ಬಾಂಜಿಕೋಡಿ ಅಂಗನವಾಡಿಯಲ್ಲಿ ಪೋಷಣ್ ಮಾಸಾಚರಣೆ ಮತ್ತು ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ

Advt_Headding_Middle

 

 

ಬಾಂಜಿಕೋಡಿ ಅಂಗನವಾಡಿಯಲ್ಲಿ ಪೋಷಣ್ ಮಾಸಾಚರಣೆ ಮತ್ತು ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಸೆಪ್ಟೆಂಬರ್ 24ರಂದು ನಡೆಯಿತು.
ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ರಾಜೀವಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ದೇವಿಕುಮಾರಿ ಮತ್ತು ಶಿವಶಾಂತಿ ಪಾಲೆಪ್ಪಾಡಿ ಇದ್ದರು.


ಬಾಂಜಿಕೋಡಿ ಅಂಗನವಾಡಿ ಶಿಕ್ಷಕಿ ಜಯಶೀಲ ಸಹಾಯಕಿ ಕುಮಾರಿ, ಮಕ್ಕಳ ಪೋಷಕರು, ಗರ್ಭಿಣಿಯರು, ಬಾಣಂತಿಯರು ಕಾರ್ಯಕ್ರಮದಲ್ಲಿದ್ದರು. ಗಿಡ ನೆಡುವ ಕಾರ್ಯಕ್ರಮ, ಸ್ವಚ್ಚತಾ ಕಾರ್ಯಕ್ರಮ, ಮತ್ತು ಮಕ್ಕಳ ತೂಕ ಎತ್ತರ ನೋಡುವುದು, ಪೌಷ್ಟಿಕ ಆಹಾರ ತಯಾರಿಸಿ ತಂದವರಿಗೆ ಪ್ರಥಮ ದ್ವಿತೀಯ ಹಾಗೂ ಸಮಾಧಾನಕರ ಬಹುಮಾನಗಳಾಗಿ ಪೌಷ್ಠಿಕ ಗಿಡಗಳನ್ನು ನೀಡಲಾಯಿತು. ಪೋಷಣೆ ಮಾಸಾಚರಣೆಯ ಮಾಹಿತಿಯನ್ನು ನೀಡಲಾಯಿತು. ಸ್ತ್ರೀಶಕ್ತಿ ಯೋಜನಾ ಸಂಘದ ಸದಸ್ಯೆ ಮಮತಾ ಪ್ರಾರ್ಥಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.