ಮೆಟ್ರಿಕ್ ನಂತರದ ಹಾಸ್ಟೆಲ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

Advt_Headding_Middle

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್-ನಂತರದ ವಿದ್ಯಾರ್ಥಿ ನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಂದ 2021-22ನೇ ಸಾಲಿನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳಿಗೆ ಸೂಚನೆ:

ವಿದ್ಯಾರ್ಥಿಗಳು ಹಿಂದುಳಿದ ವರ್ಗಗಕ್ಕೆ ಸೇರಿದ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿರಬೇಕು. ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯಮಿತಿ ಪ್ರವರ್ಗ-1 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ರೂ.2.50 ಲಕ್ಷ ಹಾಗೂ ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ- ರೂ.1.00 ಲಕ್ಷ ಒಳಗಿರಬೇಕು.  ವಿದ್ಯಾರ್ಥಿಗಳು ಕಡ್ಡಾಯವಾಗಿ ಆನ್‍ಲೈನ್‍ನಲ್ಲಿಯೇ ಅರ್ಜಿ ಸಲ್ಲಿಸಬೇಕು.

ಆನ್‍ಲೈನ್ ಅರ್ಜಿಯಲ್ಲಿ ಎಸ್.ಎಸ್.ಎಲ್.ಸಿ ರಿಜಿಸ್ಟರ್ ಸಂಖ್ಯೆ, ಪಾಸಾದ ವರ್ಷ, ಹುಟ್ಟಿದ ದಿನಾಂಕವನ್ನು ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿರುವಂತೆಯೇ ನಮೂದಿಸಬೇಕು.

ವಿದ್ಯಾರ್ಥಿಯು ಪ್ರವೇಶ ಪಡೆದಿರುವ ಕಾಲೇಜು, ತಾಲ್ಲೂಕು, ಜಿಲ್ಲೆ, ವಿಶ್ವವಿದ್ಯಾನಿಲಯ, ಬೋರ್ಡ್/ಮಂಡಳಿ, ಪ್ರವೇಶದ ವಿಧಾನ, ಕೋರ್ಸಿನ ವಿವರ, ಪ್ರವೇಶದ ವಿವರ ಹಾಗೂ ಹಿಂದಿನ ತರಗತಿ/ಕೋರ್ಸಿನಲ್ಲಿ ಪಡೆದ ಅಂಕಗಳ ವಿವರವನ್ನು ತಪ್ಪಿಲ್ಲದಂತೆ ನಮೂದಿಸಬೇಕು. ಇದುವರೆಗೆ ಫಲಿತಾಂಶ ಪ್ರಕಟಗೊಳ್ಳದೇ ಇರುವ ಕೋರ್ಸುಗಳ ವಿದ್ಯಾರ್ಥಿಗಳು ಮಾತ್ರ ಆನ್ ಲೈನ್ ಅರ್ಜಿಯಲ್ಲಿ Complete Result Awaited ಬಟನ್ ಕ್ಲಿಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ (ಇಂತಹ ವಿದ್ಯಾರ್ಥಿಗಳು ಫಲಿತಾಂಶ ಬಂದ ತಕ್ಷಣವೇ ಅರ್ಜಿಯ ಇನ್ನೊಂದು ಪ್ರತಿಯೊಂದಿಗೆ ಅಂಕಪಟ್ಟಿಯನ್ನು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಛೇರಿಗೆ ತಲುಪಿಸಿ ಸ್ವೀಕೃತಿ ಪಡೆಯುವುದು. ಅಂಕಪಟ್ಟಿಯನ್ನು ಸಲ್ಲಿಸದೇ ಇದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು.

ವಿದ್ಯಾರ್ಥಿಯು ಪ್ರವೇಶ ಪಡೆದಿರುವ ಕಾಲೇಜಿನಿಂದ ಸ್ವಂತ ಸ್ಥಳಕ್ಕೆ ಕನಿಷ್ಠ 5 ಕಿ.ಮೀ ದೂರದ ವಿದ್ಯಾರ್ಥಿಗಳಾಗಿರಬೇಕು. ಕಾಲೇಜಿನಿಂದ ಸ್ವಂತ ಸ್ಥಳಕ್ಕೆ ಇರುವ ದೂರವನ್ನು ಕಿ.ಮೀ.ಗಳಲ್ಲಿ ನಮೂದಿಸಬೇಕು.

