ಸುಳ್ಯ ತಹಶೀಲ್ದಾರ್ ಕು.ಅನಿತಾಲಕ್ಷ್ಮಿ ಯವರು ಕೆಲವು ದಿನಗಳ ಕಾಲ ರಜೆಯಲ್ಲಿದ್ದು, ಅವರು ರಜೆಯಿಂದ ಹಿಂತಿರುಗುವ ವರೆಗೆ ಐ.ಎ.ಎಸ್. ಮಾಡಿ ಪ್ರೊಬೆಷನರಿ ತಹಶೀಲ್ದಾರ್ ಆಗಿರುವ ನೊಂಗ್ಜಾಯ್ ಮಹಮ್ಮದ್ ಅಲಿ ಅಕ್ರಂ ಷಾ ಸುಳ್ಯ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಅಕ್ರಂ ಷಾ ರವರು ಮಣಿಪುರದವರಾಗಿದ್ದು, ಐ.ಎ.ಎಸ್. ಪಾಸ್ ಮಾಡಿ ಕರ್ನಾಟಕ ಕೇಡರ್ ನ ಅಧಿಕಾರಿಯಾಗಿ ಬಂದಿದ್ದಾರೆ. ಕೆಲವು ತಿಂಗಳಿನಿಂದ ದ.ಕ. ಜಿಲ್ಲೆಯಲ್ಲಿರುವ ಅವರು ಪ್ರೊಬೆಷನರಿಯಾಗಿ ವೃತ್ತಿ ತರಬೇತಿ ಪಡೆಯುತ್ತಿದ್ದಾರೆ.