ಕ್ಷಯ ಮುಕ್ತ ಭಾರತದ ಜಾಗೃತಿ ಮೂಡಿಸಲಿರುವ “ಹೆಜ್ಜೆ ಬದಲಾದಾಗ” ಕಿರುಚಿತ್ರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಪುರಾತನ ಕಾಲದಿಂದಲೂ ಇರುವಂತಹ ಅತಿ ದೊಡ್ಡ ಕಾಯಿಲೆಗಳಲ್ಲಿ ಕ್ಷಯರೋಗವು ಒಂದು .ಈ ಕಾಯಿಲೆಗೆ ೪ ಸಾವಿರ ವರ್ಷಗಳ ಹಿಂದಿನ ಇತಿಹಾಸವಿದೆ .ಈ ಕಾಯಿಲೆಯು ೯೦% ದಷ್ಟು ಶ್ವಾಸಕೋಶಕ್ಕೆ ಬರುತ್ತದೆ ಉಳಿದ 1೦%ದಷ್ಟು ಶ್ವಾಸಕೋಶ ಬಿಟ್ಟು ದೇಹದ ಉಳಿದ ಅಂಗಗಳಿಗೆ ಬರುತ್ತದೆ .

ಶ್ವಾಸಕೋಶದ ಕ್ಷಯ ಒಬ್ಬರಿಂದ ಒಬ್ಬರಿಗೆ ಗಾಳಿಯ ಮೂಲಕ ತುಂತುರುಗಳ ರೂಪದಲ್ಲಿ ಹರಡುತ್ತದೆ.ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದಲ್ಲಿ ಒಂದು ವರ್ಷಕ್ಕೆ ಸುಮಾರು ೨೬. ೭ಲಕ್ಷ ಕ್ಷಯ ರೋಗ ಪ್ರಕರಣಗಳು ಕಂಡುಬರುತ್ತಿದ್ದು ವರ್ಷಕ್ಕೆ೭೩೦೦೦ ರಷ್ಟು ಜನರು ಸಾವನ್ನಪ್ಪುತ್ತಿದ್ದಾರೆ .ಜಗತ್ತಿನ ನಾಲ್ಕನೇ ಒo ದು ಭಾಗದಷ್ಟು(25%) ಕ್ಷಯರೋಗಿಗಳು ಭಾರತದಲ್ಲಿದ್ದು ಭಾರತ ಸರಕಾರ ಕ್ಷಯ ನಿರ್ಮೂಲನ ಮಾಡಲು ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಮೂಲಕ ವಿವಿಧ ಯೋಜನೆಗಳನ್ನು ರೂಪಿಸಿದ್ದು ಪ್ರಧಾನಿಯವರು ಕ್ಷಯ ಮುಕ್ತ ಭಾರತ -2025 ಮಾಡುವ ಪಣ ತೊಟ್ಟಿದ್ದಾರೆ .ಪ್ರಧಾನಿಯವರ ಈ ಯೋಜನೆಗೆ ಗ್ರಾಮೀಣ ಪ್ರದೇಶದ ಜೆಸಿಐ ಬೆಳ್ಳಾರೆ ಮತ್ತು ಕ್ಷಯ ಚಿಕಿತ್ಸಾ ಘಟಕ ಆರೋಗ್ಯ ಇಲಾಖೆ ಸುಳ್ಯ ಕಿರುಚಿತ್ರ “ಹೆಜ್ಜೆ ಬದಲಾದಾಗ ” ಬದಲಾವಣೆ ನನ್ನಿಂದಲೇ …. ಎನ್ನುವ ಸಂದೇಶ ಸಾರುವ ಕಿರುಚಿತ್ರ ರಚಿಸಿದ್ದು ಕೆಲವೇ ದಿನಗಳಲ್ಲಿ ಇದು ವಿವಿಧ ವೆಬ್ ಸೈಟ್ ಗಳಲ್ಲಿ ಪ್ರಸರಣ ಗೊಳ್ಳಲಿದೆ .ಸುಳ್ಯ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಜೇಸಿ ಲೋಕೇಶ್ ತಂಟೆಪ್ಪಾಡಿ ಅವರ ಪರಿಕಲ್ಪನೆಯಲ್ಲಿ ಜೆಸಿಐ ಬೆಳ್ಳಾರೆಯ ಘಟಕ ಅಧ್ಯಕ್ಷ ಪದ್ಮನಾಭ ಕಲಾಸುಮ ರವರ ನೇತ್ರತ್ವದಲ್ಲಿ ಕ್ಷಯ ಮುಕ್ತ ಭಾರತ ಗೊಳಿಸುವ ಒಂದು ದಿಟ್ಟ ಹೆಜ್ಜೆ ಸುಳ್ಯದಿಂದ ಆರಂಭಗೊಳ್ಳಲಿದೆ .ನಿರ್ದೇಶನವನ್ನು ಕೃಷ್ಣಪ್ಪಬಂಬಿಲ ಕಥೆಯನ್ನು ಸತೀಶ್ ಕಕ್ಕೆಪದವು, ಕ್ಯಾಮೆರಾಮೆನ್ ಗೆ ಅಶ್ವಿನ್ ಚೆಂಡ್ತಿಮಾರ್ ,ಛಾಯಾಗ್ರಹಣ ಪ್ರವೀಣ್ ಕುಕ್ಕೆ ಮೇಕಪ್ ನಲ್ಲಿ ಶಿವರಾಮ್ ಕಲ್ಮಡ್ಕ .ನಟ ನಟಿಯರಾಗಿ ಬೆಳ್ಳಾರೆ ಜೇಸಿಐ ಮತ್ತು ಜ್ಯೂನಿಯರ್ ಜೇಸಿಯ ಹಳ್ಳಿಯ ಯುವ ಪ್ರತಿಭೆಗಳು೧೦ ದಿನಗಳ ರಂಗ ತರಬೇತಿ ಪಡೆದು ಮೊದಲ ಬಾರಿಗೆ ಈ ಚಿತ್ರದಲ್ಲಿ ನಟಿಸಿದ್ದಾರೆ. ಇದು ಕ್ಷಯ ರೋಗಿಯ ಸಾಮಾಜಿಕ ಕಳಂಕವನ್ನು ದೂರ ಮಾಡುವ ಅತ್ಯುತ್ತಮ ಸಂದೇಶ ಸಾರುವ ಕಿರುಚಿತ್ರವಾಗಿದ್ದು ಸಾಮಾನ್ಯ ಜನರಿಗೆ ಮನಮುಟ್ಟುವಂತೆ ಚಿತ್ರೀಕರಿಸಲಾಗಿದೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.