ಅಮರಮುಡ್ನೂರು ಪಂಚಾಯತ್ ಸಾಮಾನ್ಯ ಸಭೆ

Advt_Headding_Middle

ಗಾಂಧಿ ಜಯಂತಿಯಂದು ಘನತ್ಯಾಜ್ಯ ಘಟಕ ಲೋಕಾರ್ಪಣೆ, ಗಾಂಧಿ ನಡಿಗೆ- ಸ್ವಚ್ಚತೆ- ಶ್ರಮದಾನ

ಅಮರಮುಡ್ನೂರು ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷೆ ಪದ್ಮಪ್ರಿಯ ಮೇಲ್ತೋಟ ರವರ ಅಧ್ಯಕ್ಷತೆಯಲ್ಲಿ ಸೆ.24 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು. ವೇದಿಕೆಯಲ್ಲಿ ಉಪಾಧ್ಯಕ್ಷೆ ಶಶಿಕಲಾ ಕೇನಡ್ಕ, ಪಿ.ಡಿ.ಒ ಆಕಾಶ್ ಉಪಸ್ಥಿತರಿದ್ದರು.
ಗತಸಭೆಯ ವರದಿ ಮಂಜೂರಾತಿ ಹಾಗೂ ಜಮಾ ಖರ್ಚಿನ ವಿವರ ಪಿ.ಡಿ.ಒ ತಿಳಿಸಿದರು. 2021-22 ನೇ ಸಾಲಿನ ಸ್ವಂತ ನಿಧಿ ಕ್ರಿಯಾಯೋಜನೆಯ ತಯಾರಿಸುವ ಬಗ್ಗೆ ಸದಸ್ಯರು ಪ್ರಸ್ತಾಪಿಸಿದರು. ನಮೂನೆ 9 ಮತ್ತು 11ಎ,11ಬಿ ಅರ್ಜಿ ಪರಿಶೀಲನೆ ಹಾಗೂ ಕಟ್ಟಡ ರಚನೆಯ ಪರವಾನಿಗೆ ಕುರಿತು ಚರ್ಚಿಸಲಾಯಿತು. ಸಾರ್ವಜನಿಕರಿಂದ ಬಂದ ಅರ್ಜಿ ವಿಲೇವಾರಿ ತ್ವರಿತ ಗತಿಯಲ್ಲಿ ಮಾಡುವಂತೆ ಸದಸ್ಯರು ಸೂಚಿಸಿದರು.


ಘನತ್ಯಾಜ್ಯ ಘಟಕದ ಪೂರ್ಣ ಪ್ರಮಾಣದ ಕೆಲಸ ಈಗಾಗಲೇ ನಡೆಯುತ್ತಿದ್ದು ಅ. 2 ರಂದು ಲೋಕಾರ್ಪಣೆ ಮಾಡುವ ಬಗ್ಗೆ ಪಿಡಿಒ ತಿಳಿಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕರೆಸಿ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ರು. ಅ.2 ರಂದು ಗಾಂಧಿ ಜಯಂತಿ ಆಚರಣೆಯಂದು ಸುದ್ದಿ ಆಶಯದಂತೆ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಪ್ರತಿಜ್ಞಾ ಸ್ವೀಕಾರ, ಘೋಷಣೆಯೊಂದಿಗೆ ಗಾಂಧಿ ನಡಿಗೆ ಹಾಗೂ ಸ್ವಚ್ಚತಾ ಕಾರ್ಯ ಮತ್ತು ಶ್ರಮದಾನ, ಘನತ್ಯಾಜ್ಯ ಘಟಕ ಲೋಕಾರ್ಪಣೆ ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಈ ಸಂದರ್ಭ ಪಂಚಾಯತ್ ಸಿಬ್ಬಂದಿಯವರ ಜವಾಬ್ದಾರಿ ಹಂಚಿಕೆಯನ್ನು ಸಭೆಯಲ್ಲಿ ಮಂಡಿಸಲಾಯಿತು. ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.