ವಿಧಾನ ಪರಿಷತ್‍ನಲ್ಲಿ ಮಂಡೆಕೋಲು ರಸ್ತೆ ಅವ್ಯವಸ್ಥೆ ಸದಸ್ಯ ಮುನಿರಾಜು ಗೌಡ ಪ್ರಸ್ತಾಪ

Advt_Headding_Middle

 

ರಸ್ತೆ ದುರಸ್ತಿಗೆ ಸರಕಾರದಿಂದ ಸೂಕ್ತ ಅನುದಾನದ ಭರವಸೆ

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಗಡಿ ಭಾಗದ ಕನ್ಯಾನ ಮೂಲಕ ಕಲ್ಲಡ್ಕ- ಪೆರಜ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆ ಅವ್ಯವಸ್ಥೆ ಬಗ್ಗೆ ಗುರುವಾರ ವಿಧಾನ ಪರಿಷತ್‍ನಲ್ಲಿ ಪ್ರಸ್ತಾಪವಾಗಿದ್ದು, ಸೂಕ್ತ ಅನುದಾನದ ಭರವಸೆಯನ್ನು ಸರಕಾರ ನೀಡಿದೆ.

ಬೆಂಗಳೂರು ಮೂಲದ ವಿಧಾನ ಪರಿಷತ್ ಸದಸ್ಯ ಪಿ.ಮುನಿರಾಜು ಗೌಡ ಅವರು ವಿಷಯ ಪ್ರಸ್ತಾಪಿಸಿ, ಮಂಡೆಕೋಲು- ಅಡೂರು ಮುಖ್ಯ ರಸ್ತೆಯಿಂದ ಕೇರಳ ಗಡಿ ಪ್ರದೇಶ ಪರಪ್ಪ, ಅಕ್ಕಪ್ಪಾಡಿ ಪ್ರದೇಶವನ್ನು ಸಂಪರ್ಕಿಸುವ ಕಲ್ಲಡ್ಕ, ಪೆರಜ ಪರಿಸರದ ಸುಮಾರು ಮೂರು ಕಿಲೋ ಮೀಟರ್ ರಸ್ತೆ ಇನ್ನೂ ಕಚ್ಚಾ ರಸ್ತೆಯಾಗಿಯೇ ಉಳಿದುಕೊಂಡಿದೆ. ಮಳೆಗಾಲದಲ್ಲಿ ಈ ಭಾಗದ ಸಂಚಾರ ಸಂಪೂರ್ಣ ಬಂದ್ ಆಗುತ್ತಿದೆ. ವಿದ್ಯಾರ್ಥಿಗಳಿಗೆ, ವೈದ್ಯಕೀಯ ಚಿಕಿತ್ಸೆಗೆ ತೆರಳುವವರಿಗೆ ತೀರಾ ಅನಾನುಕೂಲ ಆಗುತ್ತಿದೆ ಎಂದು ಪರಿಷತ್‍ನ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರು.

ಈ ಭಾಗದಲ್ಲಿ ಎಸ್‍ಸಿ, ಎಸ್‍ಟಿ ಜನಾಂಗದವರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಯಾವುದೇ ಅನುದಾನಗಳು ಈ ಭಾಗದ ರಸ್ತೆಗೆ ಬಳಕೆಯಾಗುತ್ತಿಲ್ಲ ಎಂದು ಹೇಳಿದರು. ಈ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಪ್ರಧಾನಮಂತ್ರಿ ವೆಬ್‍ಪೆÇೀರ್ಟಲ್‍ಗೂ ಊರಿನವರು ಮನವಿ ಮಾಡಲಾಗಿ, ಆ ಬಗ್ಗೆ ಜಿಲ್ಲಾ ಪಂಚಾಯಿತಿ ಮೂಲಕ ರಸ್ತೆ ಕಾಂಕ್ರೀಟಿಕರಣಕ್ಕೆ ಸರ್ವೆ ನಡೆಯಿತೇ ವಿನಃ ಅನುದಾನ ಬಂದಿಲ್ಲ ಎಂದು ಹೇಳಿದರು.

ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಸಚಿವ ಈಶ್ವರಪ್ಪ ಉತ್ತರ ನೀಡಬೇಕಿತ್ತು. ಆದರೆ ಅವರ ಪರವಾಗಿ ಸದನದ ಸಭಾ ನಾಯಕ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಉತ್ತರ ನೀಡಿ, ಈ ಭಾಗದ ಅಭಿವೃದ್ಧಿಗೆ ಆದ್ಯತೆ ನೆಲೆಯಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸಮಸ್ಯೆ ಏನು ?: ಮಂಡೆಕೋಲು ಗ್ರಾಮದ ಗಡಿ ಭಾಗವಾದ ಕಲ್ಲಡ್ಕ- ಪೆರಜ- ಅಕ್ಕಪ್ಪಾಡಿ, ಕಾಯರ್ತೋಡಿ ಪರಿಸರದ ರಸ್ತೆಗಳು ಇನ್ನೂ ಕಚ್ಚಾ ರಸ್ತೆಗಳಾಗಿಯೇ ಉಳಿದುಕೊಮಡಿದೆ. ಈ ಭಾಗದಲ್ಲಿ ಸುಮಾರು 200ಕ್ಕೂ ಅಧಿಕ ಮಂದಿ ಎಸ್‍ಸಿ, ಎಸ್‍ಟಿ ಹಾಗೂ ಇತರ ಹಿಂದುಳಿದ ವರ್ಗದ ಜನಾಂಗದವರು ವಾಸಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ವಿಪರೀತ ಕಾಟದಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆಗಾಲದ ಅವಧಿಯಲ್ಲಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗುವ ಪರಿಸ್ಥಿತಿ ಇದೆ.

ಈ ಬಗ್ಗೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದರೂ ಸಣ್ಣ ಮೊತ್ತದ ಅನುದಾನ ಮಾತ್ರ ಬಿಡುಗಡೆಯಾಗಿ ಸುಮಾರು ಒಂದು ಕಿಲೋ ಮೀಟರ್ ದೂರದ ವರೆಗಿನ ರಸ್ತೆ ಅಭಿವೃದ್ಧಿಯಾಗಿದೆ. ಆದರೆ ಇನ್ನೂ ಸುಮಾರು ನಾಲ್ಕೈದು ಕಿಮೀ ದೂರದ ರಸ್ತೆ ಅಭಿವೃದ್ಧಿ ಕಾಣದೆ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.