ಸುಳ್ಯ ವಲಯದ ಫೋಟೋಗ್ರಾಫರ್ಸ್ ಅಸೋಶಿಯೇಶನ್‌ನ ಮಹಾಸಭೆ

Advt_Headding_Middle

 

ಫೋಟೋಗ್ರಾಫರ್ಸ್ ಎಸೋಸಿಯೇಶನ್ ನ ಸುಳ್ಯ ವಲಯದ ಮಹಾಸಭೆಯು ಸುಳ್ಯ ಶ್ರೀರಾಂ ಪೇಟೆಯ ದೇವಮ್ಮ ಕಾಂಪ್ಲೆಕ್ಸ್‌ನಲ್ಲಿ ಸೆ. 14 ರಂದು ನಡೆಯಿತು.

 

ಫೋಟೋಗ್ರಾಫರ್ಸ್ ಎಸೋಸಿಯೇಶನ್‌ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಲಯಾಧ್ಯಕ್ಷ ಸುಧಾಕರ ರೈ ಪಿ.ಎಸ್. (ಶೃಂಗಾರ್ ಸ್ಟುಡಿಯೋ) ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.೨೦೨೧-೨೩ ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಹರೀಶ್ ಪಿ. ರಾವ್ (ಹರೀಶ್ ಸ್ಟುಡಿಯೋ ), ಉಪಾಧ್ಯಕ್ಷರಾಗಿ ಅನುರಾಜ್ ಪಂಜ (ಅನು ಸ್ಟುಡಿಯೋ), ಕಾರ್ಯದರ್ಶಿಯಾಗಿ ರತೀಶ್ ಬೆಳ್ಳಾರೆ (ಪ್ರೀತಿ ಸ್ಟುಡಿಯೋ), ಖಜಾಂಜಿಯಾಗಿ ದಿವಾಕರ ಮುಂಡಾಜೆ (ಶಿವ ಸ್ಟುಡಿಯೊ ಹರಿಹರ) ಆಯ್ಕೆಯಾದರು.

ವಲಯ ಸಂಘಟನಾ ಕಾರ್ಯದರ್ಶಿಯಾಗಿ ವೇಣುಗೋಪಾಲ್ ಕೋಲ್ಚಾರು ( ಭೂಮಿಕಾ ಸ್ಟುಡಿಯೋ) ಜೊತೆ ಕಾರ್ಯದರ್ಶಿಯಾಗಿ, ಪ್ರದೀಪ್ ಐವರ್ನಾಡು (ಶ್ರೀ ಡಿಜಿಟಲ್ ), ಕ್ರೀಡಾ ಕಾರ್ಯದರ್ಶಿಯಾಗಿ ವೆಂಕಟೇಶ್ (ಫೋಟೋ ಪಾಯಿಂಟ್), ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದಿವೀಶ್ ನಿಂತಿಕಲ್ಲು (ಮಿಂಚು ಸ್ಟುಡಿಯೋ) , ಗೌರವಾಧ್ಯಕ್ಷರಾಗಿ ಪರಮ್ (ಪರಮ್ ಸ್ಟುಡಿಯೊ)ರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ವಲಯದ ಸದಸ್ಯರಾದ ಉರಗ ತಜ್ಞರಾದ ಮೋಹನ್ (ಸಂಜ್ಞಾ ಸ್ಟುಡಿಯೋ) ಹಾಗೂ ಒಂದು ಕೈ ಬಲಹೀನರಾಗಿದ್ದುಕೊಂಡು, ಒಂದೇ ಕೈಯಲ್ಲಿ ವೀಡಿಯೋಗ್ರಫಿ ಹಾಗೂ ಉತ್ತಮ ಬೈಕ್ ರೈಡರ್ ಆಗಿ ಪ್ರಸಿದ್ಧಿ ಪಡೆದ ಯೂಸುಫ್ ಕಲ್ಲುಗುಂಡಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸುಳ್ಯ ವಲಯದ ಸ್ಥಾಪಕಾಧ್ಯಕ್ಷರುಗಳಾದ ಗೋಪಾಲ್ ಸುಳ್ಯ (ಗೋಪಾಲ್ ಸ್ಟುಡಿಯೋ), ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲೋಕೇಶ್ ಸುಬ್ರಹ್ಮಣ್ಯ ಮತ್ತು ಜಿಲ್ಲಾ ಫೋಟೋಗ್ರಾಫರ್ಸ್ ಸೊಸೈಟಿಯ ನಿರ್ದೇಶಕ ಕರುಣಾಕರ ಎಣ್ಣೆಮಜಲು, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಎಸ್ ಕೆ ಪಿ ಎ ಪ್ರಧಾನ ಕಾರ್ಯದರ್ಶಿ ಹರೀಶ್ ಅಡ್ಯಾರ್ , ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಎಸ್ ಕೆಪಿಎ ಕೋಶಾಧಿಕಾರಿ ಆನಂದ ಬಂಟ್ವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು

ಕೋಶಾಧಿಕಾರಿ ದಿನೇಶ್ ಏನೆಕಲ್ಲು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಲೋಕೇಶ್ ಬಿ. ಎನ್. ಸುಬ್ರಹ್ಮಣ್ಯ ಸ್ವಾಗತಿಸಿದರು. ವೇಣುಗೋಪಾಲ್ ಕೋಲ್ಚಾರ್ (ಭೂಮಿಕಾ ಸ್ಟುಡಿಯೋ) ವರದಿ ವಾಚಿಸಿ, ವಂದಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.