ಶಾಲೆಯ ಆಸ್ತಿಪಾಸ್ತಿಗಳ ರಕ್ಷಣೆ ಶಾಲಾ ಎಸ್ಡಿಎಂಸಿ ಅಧ್ಯಕ್ಷರ ಜವಾಬ್ದಾರಿ

Advt_Headding_Middle

ಸುದರ್ಶನ್ ಅದನ್ನು ಮಾಡಿದ್ದಾರೆ ; ತಾಲಿಬಾನಿ ಪದ ಬಳಸಿಲ್ಲ – ಸ್ಪಷ್ಟನೆ

ಕಳೆದ ಕೆಲವು ದಿನಗಳ ಹಿಂದೆ ಕೋಲ್ಚಾರು ಸರಕಾರಿ ಶಾಲೆಯಲ್ಲಿ ಆಟದ ಮೈದಾನದಲ್ಲಿ ಶಾಲಾ ವಿದ್ಯಾರ್ಥಿಗಳು ಆಟವಾಡುತ್ತಿದ್ದ ವೇಳೆ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಸುದರ್ಶನ್ ಪಾತಿಕಲ್ಲು ರವರು ಒಂದು ವರ್ಗದ ವಿದ್ಯಾರ್ಥಿಗಳನ್ನು ಕುರಿತು ತಾಲಿಬಾನಿಗಳು ಎಂಬ ಪದವನ್ನು ಬಳಸಿದ್ದಾರೆ ಎಂದು ಆರೋಪಿಸಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸುಳ್ಯ ಪೊಲೀಸ್ ಠಾಣೆಗೆ ವಿದ್ಯಾರ್ಥಿಗಳ ಪೋಷಕರು ದೂರನ್ನು ನೀಡಿದ್ದರು. ನಂತರ ನಡೆದ ಬೆಳವಣಿಗೆಗಳಲ್ಲಿ ಘಟನೆಗೆ ಸಂಬಂಧಿಸಿದಂತೆ ಶಾಲಾ ಎಸ್ಡಿಎಂಸಿ ಸದಸ್ಯತನಕ್ಕೆ ಐದು ಮಂದಿ ರಾಜೀನಾಮೆಯನ್ನು ನೀಡಿದ್ದರು. ನಂತರ ಸುಮಾರು 4೦ ಮಂದಿ ವಿದ್ಯಾರ್ಥಿಗಳನ್ನು ಒಂದು ವರ್ಗದ ಪೋಷಕರು ಶಾಲೆಗೆ ಕಳುಹಿಸದೆ ಶಾಲಾ ಎಸ್ಡಿಎಂಸಿ ಅಧ್ಯಕ್ಷರು ರಾಜೀನಾಮೆ ನೀಡಬೇಕೆಂದು ಆಗ್ರಹ ವ್ಯಕ್ತಪಡಿಸುವ ಘಟನೆಗಳು ನಡೆಯುತ್ತಿದೆ ಇದು ಸರಿಯಲ್ಲ. ಶಾಲೆಯ ಆಸ್ತಿಯ ರಕ್ಷಣೆ ಎಸ್.ಡಿ.ಎಂ.ಸಿ. ಅಧ್ಯಕ್ಷರ ಜವಾಬ್ದಾರಿ ಎಂದು ಆಲೆಟ್ಟಿ ಗ್ರಾ.ಪಂ. ಉಪಾಧ್ಯಕ್ಷ ದಿನೇಶ್ ಕಣಕ್ಕೂರು ಹೇಳಿದ್ದಾರೆ.

ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸುದರ್ಶನ್ ಪಾತಿಕಲ್ಲು ರವರು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾಗಿ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಅವರು ಅಧ್ಯಕ್ಷರಾಗಿದ್ದು ಶಾಲೆಯ ಆಸ್ತಿಪಾಸ್ತಿಗಳ ರಕ್ಷಣೆಯ ಜವಾಬ್ದಾರಿ ಅವರ ಮೇಲೆ ಇದ್ದು, ವಿದ್ಯಾರ್ಥಿಗಳು ಆಡುತ್ತಿದ್ದ ಸಂದರ್ಭದಲ್ಲಿ ಗೋಡೆಗಳು ಮತ್ತು ಶಾಲಾ ಕಿಟಕಿಗಳಿಗೆ ಹಾನಿಯಾಗುತಿದ್ದುದನ್ನು ಕಂಡು ಅದನ್ನು ಪ್ರಶ್ನಿಸಿದ್ದಾರೆ ವಿನಹ ಯಾವುದೇ ಕೋಮುಭಾವನೆ ಮೂಡಿಸಲು ಅವರು ಮುಂದಾಗಲಿಲ್ಲ. ವಿನಾಕಾರಣ ಕೆಲವು ರಾಜಕೀಯ ಕಣ್ಣಿಗೆ ಕಾಣದ ಶಕ್ತಿಗಳು ಸುದರ್ಶನ್ ರವರ ಮೇಲೆ ತೇಜೋವಧೆ ನಡೆಸುವ ಹುನ್ನಾರದಿಂದ ಈ ಕೃತ್ಯಗಳಿಗೆ ಮುಂದಾಗಿದೆ ಎಂದು ಅವರು ಹೇಳಿದರು. ಇದಕ್ಕೂ ಮೊದಲು ಸುಳ್ಯದಲ್ಲಿ ಕೋಮು ಸಂಘರ್ಷ ಉಂಟಾಗಿದ್ದಾಗ ಸುದರ್ಶನ್ ರವರ ತಂದೆಯವರು ಕುಂಭಕೋಡು ಮತ್ತು ಕೋಲ್ಚಾರು ಪರಿಸರದಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ಶ್ರಮಿಸಿದವರಾಗಿದ್ದಾರೆ. ಆ ಸಮಯದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗಾಗಿ ಅವರು ಮುಂದಾಗಿದ್ದಾರೆ. ಅಂತಹ ವ್ಯಕ್ತಿಯ ಪುತ್ರ ಇಂದು ಸಮಾಜದಲ್ಲಿ ಕೋಮು ಸಂಘರ್ಷದ ವಿಷಬೀಜವನ್ನು ಬಿತ್ತುತ್ತಿದ್ದಾರೆ ಎಂದು ಅವರ ಮೇಲೆ ಅಪವಾದವನ್ನು ಹೊರಿಸುವುದು ಸರಿಯಾದ ಕ್ರಮವಲ್ಲ ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಶಾಲಾ ಎಸ್ಡಿಎಂಸಿ ಸದಸ್ಯ ಕರುಣಾಕರ್ ಹಾಸ್ಪರೆ ಮಾತನಾಡಿ ಸುದರ್ಶನ್ ರವರು ಮೈದಾನದಲ್ಲಿ ಆಟವಾಡುತ್ತಿದ್ದ ವರನ್ನು ಎಲ್ಲಿಯೂ ತಾಲಿಬಾನಿಗಳು ಎಂದು ಹೇಳಲಿಲ್ಲ. ಶಾಲೆಯ ಸಂರಕ್ಷಣೆ ಎಸ್.ಡಿ.ಎಂ.ಸಿ ಅಧ್ಯಕ್ಷರಿಗೆ ಇದ್ದದ್ದು. ಅನಾವಶ್ಯಕವಾಗಿ ಮಾತನ್ನು ದೊಡ್ಡದು ಮಾಡಿಕೊಂಡು ಕೆಲವರು ಶಾಲೆಗೆ ರಾಜಕೀಯ ಸುಳಿವನ್ನು ತಂದಿರುವುದು ಸರಿಯಲ್ಲ. ಕಳೆದ ಕೆಲವು ದಿನಗಳ ಹಿಂದೆ ಒಂದು ರಾಜಕೀಯ ಮುಖಂಡ ಶಿಕ್ಷಣಕ್ಕೆ ಆದ್ಯತೆ ಮತ್ತು ಒತ್ತನ್ನು ನೀಡುವ ಆರ್ ಎಸ್ ಎಸ್ ಸಂಘಟನೆಯ ಒಬ್ಬ ನೇತಾರರನ್ನು ತಾಲಿಬಾನಿ ಪದ ಬಳಸಿ ಮಾತನಾಡಿದ್ದರು. ಆವಾಗ ಯಾತಕ್ಕಾಗಿ ಅವರ ಮೇಲೆ ಎಫ್ ಐ ಆರ್ ದಾಖಲು ಮಾಡಲಿಲ್ಲ ಎಂದು ಕೇಳಿದರು. ಇಲ್ಲಿ ಆ ರೀತಿಯ ಪದವನ್ನು ಬಳಸದಿದ್ದರೂ ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡಲು ಕೆಲವರು ಈ ಕುತಂತ್ರಗಳನ್ನು ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ನಾವು ಕೂಡ ಸರಿಯಾದ ಕ್ರಮಕ್ಕೆ ಹೋಗಬೇಕಾಗುತ್ತದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿ ಎಚ್ ಪಿ ಮುಖಂಡ ಚಿದಾನಂದ ಕೋಲ್ಚಾರು, ಎಸ್ ಡಿ ಎಂ ಸಿ ಸದಸ್ಯ ಜಗದೀಶ್ ಕೂಳಿಯಡ್ಕ, ಪ್ರದೀಪ್ ಕೊಲ್ಲರಮೂಲೆ, ಸಿದ್ದಾರ್ಥ್ ಕೋಲ್ಚಾರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.