ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಸುಳ್ಯದ ಕಾರ್ಟೂನಿಸ್ಟ್ ದಿನೇಶ್ ಕುಕ್ಕುಜಡ್ಕ ಬಿಡಿಸಿದ ಕಾರ್ಟೂನ್ ಮಲಯಾಳಂನ ಚಿತ್ರನಟನ ಫೇಸ್ ಬುಕ್ ಮೂಲಕ ವೈರಲ್

Advt_Headding_Middle

 

ಪರ ವಿರೋಧ ಪ್ರತಿಕ್ರಿಯೆಗಳ ಮಹಾಪೂರ
ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಖ್ಯಾತ ವ್ಯಂಗ್ಯಚಿತ್ರಕಾರ ಸುಳ್ಯದ ದಿನೇಶ್ ಕುಕ್ಕುಜಡ್ಕ ಅವರು ರಚಿಸಿದ ವ್ಯಂಗ್ಯ ಚಿತ್ರವನ್ನು ಮಲಯಾಳಂ ನ ಖ್ಯಾತ ನಟರೊಬ್ಬರು ತಮ್ಮ ಫೇಸ್ ಬುಕ್ ಖಾತೆಗೆ ಹಾಕಿಕೊಂಡಿದ್ದು ಅದು ಈಗ ಭಾರೀ ವೈರಲ್ ಆಗಿ ಪರ ವಿರೋಧದ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.

ವ್ಯಂಗ್ಯಚಿತ್ರಕಾರ ದಿನೇಶ್ ಕುಕ್ಕುಜಡ್ಕ ರವರು ಪೆಟ್ರೋಲ್ ಬೆಲೆ ಏರಿಕೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಕಾರ್ಟೂನ್ ಬರೆದು ಸಾಮಾಜಿಕ ಜಾಲತಾಣಕ್ಕೆ ಹಾಕಿಕೊಂಡಿದ್ದರು. ನರೇಂದ್ರ ಮೋದಿಯವರು ಪೆಟ್ರೋಲ್ ಬೈಕೊಂದನ್ನು ಉಲ್ಟಾ ಮಾಡಿ ನಿಲ್ಲಿಸಿ ಅದರ ಚಕ್ರಗಳನ್ನು ಚರಕದ ರೀತಿ ತಿರುಗಿಸುತ್ತಾ ನೂಲುತ್ತಿರುವಂತೆ ಹಾಗೂ ಈ ದೃಶ್ಯವನ್ನು ಗೋಡೆಯ ಫೋಟೋದಲ್ಲಿರುವ ಮಹಾತ್ಮಾಗಾಂಧೀಜಿಯವರು ನೋಡುತ್ತಾ ಬೆವರಿಳಿಸು ತ್ತಿರುವಂತೆ ಈ ವ್ಯಗ್ಯಚಿತ್ರ ಬಿಡಿಸಲಾಗಿದೆ. ಈ ಚಿತ್ರವನ್ನು ಮೆಚ್ಚಿಕೊಂಡ ಕೇರಳದ ಚಿತ್ರನಟ, ಸಿನಿಮಾ ನಿರ್ಮಾಪಕ ಹಾಗೂ ಬರಹಗಾರರಾದ ಮುರಳಿ ಗೋಪಿಯವರು ಅದನ್ನು ತನ್ನ ಫೇಸ್ ಬುಕ್ ಖಾತೆಗೆ ಹಾಕಿಕೊಂಡಿದ್ದರು. ಒಂದೇ ದಿನದಲ್ಲಿ ಈ ಪೋಸ್ಟ್ 29 ಸಾವಿರ ಲೈಕ್, 3,300 ಶೇರ್ ಆಗಿದೆ. 2 ಸಾವಿರದ ಇನ್ನೂರು ಮಂದಿ ಕಮೆಂಟ್ ಮಾಡಿದ್ದಾರೆ. ಪರವಿರೋಧ ಚರ್ಚೆಗಳು ನಡೆದಿವೆ. ಹಲವರು ವ್ಯಂಗ್ಯಚಿತ್ರವನ್ನು ಮೆಚ್ಚಿಕೊಂಡಿದ್ದರೆ, ಇನ್ನು ಹಲವರು ಕಾರ್ಟೂನಿಸ್ಟ್ ದಿನೇಶ್ ಕುಕ್ಕುಜಡ್ಕ ರವರ ವಿರುದ್ಧ, ಅದನ್ನು ತನ್ನ ಖಾತೆಯಲ್ಲಿ ಹಂಚಿಕೊಂಡ ನಟ ನಿರ್ದೇಶಕ ಮುರಳಿ ಗೋಪಿಯರ ವಿರುದ್ಧ ಕಮೆಂಟ್ ಹಾಕಿದ್ದಲ್ಲದೆ, ಈ ನಟನ ತಂದೆಯವರಾದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರ ನಟ ಭರತ್ ಗೋಪಿ ಅವರನ್ನೂ ಟೀಕಿಸಿ ಕಮೆಂಟ್ ಹಾಕಿದ್ದಾರೆ.
ಅದು ಇದೀಗ ಕೇರಳದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಮಲಯಾಳಂನ ಪ್ರಮುಖ ಸಿನೆಮಾ ನಿರ್ಮಾಪಕ ಮತ್ತು ನಟ ನಿರ್ದೇಶಕರಾದ ಮುರಳಿ ಗೋಪಿಯವರು ದೃಶ್ಯಂ 2 ಸೂಪರ್ ಹಿಟ್ ಚಿತ್ರದಲ್ಲಿ ತನಿಖಾ ತಂಡದ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದರು ಇದಲ್ಲದೆ ಹಲವು ಚಿತ್ರಗಳಲ್ಲಿ ನಟಿಸಿರುವ ಅವರು ಮೋಹನ್ ಲಾಲ್ ನಟನೆಯ ಲೂಸಿಫರ್ ಚಿತ್ರದ ಕಥೆಯನ್ನು ಕೂಡ ಬರೆದಿದ್ದಾರೆ.

ಕೇರಳದಲ್ಲಿ ತನ್ನ ಕಾರ್ಟೂನ್ ವೈರಲ್ ಆಗಿ ಪ್ರತಿಕ್ರಿಯೆ ದೊರೆತಿರುವುದರಿಂದ ದಿನೇಶ್ ಕುಕ್ಕುಜಡ್ಕ ಉತ್ತೇಜಿತರಾಗಿದ್ದು, ತನ್ನ ಸಂಭ್ರಮವನ್ನು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.