ಅಜ್ಜಾವರ, ಮಂಡೆಕೋಲು, ಆಲೆಟ್ಟಿ ಗ್ರಾಮಗಳಲ್ಲಿ ಸಂಚರಿಸಿದ ಗಾಂಧಿ ರಥ

Advt_Headding_Middle

 

 

ಸುದ್ದಿ ಆಶಯದ ಮಹತ್ಮಾ ಗಾಂಧಿಜೀಯವರ ಗ್ರಾಮ ಸ್ವರಾಜ್ಯದ ಗಾಂಧಿ ರಥ ಇಂದು ಅಜ್ಜಾವರ,ಮಂಡೆಕೋಲು ಮತ್ತು ಆಲೆಟ್ಟಿ ಗ್ರಾಮಗಳಲ್ಲಿ ಸಂಚರಿಸಿತು.

ಸುಳ್ಯದಿಂದ ಆರಂಭಗೊಂಡ ಗಾಂಧಿ‌ ರಥಕ್ಕೆ ಅಜ್ಜಾವರ ‌ಗ್ರಾಮದ ಮೇನಾಲದಲ್ಲಿ ಗ್ರಾ.ಪಂ ಸದಸ್ಯ ಪ್ರಸಾದ್ ರೈ ರವರ ನೇತೃತ್ವದಲ್ಲಿ ಸ್ವಾಗತ ದೊರೆಯಿತು. ಸುಧೀರ್ ರೈ ಮೇನಾಲ,ಸುಕುಮಾರ್ ಕಲ್ಲುಗುಡ್ಡೆ,ಗೋಕುಲ್ ದಾಸ್ ಸುಳ್ಯ ಇದ್ದರು.

ಅಲ್ಲಿಂದ ಗಾಂಧಿ ಆಶಯದ ಘೋಷಣೆಯೊಂದಿಗೆ ಸಂಚರಿಸಿದ ರಥ ಅಜ್ಜಾವರ ಗ್ರಾ.ಪಂ ವ್ಯಾಪ್ತಿ ದೇವರಕಳಿಯ,ಅಡ್ಪಂಗಾಯ ಮಾರ್ಗವಾಗಿ ಮಂಡೆಕೋಲಿಗೆ ರಥ ತೆರಳಿತು.ಅಲ್ಲಿ ಗ್ರಾ.ಪಂ ಅಧ್ಯಕ್ಷೆ ವಿನುತಾ ಪಾತಿಕಲ್ಲು ಸುದ್ದಿ ಆಶಯದಂತೆ ಅ.೨ ರಂದು ಗಾಂಧಿ ಜಯಂತಿ ಆಚರಿಸುವ ಕುರಿತು ಮಾತನಾಡಿದರಲ್ಲದೆ ಸುದ್ದಿಯ ಯೋಜನೆಗೆ ಶ್ಲಾಘನೆ ವ್ಯಕ್ತ ಪಡಿಸಿದರು. ಮಂಡೆಕೋಲು ಪೇಟೆಯಲ್ಲಿ ಪ್ರಚಾರ ನಡೆಸಿದ ಬಳಿಕ ಪೈಂಬೆಚ್ಚಾಲು ಮಾರ್ಗವಾಗಿ ಕೋಲ್ವಾರಿಗೆ ರಥ ತೆರಳಿತು. ಅಲ್ಲಿಂದ ಆಲೆಟ್ಟಿ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿ ಗ್ರಾ.ಪಂ ಕಚೇರಿಗೆ ಬಂದಾಗ ಪಂಚಾಯತ್ ಕಾರ್ಯದರ್ಶಿ ಸೃಜನ್, ಗ್ರಾಮ ಕರಣಿಕ ಶರತ್,ಮತ್ತಿತರು ಸ್ವಾಗತ‌ ಕೋರಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.