ಮುಕ್ಕೂರು : ಎರಡನೆ ಹಂತದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ

Advt_Headding_Middle

 

157 ಮಂದಿಗೆ ಕೋವಿಶೀಲ್ಡ್ ಲಸಿಕೆ

ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಕ್ಕೂರು ವಾರ್ಡ್ ನ ಕೋವಿಡ್ ನಿಯಂತ್ರಣ ಕಾರ್ಯಪಡೆ, ಕುಂಡಡ್ಕ- ಮುಕ್ಕೂರು ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಮುಕ್ಕೂರು ಶಾಲೆಯಲ್ಲಿ ಎರಡನೇ ಬಾರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಸೆ.14 ರಂದು ನಡೆಯಿತು.
ಒಟ್ಟು 157 ಮಂದಿಗೆ ಲಸಿಕೆ ಹಾಕಲಾಯಿತು. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಲಸಿಕೆ ನೀಡುವ ಕಾರ್ಯ ನಡೆಯಿತು.

ಸ್ವಯಂ ಸೇವಕರಾಗಿ ಸಹಕಾರ
ಲಸಿಕೆ ನೀಡುವಲ್ಲಿ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ವೆಂಕಟಲಕ್ಷ್ಮಿ, ಪುಷ್ಪಾ, ಪೂರ್ಣಿಮಾ, ರಮ್ಯ, ಆಶಾ ಕಾರ್ಯಕರ್ತೆ ರಾಗಿಣಿ, ದೇವಕಿ ಸಹಕರಿಸಿದರು. ನೋಂದಣಿ ವಿಭಾಗದಲ್ಲಿ ಕಾರ್ಯಪಡೆ ತಂಡದ ಪರವಾಗಿ ರಕ್ಷಿತಾ ಅಡ್ಯತಕಂಡ, ಜಯಂತ ಗೌಡ ಕುಂಡಡ್ಕ, ಮಹೇಶ್ ಕುಂಡಡ್ಕ, ರವೀಂದ್ರ ಅನವುಗುಂಡಿ, ರವಿ ಕುಂಡಡ್ಕ, ಪ್ರವೀಣ್ ಬೋಳಕುಮೇರ್ ಸಹಕರಿಸಿದರು.

ಲಸಿಕೆ ನೀಡುವ ಸಂದರ್ಭದಲ್ಲಿ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು,ಕಾರ್ಯಪಡೆ ಸದಸ್ಯರಾದ ಕುಂಬ್ರ ದಯಾಕರ ಆಳ್ವ, ಮಹೇಶ್ ಕುಂಡಡ್ಕ, ಜಯಂತ ಕುಂಡಡ್ಕ, ಯತೀಶ್ ಕಾನಾವುಜಾಲು ಮೊದಲಾದವರು ಉಪಸ್ಥಿತರಿದ್ದರು.

ಕರ್ತವ್ಯ ನಿರತ ಸಿಬಂದಿಗಳಿಗೆ ಬೆಳಗ್ಗೆ ಮಧ್ಯಾಹ್ನ ಊಟ- ಉಪಹಾರದ ವ್ಯವಸ್ಥೆಯನ್ನು ಕಾರ್ಯಪಡೆ ಮೂಲಕ ಒದಗಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.