ಮುರುಳ್ಯದ ಶ್ರೀರಾಮಾಂಜನೇಯ ಭಜನಾ ಮಂದಿರದಲ್ಲಿ ಪಂಡಿತ್ ದೀನ ದಯಾಳ್ ರವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಹಿಂದಿನ ಜನಸಂಘದ ಪ್ರಮುಖ ಕಾರ್ಯಕರ್ತ ಲಿಂಗಪ್ಪ ಅಲೇಕಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬೆಳ್ಳಾರೆ ಬಿಜಿಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಸಂತ ನಡುಬೈಲು, ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯೆ ಭಾಗೀರಥಿ ಮುರುಳ್ಯ, ಮುರುಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿ ಮುರುಳ್ಯ, ಮುರುಳ್ಯ ಎಣ್ಮೂರು ಸೊಸೈಟಿ ಅಧ್ಯಕ್ಷ ವಸಂತ ಹುದೇರಿ, ಅನೂಪ್ ಬಿಳಿಮಲೆ, ಮೋನಪ್ಪ ಅಲೇಕಿ, ಕರುಣಾಕರ ಹುದೇರಿ, ಶೇಖರ ಸಾಲಿಯಾನ್ ಅಲೇಕಿ ಹಾಗೂ ಬಿಜೆಪಿ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.