ಕೋಲ್ಚಾರು ಶಾಲಾ ಎಸ್ಡಿಎಂಸಿ ಅಧ್ಯಕ್ಷರು ತಾಲಿಬಾನಿ ಪದ ಬಳಸಿರುವುದಕ್ಕೆ ಆಡಿಯೋ ದಾಖಲೆ ಇದೆ

Advt_Headding_Middle

 

ಅಧ್ಯಕ್ಷರು ರಾಜೀನಾಮೆ ನೀಡಲಿ ; ಇಲ್ಲವೋ ನಮ್ಮ ಮಕ್ಕಳ ಟಿಸಿ ಕೊಡಲಿ

ರಾಜೀನಾಮೆ ನೀಡಿರುವ ಎಸ್.ಡಿ.ಎಂ.ಸಿ. ಸದಸ್ಯರು ಮತ್ತು ಪೋಷಕರ ಒತ್ತಾಯ

 


ಕೋಲ್ಚಾರು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರು ತಾಲಿಬಾನಿ ಪದ ಬಳಕೆ ಮಾಡಿರುವುದರಿಂದ ನಮಗೆ ಬೇಸರವಾಗಿದೆ. ಇದರಿಂದಾಗಿ ನಮ್ಮ ಮಕ್ಕಳು ಭಯಗೊಂಡು ಶಾಲೆಗೆ ಹೊರಡುತ್ತಿಲ್ಲ. ತಾಲಿಬಾನಿ ಪದ ಬಳಕೆ ಮಾಡಿರುವ ಎಸ್.ಡಿ.ಎಂ.ಸಿ. ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೋ ನಮ್ಮ ಮಕ್ಕಳ ಟಿಸಿ ನಮಗೆ ಕೊಡಬೇಕು ಎಂದು ಶಾಲೆಯ ಎಸ್.ಡಿ.ಎಂ. ಸಿ. ಗೆ ರಾಜೀನಾಮೆ ನೀಡಿರುವ ಸದಸ್ಯರು ಹಾಗೂ ಪೋಷಕರು ಒತ್ತಾಯ ಮಾಡಿದ್ದಾರೆ.

ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎಸ್.ಡಿ.ಎಂ.ಸಿ
ಸದಸ್ಯ ಅಬ್ದುಲ್ ರವೂಫ್ “ಶಾಲೆಯ ಆವರಣದಲ್ಲಿ ಅದೇ ಶಾಲೆಯ ಮಕ್ಕಳು ಮತ್ತು ಹಿರಿಯ ವಿದ್ಯಾರ್ಥಿಗಳು ಆಟವಾಡುವ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಸುದರ್ಶನ್ ಪಾತಿಕಲ್ಲು ರವರು ತಾಲಿಬಾನಿ ಪದ ಬಳಕೆ ಮಾಡಿ ಅಲ್ಲಿ ಆಟವಾಡುವ ಮಕ್ಕಳಿಗೆ ಬೈದಿದ್ದಾರೆ.‌ ಸೌಹಾರ್ದತೆಯ ಊರಿನಲ್ಲಿ ಈ ರೀತಿಯ ಪದ ಬಳಕೆ ಮಾಡಿದ್ದು ನಮಗೆ ಬೇಸರ ತರಿಸಿದೆ. ಇದರಿಂದಾಗಿ ನಮ್ಮ ಮಕ್ಕಳು ಶಾಲೆಗೆ ಹೋಗಲು ಹಿಂಜರಿಯುತ್ತಿದ್ದಾರೆ. ಘಟನೆಯ ಕುರಿತು ಶಿಕ್ಷಣಾಧಿಕಾರಿ, ಪೋಲೀಸ್ ಇಲಾಖೆಗಳಿಗೂ ದೂರು ನೀಡಿದರೂ ಕ್ರಮಕೈಗ್ಳುವುದಿಲ್ಲ. ಈ ಕುರಿತು ತನಿಖೆ ನಡೆಸಿ ನಮಗೆ ನ್ಯಾಯ ಸಿಗಬೇಕು ಎಂದು ಅವರು ಹೇಳಿದರು.

