ಬಾಳಿಲದಲ್ಲಿ ರಕ್ತಚಂದನ ಪತ್ತೆ

Advt_Headding_Middle

 

 ಇಲಾಖೆಗಳ ಜಂಟಿ ಕಾರ್ಯಾಚರಣೆ
ಇಬ್ಬರ ಬಂಧನ- ಸೊತ್ತು ವಶ

 

ವಲಯ ಅರಣ್ಯ ಇಲಾಖೆ ಪಂಜ ಮತ್ತು ಪೊಲೀಸ್ ಅರಣ್ಯ ಸಂಚಾರಿ ದಳ ಘಟಕ ಚಿಕ್ಕಮಂಗಳೂರು
ಇವರ ಜಂಟಿ ಕಾರ್ಯಾಚರಣೆಯಲ್ಲಿ ಸುಳ್ಯ ತಾಲೂಕಿನ ಬಾಳಿಲದಲ್ಲಿ ರಕ್ತಚಂದನ ಪತ್ತೆ ಹಚ್ಚಿ ಆರೋಪಿಗಳ ಬಂಧಿಸಿರುವ ಘಟನೆ ಸೆ.22 ರಂದು ವರದಿಯಾಗಿದೆ.

ಚಿಕ್ಕಮಂಗಳೂರು ಪೊಲೀಸ್ ಅರಣ್ಯ ಸಂಚಾರಿ ದಳ ಘಟಕಕ್ಕೆ ದೊರೆತ ಖಚಿತ ಮಾಹಿತಿ ಮೇರೆಗೆ ಸೆ.22 ರಂದು ಮುಂಜಾನೆ ಬಾಳಿಲದ ಅಬ್ದುಲ್ ಎಂಬವರ ಮನೆಗೆ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದಾಗ ಮನೆಯ ಕೊಟ್ಟಿಗೆಯಲ್ಲಿ ಅಕ್ರಮವಾಗಿ ಹೂಡಿಟ್ಟ40 ತುಂಡು 260 ಕೆ.ಜಿ.ರಕ್ತ ಚಂದನ ಪತ್ತೆಯಾಗಿದ್ದು ಇಲಾಖೆಯವರು ವಶಪಡಿಸಿ ಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಬಾಳಿಲ ಗ್ರಾಮದ ಬಾಳಿಲ ನಿವಾಸಿ ಅಬ್ದುಲ್ ಮತ್ತು ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಕಟ್ಟತ್ತಾರು ನಿವಾಸಿ ಕೆ ಹಮೀದ್ ಎಂಬವರನ್ನು ವಶಕ್ಕೆ ಪಡೆದಿದ್ದು ಪಂಜ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ಸೆ.22 ರಂದು ಸಂಜೆ ಆರೋಪಿಗಳನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಜಾಮೀನಿನ ಮೇಲೆ ಬಿಡುಗಡೆ ಗೊಂಡಿದ್ದಾರೆ. ಚಿಕ್ಕಮಂಗಳೂರು ಪೊಲೀಸ್ ಅರಣ್ಯ ಸಂಚಾರಿ ದಳದ ಸಬ್ ಇನ್ಸ್ ಪೆಕ್ಟರ್ ಶ್ರೀಮತಿ ಆರ್ ಶೋಭಾ ಸಿಬ್ಬಂದಿಗಳು,ಪಂಜ ಅರಣ್ಯ ಇಲಾಖೆಯ ಎಡಮಂಗಲ ಉಪ ವಲಯ ಅರಣ್ಯಾಧಿಕಾರಿ ಯಶೋಧರ , ಅರಣ್ಯ ರಕ್ಷಕರಾದ ಭರಮಪ್ಪ ಬೆಳಗಲ್ಲು ,ಮನೋಹರ‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಮಂಜುನಾಥ್ ರವರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.