ಪಂಜದ ವ್ಯಕ್ತಿ ಬೆಂಗಳೂರಿನಲ್ಲಿ ಆತ್ಮಹತ್ಯೆ

Advt_Headding_Middle

 

 

ಪಂಜದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.21 ರಂದು ವರದಿಯಾಗಿದೆ.
ಪಂಜ ಸಮೀಪದ ಕೂತ್ಕುಂಜ ಗ್ರಾಮದ ಪುತ್ಯ
ಕುಶಾಲಪ್ಪ ಗೌಡರ ಪುತ್ರ ರಮೇಶ ಕೆ.(38ವ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ರಮೇಶರು ಸುಮಾರು 8 ವರುಷಗಳಿಂದ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿದ್ದು, ಪತ್ನಿ ಶ್ರೀಮತಿ ಜಯಂತಿ ಮತ್ತು ಪುತ್ರ ಮನ್ವಿತ್ ಜೊತೆ ಬೆಂಗಳೂರು ಮೈಸೂರು ರೋಡ್ ಕೆಂಗೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಪತ್ನಿ ಊರಿಗೆ ಬಂದಿದ್ದು ರಮೇಶರು ಒಬ್ಬರೇ ಮನೆಯಲ್ಲಿ ಇದ್ದರು ಎನ್ನಲಾಗಿದೆ. ಸೆ.21 ರಂದು
ಮುಂಜಾನೆ ತುಂಬಾ ಹೊತ್ತಾದರೂ ರಮೇಶರು ಮನೆಯಿಂದ ಹೊರಗೆ ಬರದಿದ್ದುದರಿಂದ ಮನೆ ಮಾಲಿಕ ಕಿಟಕಿಯಲ್ಲಿ ನೋಡಿದಾಗ  ರಮೇಶರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿಷಯ ಬೆಳಕಿಗೆ ಬಂತು.

ಸ್ಥಳಕ್ಕೆ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಇಂದು ರಾತ್ರಿ ಮೃತದೇಹವನ್ನು ಆಂಬುಲೆನ್ಸ್ ನಲ್ಲಿ ಅವರ ಸ್ವಗೃಹಕ್ಕೆ ತರಲಿದ್ದಾರೆ.

ಮೃತರು ತಂದೆ, ಪತ್ನಿ, ಪುತ್ರ, ತಾಯಿ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.