೋಪಿ ಪರ ವಕೀಲರು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು ಎಪಿಪಿ ಜನಾರ್ಧನ್ ಬಿ . ಯವರು ಆಕ್ಷೇಪಣೆಯನ್ನು ನೀಡಲು ಕಾಲಾವಕಾಶ ಕೋರಿದ್ದು ಮಾನ್ಯ ನ್ಯಾಯಾಧೀಶರು ಕಾಲಾವಕಾಶ ನೀಡಿರುವುದಾಗಿ ತಿಳಿದು ಬಂದಿದೆ.
ಪರಾರಿಯಾಗಿರುವ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲು ಪೊಲೀಸರು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.