ವಿದ್ಯಾರ್ಥಿ ಪಡೆದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ ಸಂಖ್ಯೆಯನ್ನು ನಮೂದಿಸಿ, View ಬಟನ್ Click ಮಾಡಿ ನೀವು ಪಡೆದಿರುವ ಪ್ರಮಾಣ ಪತ್ರದಲ್ಲಿರುವ ಅಂಕಿ ಅಂಶಗಳಂತೆ ಇರುವುದನ್ನು ಖಾತರಿಪಡಿಸಿಕೊಳ್ಳುವುದು(ಆದಾಯ ಪ್ರಮಾಣ ಪತ್ರವನ್ನು ಉದ್ಯೋಗಕ್ಕಾಗಿ ಪಡೆದಿರುವುದನ್ನು ಸ್ವೀಕರಿಸುವುದಿಲ್ಲ.)ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಶಿಕ್ಷಣಕ್ಕಾಗಿ ಪಡೆದಿರಬೇಕು.

ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಒಂದೇ ಪತ್ರದಲ್ಲಿ ನೀಡಿದ್ದಲ್ಲಿ, ಅರ್ಜಿಯಲ್ಲಿನ ಜಾತಿ ಅಥವಾ ಅದಾಯ ಕಲಂನ ಯಾವುದಾದರು ಒಂದರಲ್ಲಿ ಭರ್ತಿ ಮಾಡುವುದು.

ವಿದ್ಯಾರ್ಥಿಯ ಧರ್ಮ, ಜಾತಿ, ಪ್ರವರ್ಗ ಹಾಗೂ ಜಾತಿ&ಆದಾಯ ಪ್ರಮಾಣ ಪತ್ರ ಪಡೆದ ದಿನಾಂಕ ಹಾಗೂ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ, ಪೋಷಕರ ವೃತ್ತಿಯನ್ನು ಕಡ್ಡಾಯವಾಗಿ ನಮೂದಿಸಬೇಕು.

ವಿದ್ಯಾರ್ಥಿಯು ವಿಕಲಚೇತನ ಹಾಗೂ ಅಂಧ ವಿದ್ಯಾರ್ಥಿಗಳಾಗಿದ್ದಲ್ಲಿ, ಸಂಬಂಧಪಟ್ಟ ಪ್ರಾಧಿಕಾರಗಳು ನೀಡಿರುವ ಪ್ರಮಾಣ ಪತ್ರದಲ್ಲಿರುವಂತೆಯೇ ನಮೂದಿಸಬೇಕು.

ಕುಟುಂಬದ ಸದಸ್ಯರಲ್ಲಿ ಇಬ್ಬರಿಗಿಂತ ಹೆಚ್ಚು ಜನ ಶುಲ್ಕ ವಿನಾಯಿತಿ ಅಥವಾ ಹಾಸ್ಟೆಲ್ ಸೌಲಭ್ಯ ಪಡೆಯುತ್ತಿದ್ದಲ್ಲಿ, ವಿವರವನ್ನು ನಮೂದಿಸಬೇಕು.

ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಆಧಾರ್ ಸಂಖ್ಯೆ ಲಭ್ಯವಿಲ್ಲದಿದ್ದಲ್ಲಿ ಆಧಾರ್ ಕಾರ್ಡ್‍ಗಾಗಿ ಅರ್ಜಿಸಲ್ಲಿಸಿದ ನಂತರ ನೀಡುವ EID ಸಂಖ್ಯೆಯನ್ನು ನಮೂದಿಸುವುದು.

ವಿದ್ಯಾರ್ಥಿಯು ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ತೆರೆದಿರುವ ಬ್ಯಾಂಕ್ ಖಾತೆಯ ಸಂಖ್ಯೆ, ಐ.ಎಫ್.ಎಸ್.ಸಿ ಕೋಡ್ ಇತ್ಯಾದಿಗಳನ್ನು ನಮೂದಿಸಬೇಕು.

ವಿದ್ಯಾರ್ಥಿಯು ಪತ್ರ ವ್ಯವಹಾರಕ್ಕಾಗಿ ನೀಡುವ ವಿಳಾಸ ಹಾಗೂ ವಿದ್ಯಾರ್ಥಿಯ ಖಾಯಂ ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ವಿವರಗಳನ್ನು ನಮೂದಿಸಬೇಕು.

ಅರ್ಜಿ ಸಲ್ಲಿಸುವಾಗ ತಾಂತ್ರಿಕ ತೊಂದರೆಗಳಾದಲ್ಲಿ [email protected] ಗೆ ಇ-ಮೇಲ್ ಮುಖಾಂತರ ದಾಖಲೆಗಳೊಂದಿಗೆ ಸಂಪರ್ಕಿಸುವುದು

 

ತಾಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಹಾಗೂ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್ಸೈಟ್ backwardclasses.kar.nic.in ಗಮನಿಸಬಹುದು.

Post matric hostel opening for 2021-22

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.