ಸಿಇಟಿ ಪರೀಕ್ಷೆಯಲ್ಲಿ ಸುಳ್ಯದ ವೃದ್ಧಿ ರೈ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಮೂಡಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಉಬರಡ್ಕ ಮಿತ್ತೂರಿನ ವೃದ್ಧಿ ರೈ ಕೃಷಿಯಲ್ಲಿ ೪೧ ನೇ ರ್ಯಾಂಕ್, ಪಶುವೈದ್ಯಕೀಯದಲ್ಲಿ ೭೧ನೇ ರ್ಯಾಂಕ್, ನ್ಯಾಚುರೋ ಪತಿಯಲ್ಲಿ ೭೧ನೇ ರ್ಯಾಂಕ್ ಪಡೆದಿದ್ದಾರೆ. ಇಂಜಿನಿಯರಿಂಗ್ನಲ್ಲಿ ೩೦೮ನೇ ರ್ಯಾಂಕ್, ಬಿಫಾರ್ಮಾದಲ್ಲಿ ೧೩೮ನೇ ರ್ಯಾಂಕ್, ಫಾರ್ಮಾ ಡಿ ಯಲ್ಲಿ ೧೩೮ನೇ ರ್ಯಾಂಕ್ ಪಡೆದಿದ್ದಾರೆ.
ಉಬಡ್ಕ ಮಿತ್ತೂರು ಗ್ರಾಮ ಪಂಚಾಯತ್ ಸದಸ್ಯ ಹರೀಶ್ ರೈ ಉಬರಡ್ಕ ಮತ್ತು ಶಿಕ್ಷಕಿ ರಾಜೀವಿ ಹೆಚ್. ರೈ ಅವರ ಪುತ್ರಿಯಾಗಿರುವ ವೃದ್ಧಿ ಕೆವಿಜಿ ಶಿಕ್ಷಣ ಸಂಸ್ಥೆಯಲ್ಲಿ ಕಿರಿಯ ಪ್ರಾಥಮಿಕ ಹಾಗೂ ಮುಡಿಪು ನವೋದಯ ವಿದ್ಯಾಸಂಸ್ಥೆಯಲ್ಲಿ ಹಿರಿಯ ಮತ್ತು ಪ್ರೌಢ ಶಿಕ್ಷಣ ಪಡೆದಿದ್ದರು.