ಜಯನಗರ : 19 ನೇ ವಾರ್ಡ್ ಮುಖ್ಯರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಆರಂಭ

Advt_Headding_Middle

 

ಜಯನಗರ 19 ನೇ ವಾರ್ಡ್ ಕಾಮತ್ ರವರ ಅಂಗಡಿ ಬಳಿಯಿಂದ ನಿಸರ್ಗ ಇಂಡಸ್ಟ್ರೀಸ್ ನ ವರೆಗೆ 20 ಲಕ್ಷ ರೂಪಾಯಿಗಳ ಅನುದಾನದಲ್ಲಿ ರಸ್ತೆ ಕಾಂಕ್ರೀಟಿಕರಣಗೊಳ್ಳಲಿದ್ದು ಇದರ ಕಾಮಗಾರಿ ಇಂದು ಆರಂಭಗೊಂಡಿತು.
ಕಾಮಗಾರಿಯ ಬಗ್ಗೆ ವಿವರ ನೀಡಿದ ಸ್ಥಳೀಯ ನ.ಪಂ. ಸದಸ್ಯೆ ಶಿಲ್ಪಾ ಸುದೇವ್ ಕಾಮತ್ ರವರ ಅಂಗಡಿಯ ಬಳಿ ರಸ್ತೆ ತಗ್ಗು ಇದ್ದು ಮಳೆಗಾಲದ ಸಂದರ್ಭದಲ್ಲಿ ನೀರುಗಳು ನಿಂತು ರಸ್ತೆ ಗುಂಡಿ ನಿರ್ಮಾಣವಾಗುತ್ತಿತ್ತು. ಪ್ರತಿ ಬಾರಿ ಈ ಭಾಗದ ಜನತೆಗೆ ಇದರಿಂದ ತುಂಬಾ ತೊಂದರೆಯಾಗುತ್ತಿತ್ತು. ಆದ್ದರಿಂದ ಇದರ ಬಗ್ಗೆ ನಮ್ಮ ಶಾಸಕರಾದ ಅಂಗಾರ ರವರ ಬಳಿ ವಿನಂತಿ ಮಾಡಿದ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 20 ಲಕ್ಷ ರೂಪಾಯಿಗಳ ಅನುದಾನವನ್ನು ತರಿಸಿ ರಸ್ತೆ ಅಭಿವೃದ್ಧಿಪಡಿಸಲು ಸಹಕಾರ ನೀಡಿದ್ದಾರೆ. ಮಳೆಗಾಲ ಇದ್ದ ಕಾರಣ ಮಳೆ ಕಡಿಮೆಯಾಗಲು ಕಾಯುತ್ತಿದ್ದೆವು ಇದೀಗ ಕಾಮಗಾರಿ ಆರಂಭ ಗೊಳಿಸಿದ್ದೇವೆ.ಆದಷ್ಟು ಶೀಘ್ರದಲ್ಲಿ ಮುಗಿಸಿ ಕೊಡಲಾಗುತ್ತದೆ ಎಂದು ಹೇಳಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.