ಕಲ್ಲಪಳ್ಳಿ ಬಸ್ ದುರಂತದಲ್ಲಿ ಸಾವನ್ನಪ್ಪಿದ 7 ಮಂದಿಯ ಕುಟುಂಬಗಳಿಗೆ ತಲಾ 2 ಲಕ್ಷ ರೂ ಪರಿಹಾರ

Advt_Headding_Middle

ಕಳೆದ ಜನವರಿಯಲ್ಲಿ ಕಲ್ಲಪಳ್ಳಿ ಮತ್ತು ಪಾಣತ್ತೂರು ಮಧ್ಯೆ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಪ್ರಾಣ ಕಳೆದುಕೊಂಡ 7 ಮಂದಿಯ ಕುಟುಂಬಗಳಿಗೆ ರಾಜ್ಯ ಸರಕಾರವು ತಲಾ  2 ಲಕ್ಷದಂತೆ ಪರಿಹಾರ ಮಂಜೂರು ಮಾಡಿದೆ.


ಜನವರಿ ೩ ರಂದು ಸಂಭವಿಸಿದ ಈ ಅಪಘಾತದಲ್ಲಿ ಬಲ್ನಾಡು ಗ್ರಾಮದ ರಾಜೇಶ್ ನಾಯ್ಕ ಮತ್ತು ಆದರ್ಶ ನಾಯ್ಕ, ಜಾಲ್ಸೂರು ಗ್ರಾಮದ ರವಿಚಂದ್ರ ನಾಯ್ಕ, ಬೆಟ್ಟಂಪಾಡಿ ಗ್ರಾಮ ಶ್ರೀಮತಿ ಶೇಷಮ್ಮ, ಆರ್ಯಾಪು ಗ್ರಾಮದ ಶ್ರೀಮತಿ ಸುಮತಿ, ಪಾಣಾಜೆ ಗ್ರಾಮದ ಶ್ರೇಯಸ್ ಹಾಗೂ ನರಿಕೊಂಬು ಗ್ರಾಮದ ಶಶಿಧರ ಪೂಜಾರಿ ಮೃತಪಟ್ಟಿದ್ದರು.
ಈ ಘಟನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಮೃತಪಟ್ಟ ಕುಟುಂಬಗಳಿಗೆ ಸಹಾಯಧನ ಮಂಜೂರು ಮಾಡುವಂತೆ ಸಚಿವ ಎಸ್. ಅಂಗಾರ ಹಾಗೂ ಶಾಸಕ ಸಂಜೀವ ಮಠಂದೂರು ಮುಖ್ಯಮಂತ್ರಿಯವರನ್ನು ಕೋರಿದ ಹಿನ್ನಲೆಯಲ್ಲಿ ಪರಿಹಾರ ನಿಧಿಯಿಂದ ಈ ಸಹಾಯಧನ ಮಂಜೂರಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.