ಸುಳ್ಯ ನ.ಪಂ. ಸದಸ್ಯ ಉಮ್ಮರ್ ಮಾತನಾಡಿ, ಶಾಲೆಯ ಅಧ್ಯಕ್ಷರು ಈ ರೀತಿಯ ಪದ ಬಳಕೆ ಮಾಡಿರುವುದು ಸರಿಯಲ್ಲ.‌ ಇದರಿಂದ ಕೋಮು ಭಾವನೆ ಕೆರಳಿಸುವ ಸ್ಥಿತಿ ಯಾಗಿದೆ. ಈಗ ತಾಲಿಬಾನಿ ಪದ ಅವರು ಹೇಳಿಯೇ ಇಲ್ಲ ಎಂದು ಹೇಳುತ್ತಿದ್ದಾರೆ. ಅವರು ತಾಲಿಬಾನಿ ಪದ ಬಳಕೆ ಮಾಡಿರುವುದಕ್ಕೆ ನಮ್ಮಲ್ಲಿ ಅಂದಿನ ಘಟನೆ ನಡೆದ ಆಡಿಯೋ ಇದೆ.

ಆದ್ದರಿಂದ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲವೋ ನಮ್ಮ ಮಕ್ಕಳ ಟಿಸಿ ನಮಗೆ ಕೊಡಲಿ. ಆದರೆ ನಾವು ಕಾನೂನು ಹೋರಾಟವನ್ನು ನ್ಯಾಯ ಸಿಗುವ ತನಕ ಮುಂದುವರಿಸುತ್ತೇವೆ. ಸಂಬಂಧಿಸಿದ ಇಲಾಖೆಗಳ ಎದುರು ಧರಣಿ ಕುಳಿತುಕೊಳ್ಳಿತ್ತೇವೆ ಎಂದು ಹೇಳಿದರು.

ನ್ಯಾಯವಾದಿ ಮೂಸಾ ಕುಂಞಿ ಪೈಂಬೆಚ್ಚಾಲು ಮಾತನಾಡಿ, ಕ್ರೀಡೆ ಸೌಹಾರ್ತೆಯ ಸಂಕೇತ. ಅಲ್ಲಿ ಹಿಂದೂ – ಮುಸ್ಲಿಂ ಸಮುದಾಯದ ಮಕ್ಕಳು ಆಟ ಆಡುತ್ತಾರೆ. ಆ ಸಂದರ್ಭದಲ್ಲಿ ಅಧ್ಯಕ್ಷರು ತಾಲಿಬಾನಿ ಪದ ಬಳಕೆ ಮಾಡಿದ್ದಾರೆ. ಇದು ಸರಿಯಲ್ಲ. ನಮಗೆ ನ್ಯಾಯ ಸಿಗಬೇಕು ಅದಕ್ಕಾಗಿ ಹೋರಾಟ ಎಂದು ಹೇಳಿದರು.

 

ಅಬ್ದುಲ್ ರಹಮಾನ್ ಮಾತನಾಡಿ ಕೋಲ್ಚಾರು ಶಾಲೆಗೆ ಒಳ್ಳೆಯ ಹೆಸರಿದೆ. ಆ ರೀತಿಯ ಪದ ಬಳಕೆ ಎಲ್ಲರಿಗೂ ಬೇಸರ ತರಿಸಿದೆ. ಈ ಪದ ಬಳಕೆ ಮಕ್ಕಳ ಮೇಲೂ ಪರಿಣಾಮ ಬೀರಿ ಈಗ ಶಾಲೆಗೆ ಹೋಗುತ್ತಿಲ್ಲ ಎಂದು ಹೇಳಿದರು.

ಅಧ್ಯಕ್ಷರಿಗೆ ಶಾಲೆಯ ಆಸ್ತಿ ಪಾಸ್ತಿ ಕಾಪಾಡುವ ಜವಾಬ್ದಾರಿ ಎಂದು ಪತ್ರಿಕಾಗೋಷ್ಠಿ ಯಲ್ಲಿ ನಿನ್ನೆ ಹೇಳಿದ್ದಾರೆ. ಹಾಗಿದ್ದರೆ ಶಾಲೆಯ ಸ್ವಾಧೀನದಲ್ಲಿದ್ದ ಸ್ಥಳವನ್ನು ಬೇರೆಯವರಿಗೆ ಹೇಗೆ ಬಿಟ್ಟುಕೊಟ್ಟಿರಿ? ಶಾಲೆಯ ಜಾಗ ಪಂಚಾಯತ್ ಸದಸ್ಯರೊಬ್ಬರ ಸ್ವಾಧೀನದಲ್ಲಿದೆ ಅದನ್ನು ಶಾಲೆಯ ಸುಪರ್ದಿಗೆ ಯಾಕೆ ವಶಪಡಿಸಿಕೊಂಡಿಲ್ಲ ಎಂದು ಮಹಮ್ಮದ್ ಕೋಲ್ಚಾರ್ ಪ್ರಶ್ನಿಸಿದರು.

ಎಸ್.ಡಿ.ಎಂ.ಸಿ. ಸದಸ್ಯೆ ಪೌಝಿಯಾ ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.