ಗೂನಡ್ಕ : ದರ್ಕಾಸ್‌ನಲ್ಲಿ ಆಸ್ಕರ್ ಫರ್ನಾಡೀಸ್‌ರವರಿಗೆ ಶ್ರದ್ದಾಂಜಲಿ ಸಭೆ

Advt_Headding_Middle

 

ಸಂಪಾಜೆ ಗ್ರಾಮದ ಮೂರನೇ ವಾರ್ಡ್ ಗೂನಡ್ಕ ದರ್ಕಾಸ್ ನಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮಾಜಿ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು,ಹಾಲಿ ರಾಜ್ಯ ಸಭಾ ಸದಸ್ಯರು, ಮಾಜಿ ಕೇಂದ್ರ ಸಚಿವರಾಗಿದ್ದ ದಿ. ಆಸ್ಕರ್ ಫರ್ನಾಡೀಸ್ ರವರಿಗೆ ಶ್ರದ್ದಾಂಜಲಿ ಸಭೆಯು ಸಂಪಾಜೆ ಗ್ರಾಮದ ದರ್ಕಾಸ್ ಅಂಗನವಾಡಿ ಕೇಂದ್ರದ ಬಳಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿಯಾದ ಟಿ.ಎಂ. ಶಾಹೀದ್ ತೆಕ್ಕಿಲ್ ಮಾತನಾಡಿ, ಆಸ್ಕರ್ ಫರ್ನಾಂಡಿಸ್ ರವರ ಜೊತೆಗಿದ್ದ ಒಡನಾಟ ಮತ್ತು ಅವರ ಜೀವನದಲ್ಲಿ ಕಾರ್ಯಕರ್ತರ ಬಗ್ಗೆ ಅವರಿಗಿದ್ದ ವಿನಯತೆ ಕಾಳಜಿ ಮತ್ತು ಪಕ್ಷಕ್ಕಾಗಿ ಮಾಡಿದ ಕಾರ್ಯವೈಖರಿಯನ್ನು ಹಾಗು ನಮ್ಮ ಭಾಗದ ಅಭಿವೃದಿಗೆ ಅವರು ನೀಡಿರುವ ಕೊಡುಗೆಗಳನ್ನು ಬಹಳ ಸವಿಸ್ತಾರವಾಗಿ ವಿವರಿಸಿದರು. ಮತ್ತು ಪಕ್ಷ ಸಂಘಟನೆ ಬಗ್ಗೆ ಕರೆ ಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆರವರು ವಹಿಸಿ ಮಾತನಾಡಿ, ಹಿರಿಯ ನಾಯಕರಾದ ಜನಾರ್ದನ ಪೂಜಾರಿ ಮತ್ತು ಆಸ್ಕರ್ ಫೆರ್ನಾಂಡಿಸ್ ರವರ ಪಕ್ಷ ಸಂಘಟನೆ ಮತ್ತು ಶಿಸ್ತಿನ ಬಗ್ಗೆ ಕಾರ್ಯಕರ್ತರಿಗೆ ವಿವರಿಸಿದರು. ಕಾರ್ಯಕ್ರಮ ಸಂಯೋಜನೆ ಮಾಡಿದ ಪಿ ಕೆ ಅಬುಶಾಲಿ ಗೂನಡ್ಕರವರನ್ನು ಶ್ಲಾಘನೆ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞ ಮಾತನಾಡಿ ಪಕ್ಷದ ಬಗ್ಗೆ ಅವರಿಗಿದ್ದ ಅಭಿಮಾನ ನಿಷ್ಠೆಯನ್ನು ಕಾರ್ಯಕರ್ತರು ಅಳವಡಿಸಿಕೊಳ್ಳಬೇಕಾಗಿ ಕರೆಕೊಟ್ಟರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್, ಉಪಾಧ್ಯಕ್ಷರಾದ ಲೆಸ್ಸಿ ಮೊನಾಲಿಸಾ, ಅಲ್ಪಸಂಖ್ಯಾತ ರಾಜ್ಯ ಸಂಯೋಜಕರಾದ ತಾಜ್ ಮಹಮ್ಮದ್, ಮಾಜಿ ಅಧ್ಯಕ್ಷರಾದ ಜಗದೀಶ್ ರೈ,ದರ್ಕಾಸ್ ಬೂತ್ ಅಧ್ಯಕ್ಷರಾದ ಸಿ ಎಂ ಅಬ್ದುಲ್ಲಾ, ಸದಸ್ಯರಾದ ಎಸ್ ಕೆ ಹನೀಫ್, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಇದ್ದೀನ್ ಕುಂಞ,ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಆಶಾ ವಿನಯಕುಮಾರ್,ಹಿರಿಯ ಕಾರ್ಯಕರ್ತರಾದ ದಿನಕರ ಸಣ್ಣಮನೆ,ಅಶ್ರಫ್ ಪೆಲ್ತಡ್ಕ,ಕಾಂಗ್ರೆಸ್ ಕಾರ್ಯಕರ್ತರಾದ ಅಜರುದ್ದೀನ್ ಸಿ ಎ,ಅರಿಸ್ ಕೆ ಎಸ್ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು .
ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಪಿ ಕೆ ಅಬುಶಾಲಿ ಗೂನಡ್ಕ ಸ್ವಾಗತಿಸಿ ,ಕೆಪಿಸಿಸಿ ವಕ್ತಾರ ಶವಾದ್ ಗೂನಡ್ಕ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.