Breaking News

ಆಲೆಟ್ಟಿ ಪಂಚಾಯತ್ ಸಾಮಾನ್ಯ ಸಭೆ

Advt_Headding_Middle

 

ಬೀದಿ ದೀಪ ಅಳವಡಿಕೆಯ ವರ್ಷದ ಲೆಕ್ಕ ಪತ್ರ ನೀಡುವಂತೆ ಸದಸ್ಯರ ಆಗ್ರಹ

ಆಲೆಟ್ಟಿ ಪಂಚಾಯತ್ ನ ಸಾಮಾನ್ಯ ಸಭೆಯು ಸೆ.14 ರಂದು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಕುಡೆಕಲ್ಲು ರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಪಿ.ಡಿ.ಒ ಕೀರ್ತಿಪ್ರಸಾದ್, ಕಾರ್ಯದರ್ಶಿ ಸೃಜನ್ ಎ.ಜಿ ಉಪಸ್ಥಿತರಿದ್ದರು.
ಕಳೆದ ತಿಂಗಳ ಸಾಮಾನ್ಯ ಸಭೆಯ ನಿರ್ಣಯ ಪ್ರತಿ ವರದಿಮಂಡಿಸಲಾಯಿತು.
ನೀರಿನ ಬಿಲ್ಲು ಸಂಗ್ರಹಕ್ಕೆ ನೇಮಕಾತಿ ಮಾಡಲಾಗಿದೆಯಾದರೂ ವಸೂಲಾತಿ ಬಾಕಿ ಇದೆ ಯಾಕೆ ಎಂದು ಸದಸ್ಯರು ಪ್ರಶ್ನಿಸಿದರು.
ಗ್ರಾಮದಲ್ಲಿರುವ ವಿದ್ಯುತ್ ಸಂಪರ್ಕ ಬಾಕಿ ಇರುವ ಮನೆಗಳ ಅಂಕಿ ಅಂಶದ ಮಾಹಿತಿ ಕಲೆ ಹಾಕಿ ಸಂಬಂಧಪಟ್ಟ ಇಲಾಖೆಗೆ ಬರೆದು ಕಳುಹಿಸಬೇಕು.
ಗಡಿಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರು ಎರಡು ತಿಂಗಳಿಂದ ಕೋವಿಡ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಆಶಾ ಕಾರ್ಯಕರ್ತೆಯರು ಮನೆ ಸಂಪರ್ಕಮಾಡಲಾಗುತ್ತಿಲ್ಲ. ಅಲ್ಲಿ ಮಹಿಳೆಯರೇ ಇರುವುದರಿಂದ ಅವರಿಗೆ ಮೂಲಭೂತ ವ್ಯವಸ್ಥೆ ಇರುವುದಿಲ್ಲ. ಇದರಿಂದ ಬಹಳ ಕಷ್ಟ ಪಡಬೇಕಾಗುತ್ತಿದೆ ಎಂದು ಗೀತಾ ಕೋಲ್ಚಾರು ಪ್ರಸ್ತಾಪಿಸಿದರು.
ನಮ್ಮ ಆರೋಗ್ಯದ ಬಗ್ಗೆಯಾಗಲಿ ವ್ಯವಸ್ಥೆಯ ಕುರಿತು ಕಳೆದ ಎರಡು ತಿಂಗಳಿಂದ ಯಾರೂ ವಿಚಾರಿಸಿಲ್ಲ ನಾವು ತುಂಬಾ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ತಮ್ಮ ಅಳಲನ್ನು ಪಂಚಾಯತ್ ಆಡಳಿತ ಮಂಡಳಿಯ ಗಮನಕ್ಕೆ ಕೋಲ್ಚಾರು ಭಾಗದ ಆಶಾ ಕಾರ್ಯಕರ್ತೆಯೋರ್ವರು ತಂದರು.
ಈ ಬಗ್ಗೆ ಪಂಚಾಯತ್ ಮುಖಾಂತರ ಜಿಲ್ಲಾಡಳಿತಕ್ಕೆ ಮತ್ತು ತಾಲೂಕು ಆಡಳಿತಕ್ಕೆ ಪತ್ರಬರೆದುಕಳುಹಿಸಿಕೊಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸರಕಾರದ ಸುತ್ತೋಲೆಯಂತೆ
ಪಂಚಾಯತ್ ಗ್ರಂಥಾಲಯವನ್ನು ಸುಸಜ್ಜಿತ ಸಭಾಂಗಣಕ್ಕೆ ಸ್ಥಳಾಂತರಿಸಿ ಡಿಜಿಟಲೀಕರಣಗೊಳಿಸಿ ಗ್ರಂಥಾಲಯ ಸಮಿತಿ ರಚಿಸುವ ಬಗ್ಗೆ ಪಿಡಿಒ ಪ್ರಸ್ತಾಪಿಸಿದರು.
ಈಗ ಸಾಮಾನ್ಯ ಸಭೆ ನಡೆಯುತ್ತಿರುವ ಸಭಾಂಗಣಕ್ಕೆ ಗ್ರಂಥಾಲಯವನ್ನು ವರ್ಗಾಯಿಸುವ ಕುರಿತು ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.
