ಅ.2 ರಂದು‌ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಗಾಂಧಿ ನಡಿಗೆ ಹಾಗೂ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ

Advt_Headding_Middle

ಸುಳ್ಯ ತಾಲೂಕು ಅಂಬೇಡ್ಕರ್ ರಕ್ಷಣಾ ವೇದಿಕೆ ಆಶ್ರಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ಅ.2 ರಂದು ಗಾಂಧಿ ನಡಿಗೆ ಹಾಗೂ ಸೇವಾ ಪ್ರಶಸ್ತಿ -2021 ಪ್ರದಾನ ಸಮಾರಂಭ ಜಾಲ್ಸೂರು ಅಡ್ಕಾರ್ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ವೇದಿಕೆಯ ತಾಲೂಕು ಅಧ್ಯಕ್ಷ ಮೋಹನ್ ಕುಮಾರ್ ಅಡ್ಕಬಳೆ ಹೇಳಿದರು.

ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಿದ ಅವರು, ಅ.2 ರಂದು ಬೆಳಗ್ಗೆ ಅಡ್ಕಾರು ಮಾವಿನಕಟ್ಟೆ ದ್ವಾರದ ಬಳಿಯಿಂದ ಅಡ್ಕಾರು ಅಂಬೇಡ್ಕರ್ ಭವನದವರೆಗೆ ಗಾಂಧಿ ನಡಿಗೆ ನಡೆಯಲಿದೆ. ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆಯವರು ಗಾಂಧಿ ನಡಿಗೆಗೆ ಚಾಲನೆ ನೀಡಲಿದ್ದಾರೆ.

ಅಪರಾಹ್ನ ಸಭಾ ಕಾರ್ಯಕ್ರಮ ನಡೆಯಲಿದ್ದು ಸೇವಾ ಪ್ರಶಸ್ತಿ ಪ್ರದಾನ ನಡೆಯುವುದು. ಸಾರ್ವಜನಿಕ ಸೇವಾ ವಿಭಾಗದಲ್ಲಿ ಸುಳ್ಯ ಕೆ.ಎಸ್.ಆರ್.ಟಿ.ಸಿ. ಡಿಪೋ ವ್ಯವಸ್ಥಾಪಕ ಸುಂದರರಾಜ್, ಶಿಕ್ಷಣ ವಿಭಾಗದಲ್ಲಿ ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹಾದೇವ್, ಆರೋಗ್ಯ ವಿಭಾಗದಲ್ಲಿ ಕ್ಯಾನ್ಸರ್ ತಜ್ಞ ಡಾ.ರಘು, ಸಾಮಾಜಿಕ ವಿಭಾಗದಲ್ಲಿ ಎಂ.ಬಿ. ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಬಿ.ಸದಾಶಿವ, ಪತ್ರಿಕಾ ವಿಭಾಗದಲ್ಲಿ ಸುದ್ದಿ ಬಿಡುಗಡೆ ವರದಿಗಾರ ಹಸೈನಾರ್ ಜಯನಗರ ಹಾಗೂ ಪತ್ರಕರ್ತ ಸತೀಶ್ ಹೊದ್ದೆಟ್ಟಿ ಯವರನ್ನು ಸನ್ಮಾನಿಸಲಾಗುವುದು.

ನಿವೃತ್ತ ಯೋಧ ಅಡ್ಡಂತಡ್ಕ ದೇರಣ್ಣ ಗೌಡ ಸನ್ಮಾನ ನೆರವೇರಿಸುವರು. ಸಮಾರಂಭದಲ್ಲಿ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ, ಜಿಲ್ಲಾ ಕಾರ್ಯದರ್ಶಿ ರಾಜೇಶ್ ಕಜೆ, ತಾಲೂಕು ಸಮಿತಿ ಕಾರ್ಯದರ್ಶಿ ಸಂದೇಶ್ ಕುಮಾರ್ ರಂಗತ್ತಮಲೆ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.