ಮರ್ಕಂಜ : ಫೋನ್ ನೆಟ್ ವರ್ಕ್ ಸಮಸ್ಯೆ ಹಿನ್ನೆಲೆ

Advt_Headding_Middle

 

 

‘SEND EMAIL TO PM’ ಪತ್ರ ಚಳುವಳಿಗೆ ಚಾಲನೆ

ರೆಂಜಾಳ ಶಾಸ್ತಾವು ಯುವಕ‌ ಮಂಡಲದಿಂದ ಆಯೋಜನೆ

ಮರ್ಕಂಜದಲ್ಲಿ ಫೋನ್ ನೆಟ್ ವರ್ಕ್ ಸಮಸ್ಯೆ ಹಿನ್ನೆಲೆಯಲ್ಲಿ ‘SEND EMAIL TO PM’ ಪತ್ರ ಚಳುವಳಿಗೆ ಚಾಲನೆಯು ಇಂದು ಸಂಜೆ ರೆಂಜಾಳ ದೇವಸ್ಥಾನದ ವಿನಾಯಕ‌ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮ ಅಧ್ಯಕ್ಷ ತೆಯನ್ನು ಶಾಸ್ತಾವು ಯುವಕ ಮಂಡಲದ ಅಧ್ಯಕ್ಷ ಮನೋಹರ ರೈ ಹೈದಂಗೂರು ವಹಿಸಿದ್ದರು. ಕಾರ್ಯಕ್ರಮ ರೂಪುರೇಷೆಗಳ ಬಗ್ಗೆ ಮಾತನಾಡಿದ ಮರ್ಕಂಜ ಗ್ರಾಮ ಪಂಚಾಯತ್ ಸದಸ್ಯ ಚಿತ್ತರಂಜನ್ ಕೋಡಿಯವರು ನೆಟ್ ವಕ್೯ ಸಮಸ್ಯೆಯಿಂದ ಸಾಕಷ್ಟು ನೊಂದಿದ್ದೇವೆ.‌ ವಿದ್ಯಾರ್ಥಿಗಳು, ಪಡಿತರ ಪಡೆಯಲು, ದೂರವಾಣಿ ಸಂಪರ್ಕ ಸಾಧಿಸಲು, ವಕ್೯ ಫ್ರಮ್ ಹೋಮ್ ಮಾಡುವ ಉದ್ಯೋಗಸ್ಥರು, ಬೆಳೆ ಸಮೀಕ್ಷೆ ಮಾಡಲು ಹೀಗೆ ಆನ್ ಲೈನ್ ಮೂಲಕ ಮಾಡುವ ಯಾವುದೇ ಕೆಲಸಗಳು ಮರ್ಕಂಜ ಗ್ರಾಮದಲ್ಲಿ ಸಾಧ್ಯವಾಗುತ್ತಿಲ್ಲ.‌ ಅಲ್ಲದೇ ಈ ಸಮಸ್ಯೆ ನಿವಾರಿಸುವಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ನೀಡಿ ಮನವಿ ಮಾಡಿದರೂ ಯಾವುದೇ ಸಕರಾತ್ಮಕ ಸ್ಪಂದನೆ ಸಿಕ್ಕಿರುವುದಿಲ್ಲ.‌ ಹೀಗಾಗಿ ಪ್ರಧಾನ ಮಂತ್ರಿಗಳ ಗಮನ ಸೆಳೆಯಲು ಪತ್ರ ಚಳುವಳಿ ಆರಂಭಿಸಿದ್ದೇವೆ ಎಂದರಲ್ಲದೆ ಆನ್ ಲೈನ್‌ಸಮಸ್ಯೆಗಳ ಬಗ್ಗೆ ವಿವರಗಳನ್ನೊಳಗೊಂಡ ಪತ್ರದಲ್ಲಿ ನೆಟ್ ವಕ್೯ ಸಮಸ್ಯೆ ಬಿಗಾಡಿಯಿಸಿರುವ ಕಾರಣ ಡಿಜಿಟಲ್ ಇಂಡಿಯಾದ ಕಲ್ಪನೆಗಳು ಪ್ರಯೋಜನಕ್ಕೆ ಇಲ್ಲದಂತಾಗಿದೆ. ಹಾಗಾಗಿ ತಕ್ಷಣವೇ ಈ ಸಮಸ್ಯೆ ಸರಿ ಪಡಿಸುವಂತೆ ಒತ್ತಾಯಿಸಲಾಗಿದೆ. ಪತ್ರ ಚಳುವಳಿಯ ಮೂಲಕ ಪ್ರಧಾನ ಮಂತ್ರಿ ಗಳಿಗೆ ಮನವಿಯನ್ನು ಕಳುಹಿಸುವುದರ ಮೂಲಕ ಅವರ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಹೀಗಾಗಿ 10 ದಿನಗಳ ಅವಧಿಯಲ್ಲಿ ಮರ್ಕಂಜ ಗ್ರಾಮದಿಂದ 1000ದಷ್ಟು ಇ ಮೈಲ್ ಕಳುಹಿಸುವ ಬಗ್ಗೆ ನಿರ್ಧರಿಸಿದ್ದೇವೆ. ಹಾಗೂ ಈಗಿರುವ ಟವರ್ ಗಳನ್ನು ಚಾಲನೆ ಮಾಡಲು ತಡ ಮಾಡುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆಯೂ ಪತ್ರದಲ್ಲಿ ತಿಳಿಸಲಾಗಿದೆ ಎಂದು ಅವರು ವಿವರಿಸಿದರು.
ಹಿರಿಯರಾದ ಲಕ್ಷ್ಮೀ ಕಾಂತ್ ದಾಸರಬೈಲು ಪತ್ರ ಚಳುವಳಿಗೆ ಚಾಲನೆ ನೀಡಿದರು.
ರೆಂಜಾಳ ಶಿವಪಂಚಾಕ್ಷರಿ ಭಜನಾ ಮಂಡಳಿ ಅಧ್ಯಕ್ಷ ರಾಜೇಶ್ ರೆಂಜಾಳ ವಂದಿಸಿದರು. ಕಾರ್ಯದರ್ಶಿ ಶಿವರಂಜನ್ ದಾಸರಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವಕ ಮಂಡಲದ ಸದಸ್ಯರು, ವಿದ್ಯಾರ್ಥಿಗಳು, ಊರವರು ಸಭೆಯಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.