ಪಂಜದಲ್ಲಿ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ವತಿಯಿಂದ ಆರೋಗ್ಯ ಸ್ವಯಂಸೇವಕರ ಕಾರ್ಯಗಾರ ಮತ್ತು ಅಭಿಯಾನ

Advt_Headding_Middle

 ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ವತಿಯಿಂದ ಆರೋಗ್ಯ ಸ್ವಯಂ ಸೇವಕರ ಕಾರ್ಯಗಾರ ಮತ್ತು ಅಭಿಯಾನ ಸೆ.14 ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ಜರುಗಿತು. ಪಂಜದ ಹಿರಿಯ ವೈದ್ಯ ಡಾ.ಯಂ. ರಾಮಯ್ಯ ಭಟ್ ಉದ್ಘಾಟಿಸಿ ಮಾತನಾಡಿ”ಕೊರೋನಾ ಆರಂಭವಾದಾಗ ಅದನ್ನು ಎದುರಿಸಲು ವೈದ್ಯಕೀಯ ವಲಯದಲ್ಲಿ ಬಹಳಷ್ಟು ಕಷ್ಟ ಪಡುವಂತಾಗಿತ್ತು. ಎರಡನೇ ಅಲೆ ಸಾಕಷ್ಟು ಹಬ್ಬಿದ್ದು. ಮುಂದೆ ಮೂರನೇ ಅಲೆ ಆರಂಭಗೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತೀಯ ಜನತಾ ಪಾರ್ಟಿ ಸ್ವಯಂ ಸೇವಕರ ವತಿಯಿಂದ ಈ ಹಿಂದೆ ಕೊರೋನ ಸಂಕಷ್ಟ ಸಮಯದಲ್ಲಿ ಸಾಕಷ್ಟು ಸೇವೆಗಳು ನೀಡಿದ್ದು. ಮುಂದಿನ ಅಲೆಯ ಸಂದರ್ಭ ಯಾವ ರೀತಿಯಲ್ಲಿ ಸೇವೆ ನೀಡ ಬೇಕು ಎಂಬುದರ ಕುರಿತು ಆರೋಗ್ಯ ಸ್ವಯಂ ಸೇವಕರ ಕಾರ್ಯಗಾರ ” ಎಂದು ಹೇಳಿದರು.

ಭಾ.ಜ.ಪಾ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಸಭಾಧ್ಯಕ್ಷತೆ ವಹಿಸಿದ್ದರು.‌ಭಾ.ಜ.ಪಾ. ಜಿಲ್ಲಾ ಉಪಾಧ್ಯಕ್ಷ, ಆರೋಗ್ಯ ಸ್ವಯಂ ಸೇವಾ ಸಂಚಾಲಕ ಈಶ್ವರ್ ಕಟೀಲ್,ಭಾ.ಜ.ಪಾ ಜಿಲ್ಲಾ ಉಪಾಧ್ಯಕ್ಷ ಬುಡಿಯಾರು ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ,ದ.ಕ. ಭಾ.ಜ.ಪಾ.ಆರೋಗ್ಯ ಸ್ವಯಂ ಸೇವಾ ಸದಸ್ಯ ಧೀರೇಶ್ ಕೆ, ಆರೋಗ್ಯ ಸ್ವಯಂ ಸೇವಾ ಸುಳ್ಯ ಮಂಡಲ ಸಂಚಾಲಕ ಸುಬ್ರಹ್ಮಣ್ಯ ‌ಕುಳ ,, ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆರೋಗ್ಯ ಸ್ವಯಂ ಸೇವಾ ಸುಳ್ಯ ಮಂಡಲ ಸಂಚಾಲಕ ಸುಬ್ರಹ್ಮಣ್ಯ ‌ಕುಳ ಸ್ವಾಗತಿಸಿದರು.


ಭಾ.ಜ.ಪಾ.ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು.ಭಾ.ಜ.ಪಾ.ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ ವಂದಿಸಿದರು. ಬಳಿಕ ಸಮುದಾಯ ವೈದ್ಯಕೀಯ ವಿಭಾಗ ಕೆ.ವಿ.ಜಿ. ಮುಖ್ಯಸ್ಥ ಡಾ.ನಾರಾಯಣ ಹೊಳ್ಳ ಆರೋಗ್ಯ ಸ್ವಯಂ ಸೇವಕ‌ ಸುಳ್ಯ ಮಂಡಲ ಸಹ‌‌ ಸಂಚಾಲಕ ವಿನಯ್ ಕುಮಾರ್ ಕಂದಡ್ಕ ಮಾಹಿತಿ ನೀಡಿದರು.ಭಾ.ಜ.ಪಾ ಮಂಡಲ ಉಪಾಧ್ಯಕ್ಷೆ ಗಂಗಾರತ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಬಳಿಕ ಪಾದಾಧಿಕಾರಿಗಳ‌ ಸಭೆ ಜರುಗಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.