ದುಗಲಡ್ಕ ಅಂಗನವಾಡಿಯಲ್ಲಿ ಪೋಷಣ ಅಭಿಯಾನ ಹಾಗೂ ಪೌಷ್ಟಿಕ ಆಹಾರ ಸಪ್ತಾಹ

Advt_Headding_Middle

 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ದುಗಲಡ್ಕ ಅಂಗನವಾಡಿ ಕೇಂದ್ರ ,ಶ್ರೀ ಶಕ್ತಿ ಸಂಘಗಳು ದುಗಲಡ್ಕ ಇದರ ಜಂಟಿ ಆಶ್ರಯದಲ್ಲಿ ಪೋಷಣ ಅಭಿಯಾನ ಹಾಗೂ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ನಡೆಯಿತು .ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ಮುಖ್ಯ ಶಿಕ್ಷಕರಾದ ಮಾಧವ . ಎಮ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ನಯನ ಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪೌಷ್ಟಿಕ ಸಪ್ತಾಹ ಬಗ್ಗೆ ದುಗಲಡ್ಕ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಸುಬ್ರಹ್ಮಣ್ಯ ಎ. ಯು ಮಾಹಿತಿಯನ್ನು ನೀಡಿದರು . ಬಾಲ ವಿಕಾಸ ಸಮಿತಿ ಸದಸ್ಯರಾದ ಯತೀಶ್ ರೈ ದುಗಲಡ್ಕ ಹಾಗೂ ಶ್ರೀಮತಿ ಯಶೋದ ಮೊಡೆಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ಪೌಷ್ಟಿಕ ಯುಕ್ತ ಆಹಾರ, ವಿವಿಧ ನವದಾನ್ಯಗಳು, ಸೊಪ್ಪು ತರಕಾರಿಗಳಿಂದ ತಯಾರಿಸಿದ ಸುಮಾರು 30 ಬಗೆಯ ಆಹಾರವನ್ನು ತಯಾರಿಸಿ ತರಲಾಗಿತ್ತು. ಹಾಗೂ ಉತ್ತಮ ಪೌಷ್ಟಿಕ ಆಹಾರಕ್ಕೆ ಬಹುಮಾನವನ್ನು ವಿತರಿಸಲಾಗಿತ್ತು. ಪ್ರಥಮ ಸ್ಥಾನವನ್ನು ಶ್ರೀಮತಿ ಶಿವರಂಜಿನಿ , ದ್ವಿತೀಯ ಸ್ಥಾನವನ್ನು ಶ್ರೀಮತಿ ರೇಖಾ, ತೃತೀಯ ಸ್ಥಾನವನ್ನು ಶ್ರೀಮತಿ ಲಲಿತಾ ರಮೇಶ್ ನೀರಬಿದಿರೆ ಹಾಗೂ ಶ್ರೀಮತಿ ನಯನ ಶೇಖರ್ ಬಹುಮಾನವನ್ನು ಪಡೆದುಕೊಂಡರು,. ದುಗಲಡ್ಕ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಚಿತ್ರಾ. ಕೆ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಂಗನವಾಡಿ ಸಹಾಯಕಿ ಶ್ರೀಮತಿ ಶಾರದಾ ಇವರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.