Breaking News

ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ ರವರಿಗೆ ಕಾಂಗ್ರೆಸ್ ವತಿಯಿಂದ ಶ್ರದ್ದಾಂಜಲಿ ಸಭೆ

Advt_Headding_Middle

 

 

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಸನ್ಮಾನ್ಯ ಆಸ್ಕರ್ ಫೆರ್ನಾಂಡಿಸ್ ಅವರ ನಿಧನದ ಹಿನ್ನೆಲೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ದಾಂಜಲಿ ಸಭೆಯು ಸೆ. 14ರಂದು ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ. ಜಯರಾಮ್ ರವರು ನುಡಿ ನಮನ ಸಲ್ಲಿಸಿ ಆಸ್ಕರ್ ಫೆರ್ನಾಂಡಿಸ್ ರವರು ಕಾಂಗ್ರೆಸ್ ಪಕ್ಷದ ಹಿರಿಯ ನೇತಾರರಾಗಿ ಭಾರತದ ರಾಜಕೀಯ ದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದ್ದರು. ಲೋಕಸಭಾ ಸದಸ್ಯರಾಗಿ, ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿ ಕರಾವಳಿಯ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ. ಅವರು ಪಕ್ಷದ ಕಣ್ಣು ಮತ್ತು ಕಿವಿಯಾಗಿದ್ದರು. ರಾಜೀವ್ ಗಾಂಧೀಯ ಕಾಲದಿಂದ ರಾಷ್ಟ್ರ ರಾಜಕೀಯದಲ್ಲಿ ನರೇಗಾ ದಂತಹ ಹಲವಾರು ಜಾನೋಪಯೋಗಿ ಕಾರ್ಯಕ್ರಮ ಗಳ ರೂವಾರಿಯಾಗಿದ್ದರು. ಯಾವುದೇ ಕಾರ್ಯಕರ್ತರನ್ನು , ನಾಯಕರನ್ನು, ಹಾಗೂ ತಮ್ಮಲ್ಲಿಗೆ ಸಹಾಯಕೋರಿ ಬರುವ ಜನಗಳನ್ನು ಸತ್ಕರಿಸಿ ತನ್ನಿಂದಾಗುವ ಸಹಾಯ ವನ್ನು ಮಾಡುತ್ತಿದ್ದರು. ಅವರು ಒಬ್ಬ ಪ್ರತಿಯೊಬ್ಬ ಕಾಂಗ್ರೇಸಿಗನಿಗೂ ಆದರ್ಶ ಪ್ರಾಯರಾದವರು ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ಮತ್ತು ಅವರ ಅಭಿವೃದ್ಧಿ ಕಾರ್ಯಕ್ರಮಗಳು ಈ ಭಾಗದ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಎಂದು ಹೇಳಿದರು.ಹಿರಿಯ ನಾಯಕರಾದ ನಿತ್ಯಾನಂದ ಮುಂಡೋಡಿ, ಭರತ್ ಮುಂಡೋಡಿ ಹಾಗೂ ಟಿ. ಎಂ. ಶಹೀದ್ ನುಡಿನಮನ ಸಲ್ಲಿಸಿದರು. ಈ ಸಂರ್ಭದಲ್ಲಿ ಆಸ್ಕರ್ ಪೆರ್ನಾಂಡಿಸ್ ರವರ ಆತ್ಮಕ್ಕೆ ಶಾಂತಿ ಯನ್ನು ಕೋರಿ ಮೌನ ಪ್ರಾರ್ಥನೆ ಸಲ್ಲಿಸಿ, ಪುಷ್ಪಾರ್ಚನೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಜಯಪ್ರಕಾಶ್ ರೈ ಎನ್, ಎಂ ವೆಂಕಪ್ಪ ಗೌಡ, ಬ್ಲಾಕ್ ಕಾಂಗ್ರೆಸ್ ಪ್ರಮುಖರಾದ ಸಂಶುದ್ದಿನ್ ಎಸ್, ಚಂದ್ರಶೇಖರ ಕಾಮತ್, ಗಂಗಾಧರ ಪಿ ಎಸ್, ದಿನೇಶ್ ಅಂಬೇಕಲ್ಲು, ಭವಾನಿಶಂಕರ್ ಕಲ್ಮಡ್ಕ, ಅನಿಲ್ ರೈ ಬೆಳ್ಳಾರೆ, ಆನಂದ ಬೆಳ್ಳಾರೆ, ನಂದರಾಜ್ ಸಂಕೇಶ, ಅನಿಲ್ ಬಲ್ಲಡ್ಕ, ಶಾಫಿ ಕುತ್ತಮೊಟ್ಟೆ, ಶಶಿಧರ ಎಂ ಜೆ, ಸತ್ಯಕುಮಾರ್ ಅಡಿಂಜ, ಬಾಲಕೃಷ್ಣ ಪೂಜಾರಿ, ಸುರೇಶ್ ಕಾಮತ್, ಡೇವಿಡ್ ಧೀರಾ ಕ್ರಾಸ್ತಾ,ಸುರೇಶ್ ಅಮೈ, ಮಧುಸೂಧನ್ ಬೂಡು, ವಾಸುದೇವ ಗೌಡ ಮರ್ಕಂಜ, ಗಂಗಾಧರ ಮೇನಾಲ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.