ಸುಬ್ರಹ್ಮಣ್ಯ: ಹಿಂಸಾತ್ಮಕ ರೀತಿಯಲ್ಲಿ ಕೈಕಾಲು ಕಟ್ಟಿದ ಹೋರಿಪತ್ತೆ

Advt_Headding_Middle

ಡಾ.ವೆಂಕಟಾಚಲಪತಿ ಯವರಿಂದ ಚಿಕಿತ್ಸೆ ನೀಡಿಸಿ ರಕ್ಷಣೆ ಮಾಡಿದ ಸಂಘಟನೆಗಳು

ಸುಬ್ರಹ್ಮಣ್ಯದ ಬಿಲದ್ವಾರ ಬಳಿಯ ಶೇಷಕುಟೀರ ವಸತಿ ಗೃಹದ ಮುಂದೆ ರಸ್ತೆಯ ಬಳಿ ಹಿಂಸಾತ್ಮಕ ರೀತಿಯಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾದ ಹೋರಿಯೊಂದನ್ನು ವಿಶ್ವ ಹಿಂದೂ ಪರಿಷತ್ ಹಾಗು ಭಜರಂಗದಳದ ಕಾರ್ಯಕರ್ತರು ಹಾಗು ಊರವರು ರಕ್ಷಣೆ ಮಾಡಿದ ಘಟನೆ ಸೆ.21 ರಂದು ನಡೆದಿದೆ.

ಶೇಷಕುಟೀರ ವಸತಿ ಗೃಹದ ರಸ್ತೆಯ ಬಳಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಹೋರಿಯೊಂದು ಪತ್ತೆಯಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹಾಗೂ ಪಶು ವೈದ್ಯಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಜಂಬುರಾಜ್ ಮಹಾಜನ್ ಅವರು ಹೋರಿಯ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಹೋರಿಯ ಒಂದು ಕಾಲು ಮುರಿತಗೊಂಡಿದ್ದ ಕಾರಣ ಪಶು ವೈದ್ಯಾಧಿಕಾರಿ ಡಾ.ವೆಂಕಟಾಚಲಪತಿ ಅವರು ಪ್ರಥಮ ಚಿಕಿತ್ಸೆಯನ್ನು ಮಾಡಿ ಇಂಜೆಕ್ಷನ್ ನೀಡಿದ್ದಾರೆ.

ಸ್ಥಳೀಯರು ಸೇರಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತಿ ಕಸ ವಿಲೇವಾರಿ ಘಟಕದಲ್ಲಿ ಹೋರಿಗೆ ಆಶ್ರಯ ಕಲ್ಪಿಸಿದ್ದಾರೆ. ಅಕ್ರಮವಾಗಿ ಕಸಾಯಿಕಾನೆಗೆ ಹೋರಿಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ವಾಹನದಿಂದ ಬಿದ್ದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ರಕ್ಷಣಾ ಕಾರ್ಯದಲ್ಲಿ ವಿಶ್ವ ಹಿಂಧೂ ಪರಿಷತಿನ ಅಧ್ಯಕ್ಷರು ಅಶೋಕ್ ಆಚಾರ್ಯ, ಕಾರ್ಯದರ್ಶಿ ಲಕ್ಷೀಶ್, ಭಜರಂಗದಳ ಸಾಯೋಜಕ ಮಹೇಶ್, ಗೋವು ರಕ್ಷಕ ಪ್ರಮುಖ ಜೀವನ್, ಪ್ರಖಂಡ ಸಾಯೋಜಕ ವಿಗ್ನೇಶ್ ಸುಳ್ಯ, ಹರೀಶ್ ಮನಿರಾಜ್, ಅಶ್ವಥ್, ಕಾರ್ತಿಕ್ ರಾವ್ ಮತ್ತಿತರರು ಪಾಲ್ಗೊಂಡಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.