ಪಂಜದಲ್ಲಿ ಕೊರೋನ ನಿಯಂತ್ರಣ ಜನಜಾಗೃತಿ ಅಭಿಯಾನ

Advt_Headding_Middle

 

ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು ,ಗ್ರಾಮ ಪಂಚಾಯತ್ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜ‌ ,ಯುವಜನ ಒಕ್ಕೂಟ ಸುಳ್ಯ ತಾಲೂಕು, ಪಂಚ ಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ (ರಿ), ಇದರ ಜಂಟಿ ಆಶ್ರಯದಲ್ಲಿ ಕೋವೀಡ್ -19 ಜನಜಾಗೃತಿ ಕಾರ್ಯಕ್ರಮ ಸೆ.17 ರಂದು ನಡೆಯಿತು. ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಕೆ ಪದ್ಮಯ್ಯ, ಮುಖ್ಯ ಅಥಿತಿ ಶುಶ್ರೂಷಕಿ ಶ್ರೀಮತಿ ವಿಜಯಲಕ್ಷ್ಮಿ ಕೋವಿಡ್ ಲಸಿಕೆ ತೆಗೆದುಕೊಳ್ಳುವ ವಿಧಾನ, ಲಸಿಕಾ‌ ಉಪಯೋಗ ಕುರಿತು ವಿವರಿಸಿದರು.
ಮುಖ್ಯ ಅಥಿತಿ ನೆಹರು ಯುವ ಕೇಂದ್ರ ಮಂಗಳೂರು ಇದರ ನಿರ್ದೇಶಕಿ ಕುಮಾರಿ ಪ್ರತಿಭಾ ಕಾಯರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಳ್ಯ ಯುವಜನ ಸಂಯಕ್ತ ಮಂಡಳಿ ನಿರ್ದೇಶಕ
ಪವನ್‌ ಕುಮಾರ್ ಪಲ್ಲತ್ತಡ್ಕ . ಗ್ರಾ.ಪಂ. ಸದಸ್ಯ ಹಾಗೂ ಕ್ಲಬ್ ನ‌‌ ಸದಸ್ಯ ಚಂದ್ರಶೇಖರ ದೇರಾಜೆ , ಗ್ರಾ.ಪಂ.ಸಧಸ್ಯ ನಾರಾಯಣ ಕೃಷ್ಣನಗರ , ಕಂದಾಯ ನಿರೀಕ್ಷಕ ಎಂ ಎಲ್ ಶಂಕರ್, ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ್ ,
ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು,
ಉಪಸ್ಥಿತರಿದ್ದರು.
ಪಂಚ ಶ್ರೀ ಪಂಜ ಇದರ ಎಲ್ಲಾ ಸದಸ್ಯರು ಕ್ಲಬ್ ನ ಸಮವಸ್ತ್ರ ಧರಿಸಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಕ್ಲಬ್ ನ ಕಾರ್ಯದರ್ಶಿ ದಾಮೋದರ ನೇರಳ ನಿರೂಪಿಸಿದರು.ದುರ್ಗಾಪ್ರಸಾದ್ ಅಂಬೆಕಲ್ಲು ವಂದಿಸಿದರು.ಸುಮಾರು ನೂರಕ್ಕೂ ಅಧಿಕ ಕೋವಿಡ್ ಲಸಿಕೆ ಫಲಾನುಭವಿಗಳು ಪಡೆದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.