ಪಂಚಾಯತ್ ಗೆ ಮಂಜೂರಾದ ಗುಂಡ್ಯ ಎಂಬಲ್ಲಿ 4.72 ಎಕ್ರೆ ಮನೆ ನಿವೇಶನ ಜಾಗವನ್ನು ಗಡಿಗುರುತು ಮಾಡಿ ಸಮತಟ್ಟು ಗೊಳಿಸಿ ರಸ್ತೆ ಸಂಪರ್ಕದ ಕೆಲಸ ಮಾಡಿಸಿ ಬಡಾವಣೆಯ ನಕ್ಷೆ ತಯಾರಿಸುವ ಬಗ್ಗೆ ನಿರ್ಣಯಿಸಲಾಯಿತು. ಮೈಂದೂರು ಎಂಬಲ್ಲಿ ಮೀಸಲಿರಿಸಿದ ಅರ್ಧ ಎಕ್ರೆ ಜಾಗದಲ್ಲಿ ಘನತ್ಯಾಜ್ಯ ಘಟಕನಿರ್ಮಾಣವಾಗಲಿರುವ ಬಗ್ಗೆ ಹಾಗೂ ತ್ಯಾಜ್ಯ ಸಂಗ್ರಹದ ವಾಹನ ಖರೀದಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಬೀದಿ ದೀಪ ಅಳವಡಿಕೆ ಮತ್ತು ಅದರ ನಿರ್ವಹಣೆಯ ಖರ್ಚು ವೆಚ್ಚದ ಬಗ್ಗೆ ಸಂಕ್ಷಿಪ್ತ ಲೆಕ್ಕ ಪತ್ರ ಸಭೆಗೆ ಇರಿಸುವಂತೆ ಸದಸ್ಯ ಸುದೇಶ್ ಅರಂಬೂರು ಆಗ್ರಹಿಸಿದರು. ಒಂದು ವರ್ಷದ ಲೆಕ್ಕಚಾರ ಪಕ್ಕ ವಿವರ ನೀಡಬೇಕು ಎಂದು ಕೇಳಿದರು.
ಕಳೆದ ಅವಧಿಯ ಕ್ರಿಯಾಯೋಜನೆಯ ಟೆಂಡರ್ ಪ್ರಕ್ರಿಯೆ ಆದರೂ ಇನ್ನೂ ಕೆಲಸ ಆರಂಭಿಸಲಿಲ್ಲ. ಕೆಲವು ಕಡೆ ಅಸಮರ್ಪಕ ಕಾಮಗಾರಿ ನಡೆಯುತ್ತಿದೆ ಎಂದು ಸದಸ್ಯ ಧರ್ಮಪಾಲ ಕೊಯಿಂಗಾಜೆ ಆರೋಪಿಸಿದರು. ಕಾಮಗಾರಿಯ ಕೆಲಸ ನಡೆದು ಗುತ್ತಿಗೆದಾರರಿಗೆ ಬಿಲ್ ಪಾವತಿಸುವ ಮುಂಚೆ ಆಯಾ ವಾರ್ಡಿನ ಸದಸ್ಯರ ಗಮನಕ್ಕೆ ಪಿ.ಡಿ.ಒ ರವರು ತರಬೇಕು ಎಂದು ಚಂದ್ರಕಾಂತ ನಾರ್ಕೋಡು ಒತ್ತಾಯಿಸಿದರು.
ಬಾರ್ಪಣೆ ಅಂಗನವಾಡಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮೋರಿ ಅಳವಡಿಸಿಕೊಡುವಂತೆ ಸತ್ಯ ಪ್ರಸಾದ್ ಗಬ್ಬಲ್ಕಜೆ ಬೇಡಿಕೆ ಇರಿಸಿದರು.
ನಾಗಪಟ್ಟಣ ಪಂಚಾಯತ್ ಸಂಬಂಧಪಟ್ಟ ಅಂಗಡಿಕೋಣೆ ಏಲಂ ಪ್ರಕ್ರಿಯೆಯ ಕುರಿತು ಧರ್ಮಪಾಲ ರವರು ಮಾಹಿತಿ ಕೇಳಿದರು. ಕಳೆದ ಅವಧಿಯಲ್ಲಿ ನಿಗದಿ ಪಡಿಸಿದ ಮೊತ್ತದಿಂದ ಏಲಂ ಪ್ರಕ್ರಿಯೆಯ ನಡೆದಿದೆ ಆದರೆ ಭಾಗವಹಿಸಿದವರು ಪ್ರತಿಕ್ರಿಯಿಸದಿದ್ದುದರಿಂದ ಏಲಂ ರದ್ದಾಗಿದೆ. ಮುಂದಿನ ದಿನ ಸಭೆಯ ನಿರ್ಣಯದಂತೆ ನಿಗದಿಪಡಿಸಿದ ಮೊತ್ತದಿಂದ ಮರು ಏಲಂ ನಡೆಸುವ ಬಗ್ಗೆ ನಿರ್ಣಯಿಸಲಾಯಿತು.
ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ಶಿವಾನಂದ ರಂಗತ್ತಮಲೆ, ಸುದೇಶ್ ಅರಂಬೂರು, ಚಂದ್ರಕಾಂತ ನಾರ್ಕೋಡು, ರತೀಶನ್ ಅರಂಬೂರು, ಸತ್ಯ ಪ್ರಸಾದ್ ಗಬ್ಬಲ್ಕಜೆ, ಶಾಂತಪ್ಪ ಬಡ್ಡಡ್ಕ, ಸತ್ಯ ಕುಮಾರ್ ಆಡಿಂಜ, ವೇದಾವತಿ ನೆಡ್ಚಿಲು, ವೀಣಾವಸಂತ ಆಲೆಟ್ಟಿ, ಮೀನಾಕ್ಷಿ ಕುಡೆಕಲ್ಲು, ಗೀತಾ ಕೋಲ್ಚಾರು, ಅನಿತಾ ಅರಂಬೂರು, ಶಶಿಕಲಾ ದೋಣಿಮೂಲೆ, ಭಾಗೀರಥಿ ಪತ್ತುಕುಂಜ, ಕಮಲ ನಾಗಪಟ್ಟಣ, ಶಂಕರಿ ಕೊಲ್ಲರಮೂಲೆ, ಕುಸುಮಾವತಿ ಬಿಲ್ಲರಮಜಲು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.